ಪಿಕೆಪಿಎಸ್ ಅಧ್ಯಕ್ಷರಾಗಿ ಪ್ರವೀಣ ಪಾಟೀಲ, ಉಪಾಧ್ಯಕ್ಷರಾಗಿ ಲಕ್ಷ್ಮಣ ಶಿರೋಳ ಅವಿರೋಧ ಆಯ್ಕೆ
Praveen Patil elected unopposed as PKPS President, Lakshman Shiro as Vice President
ಮಹಾಲಿಂಗಪುರ : ಸಮೀಪದ ಬೆಳಗಲಿ ಪಟ್ಟಣದ ಎರಡನೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ಪ್ರವೀಣ ಪಾಟೀಲ ಹಾಗೂ ಉಪಾಧ್ಯಕ್ಷರಾಗಿ ಲಕ್ಷ್ಮಣ ಶಿರೋಳ ರವಿವಾರದಂದು ಪಟ್ಟಣದ ಹಿರಿಯರ ಸಮ್ಮುಖದಲ್ಲಿ ಆವಿರೋಧವಾಗಿ ಆಯ್ಕೆಯಾದರು.
ಈ ಸಂದರ್ಭದಲ್ಲಿ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಅಬಕಾರಿ ಸಚಿವರಾದ ಆರ್ ಬಿ ತಿಮ್ಮಾಪುರ ನೂತನ ಅಧ್ಯಕ್ಷನಾದ ಪ್ರವೀಣ ಪಾಟೀಲ ಗೆ ಸನ್ಮಾನಿಸಿ ಅಭಿನಂದಿಸಿದರು. ಮುಧೋಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದುಗೌಡ ಪಾಟೀಲ, ಲೋಕಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕಿವಡಿ ವಕೀಲರು,ಡಾ. ಶಿವಾನಂದ ಉದಪುಡಿ, ಸಂಗಪ್ಪ ಅಮಾತಿ, ಈರ್ಪ ಕಿತ್ತೂರ,ಮುಬಾರಕ ಅತ್ತಾರ,ನೀಲಕಂಠ ಸೈದಾಪುರ ಇನ್ನತರರು ಹಾಜರಿದ್ದರು ಅ.23ರಂದು ನಡೆದ ಪದಾಧಿಕಾರಿಗಳ ಆಯ್ಕೆ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಪ್ರವೀಣ ಪಾಟೀಲ, ಭೀಮನಗೌಡ ಪಾಟೀಲ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಲಕ್ಷ್ಮಣ ಶಿರೋಳ ನಾಮಪತ್ರ ಸಲ್ಲಿಸಿದರು.
ಆದರೆ ಯಾವುದೇ ಸದಸ್ಯರು ಸಭೆಗೆ ಹಾಜರಾಗದ ಕಾರಣ ಕೋರಂ ಆಗಿರಲಿಲ್ಲ. ಅಂದು ಮುಂದುಡಿದ್ದ ಚುನಾವಣೆಯನ್ನು ಅ.30ರಂದು ನಡೆಸಿದಾಗಲೂ ಎರಡು ಗುಂಪುಗಳ ಮಧ್ಯೆ ಘರ್ಷಣೆ ಉಂಟಾಗಿ ರದ್ದುಗೊಂಡಿದ್ದು, ನ16ರಂದು ನಡೆಸಲು ನಿರ್ಧರಿಸಲಾಗಿತ್ತು. ಸಂಘದ ಕಾರ್ಯಾಲಯದಲ್ಲಿ ಭಾನುವಾರ ನಡೆದ ಪದಾಧಿಕಾರಿಗಳ ಆಯ್ಕೆ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಭೀಮನಗೌಡ ಪಾಟೀಲ ನಾಮಪತ್ರ ಹಿಂಪಡೆದರು. ಚುನಾವಣಾಧಿಕಾರಿ ಪಿ ವಿ ಜಮಾದಾರ ಕಾರ್ಯನಿರ್ವಹಿಸಿ ನೂತನ ಆಡಳಿತ ಮಂಡಳಿಗೆ ಅಭಿನಂದಿಸಿದರು.
ನಿರ್ದೇಶಕರಾಗಿ ಭೀಮನಗೌಡ ಶಿವನಗೌಡ ಪಾಟೀಲ, ರಂಗಪ್ಪ ಲಕ್ಷ್ಮಣ ಒಂಟಗೊಂಡಿ, ರಾಮನಗೌಡ ಬಸನಗೌಡ ಪಾಟೀಲ,ಮಂಜು ಅಲ್ಲಪ್ಪ ಮುಗಳಖೋಡ, ಪಾಂಡು ಹಣಮಂತ ಸೈದಾಪೂರ, ಸುಮಿತಾ ಪರುಶರಾಮ ಕುಡಚಿ, ಲಕ್ಷ್ಮೀ ಸೋಮಲಿಂಗಪ್ಪ ದಂಡಿನ, ಹರಳಯ್ಯ ಕಲ್ಲಪ್ಪ ಮಲಾವಡಿ, ಜಗದೀಶ ಯಂಕಪ್ಪ ಮಾಳಗಿ, ಭೀಮರಾವ ಸದಾಶಿವ ಕಾಳವ್ವಗೋಳ ಆಯ್ಕೆಯಾಗಿದ್ದಾರೆ.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 