ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಸ್ಪೂತರ್ಿದಾಯಕ: ಶಿರೂರ

ಧಾರವಾಡ: ಸಕರ್ಾರವು ಚುನಾಯಿತ ಪ್ರತಿನಿಧಿಗಳಿಗೆ ನೀಡುವ ಗೌರವಧನವನ್ನು ಕಳೆದ ಸುಮಾರು 12 ವರ್ಷಗಳಿಂದ ಪ್ರತಿಭಾವಂತ ವಿದ್ಯಾಥರ್ಿಗಳಿಗೆ ವಿತರಿಸುತ್ತಿರುವ ಜಿಲ್ಲಾ ಪಂಚಾಯತ್ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ನಿಂಗಪ್ಪ ಘಾಟಿನ ಅವರ ಕಾರ್ಯ ಶ್ಲಾಘನೀಯವಾದುದು. ಇಂತಹ ಕಾರ್ಯಕ್ರಮಗಳು ಉಳಿದ ವಿದ್ಯಾಥರ್ಿಗಳಿಗೆ ಸ್ಪೂತರ್ಿದಾಯಕವಾಗಲಿವೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಚೈತ್ರಾ ಶಿರೂರ ಹೇಳಿದರು. 

ಕಲಕೇರಿಯ ಸಕರ್ಾರಿ ಪ್ರೌಢಶಾಲೆ ಆವರಣದಲ್ಲಿಂದು ಏರ್ಪಡಿಸಲಾಗಿದ್ದ ಎಸ್ಎಸ್ಎಲ್ಸಿ ಯಲ್ಲಿ ಶೇ. 80 ಕ್ಕೂ ಅಧಿಕ ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾಥರ್ಿಗಳಿಗೆ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. 

ಎಲ್ಲ ಪಾಲಕರಿಗೂ ತಮ್ಮ ಮಕ್ಕಳು ಉತ್ತಮ ಸಾಧನೆ ಮಾಡಿ ಎತ್ತರಕ್ಕೇರಬೇಕು ಎಂಬ ಆಸೆಯಿರುತ್ತದೆ. ಆದರೆ ಮಕ್ಕಳನ್ನು ರೂಪಿಸುವ ಮಹತ್ವದ ಜವಾಬ್ದಾರಿ ಒಟ್ಟು ಸಮಾಜದ ಮೇಲಿರುತ್ತದೆ. ಮಕ್ಕಳಿಗೆ ಆದರ್ಶಗಳು ನಿತ್ಯ ಕಾಣಸಿಗಬೇಕು. ಜಿಲ್ಲಾ ಪಂಚಾಯತ್ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ನಿಂಗಪ್ಪ ಘಾಟಿನ ಅವರು 2005 ರಿಂದ ಇಲ್ಲಿಯವರೆಗೆ ಅವರು ಗ್ರಾಮಪಂಚಾಯತ್ ಸದಸ್ಯರಾಗಿ ಎರಡು ಅವಧಿಗಳಿಗೆ ಹಾಗೂ ಜಿಲ್ಲಾ ಪಂಚಾಯತ್ ಸದಸ್ಯರಾಗಿ ಪಡೆಯುತ್ತಿರುವ ಗೌರವ ಧನವನ್ನು ಪ್ರತಿವರ್ಷ ತಮ್ಮ ಕ್ಷೇತ್ರದ ಪ್ರತಿಭಾವಂತ ವಿದ್ಯಾಥರ್ಿಗಳಿಗೆ ವಿತರಿಸುತ್ತಿರುವುದು ಮಾದರಿಯ ಕೆಲಸವಾಗಿದೆ ಎಂದರು. 

ಜಿಲ್ಲಾ ಪಂಚಾಯತ್ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ನಿಂಗಪ್ಪ ಘಾಟಿನ ಮಾತನಾಡಿ, ನನಗೆ ವೈಯಕ್ತಿಕವಾಗಿ ಶಾಲೆಗೆ ಹೋಗಿ ಶಿಕ್ಷಿತನಾಗಬೇಕೆಂಬ ಅದಮ್ಯ ಆಸೆ ಇತ್ತು. ಆದರೆ ಮನೆ, ಕೃಷಿ, ಮತ್ತಿತರ ಜವಾಬ್ದಾರಿಗಳಿಂದ 4ನೇ ತರಗತಿಗೆ ಶಾಲೆ ಬಿಡಬೇಕಾಯಿತು. ಆಗ ಶಿಕ್ಷಕರು ಮನೆಗೆ ಬಂದು ನನ್ನನ್ನು ಶಾಲೆಗೆ ಮರಳಿ ಕಳುಹಿಸಬೇಕು ಎಂದು ನಮ್ಮ ಪಾಲಕರಿಗೆ ಕೇಳಿದರೂ ಸಹ ಅನಿವಾರ್ಯ ಕಾರಣಗಳಿಂದ ಸಾಂಪ್ರದಾಯಿಕ ಶಿಕ್ಷಣ ಮುಂದುವರೆಸಲು ನನಗೆ ಸಾಧ್ಯವಾಗಲಿಲ್ಲ. ಶಾಲೆ ಕಲಿಯುವ ಆಸೆ ಕಡಿಮೆಯಾಗಲಿಲ್ಲ. ನನಗಿಂತ ಕಿರಿಯ ಸಹೋದರ, ಸಹೋದರಿಯರು ಶಾಲೆಯಿಂದ ಬಂದ ಬಳಿಕ ಅವರಿಂದ ಪಾಠ ಕಲಿತುಕೊಂಡು ನೇರವಾಗಿ 7ನೇ ತರಗತಿ ಪಬ್ಲಿಕ್ ಪರೀಕ್ಷೆ ಉತ್ತೀರ್ಣನಾದೆ. ಆಗಿನಿಂದಲೂ ನಮ್ಮ ಭಾಗದಲ್ಲಿ ಶೈಕ್ಷಣಿಕ ಜಾಗೃತಿ ಇನ್ನಷ್ಟು ಆಗಬೇಕು ಎಂಬ ಆಸೆಯಿಂದ ಶ್ರಮಿಸುತ್ತಿದ್ದೇನೆ. ಈ ಹಿಂದೆ ಎರಡು ಅವಧಿಗೆ ಗ್ರಾಮ ಪಂಚಾಯಿತಿ ಸದಸ್ಯನಾಗಿ, ಅಧ್ಯಕ್ಷನಾಗಿ ಈಗ ಜಿಲ್ಲಾ ಪಂಚಾಯತ್ ಸದಸ್ಯನಾಗಿ ನನಗೆ ದೊರೆಯುತ್ತಿರುವ ಗೌರವ ಧನವನ್ನು ಪ್ರತಿಭಾವಂತ ಮಕ್ಕಳಿಗಾಗಿ ಬಳಸುತ್ತಿದ್ದೇನೆ. ಈ ಬಾರಿ ಎಸ್ಎಸ್ಎಲ್ಸಿ ಯಲ್ಲಿ ಶೇ. 80 ಕ್ಕೂ ಅಧಿಕ ಅಂಕ ಗಳಿಸಿದ ಕಲಕೇರಿ, ಬೆಣಚಿ ಹಾಗೂ ದೇವರಹುಬ್ಬಳ್ಳಿ ಗ್ರಾಮಗಳ ಸಕರ್ಾರಿ ಪ್ರೌಢಶಾಲೆಗಳ 60 ವಿದ್ಯಾಥರ್ಿಗಳಿಗೆ ತಲಾ ರೂ.1,000/- ಪ್ರತಿಭಾ ಪುರಸ್ಕಾರ ನೀಡುತ್ತಿದ್ದೇನೆ ಎಂದರು. 

ಜಿಲ್ಲಾ ಪಂಚಾಯತಿಯ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಕಲ್ಲಪ್ಪ ಪುಡಕಲಕಟ್ಟಿ ಮಾತನಾಡಿ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮಗಳು ಮುಂದಿನ ತರಗತಿಯ ವಿದ್ಯಾಥರ್ಿಗಳಿಗೆ ಪ್ರೇರಣೆಯಾಗಲಿವೆ. ನಿಂಗಪ್ಪ ಘಾಟಿನ ಅವರ ನಿಸ್ವಾರ್ಥ ಮನಸ್ಸು ಇಂತಹ ಮಹತ್ವದ ಕಾರ್ಯ ನಡೆಯಲು ಕಾರಣವಾಗಿದೆ ಎಂದರು. ಕಲಕೇರಿ, ಬೆಣಚಿ ಹಾಗೂ ದೇವರಹುಬ್ಬಳ್ಳಿ ಗ್ರಾಮಗಳ 60 ಪ್ರತಿಭಾವಂತ ವಿದ್ಯಾಥರ್ಿಗಳಿಗೆ ತಲಾ ರೂ.1,000/- ಗಳು ನಗದು, ಸ್ಮರಣಿಕೆ ನೀಡಿ, ಶಾಲು ಹೊದಿಸಿ ಸತ್ಕರಿಸಲಾಯಿತು. 

ಕಲಕೇರಿ ಗ್ರಾಮಪಂಚಾಯತ ಅಧ್ಯಕ್ಷ ಸುಗಂಧ ಕುಸುಂಬಿ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಶಿವಾನಂದ ಕರಿಗಾರ, ಸದಸ್ಯರಾದ ನಾಗನಗೌಡ ಪಾಟೀಲ, ಚನ್ನಬಸಪ್ಪ ಮಟ್ಟಿ, ವಿದ್ಯಾ ಭಾವನವರ, ಕರಿಯಪ್ಪ ಮಾದರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಡಾ.ಬಿ.ಸಿ. ಸತೀಶ್, ಉಪಕಾರ್ಯದಶರ್ಿ ಎಸ್.ಜಿ. ಕೊರವರ, ತಾಲ್ಲೂಕು ಪಂಚಾಯತ್ ಸದಸ್ಯೆ ಅಕ್ಕವ್ವ ಮಾರುತಿ ಭಾಂಗಡಿ, ಎಪಿಎಂಸಿ ಉಪಾಧ್ಯಕ್ಷ ರಾಯಪ್ಪ ಹುಡೇದ, ಡಿಡಿಪಿಐ ಎಸ್.ಆರ್. ಮುಳ್ಳೂರ, ಬಿಇಓ ವಿದ್ಯಾ ನಾಡಿಗೇರ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 

ಕಲಕೇರಿಯ ಸಂಗೀತ ಶಾಲೆಯ ವಿದ್ಯಾಥರ್ಿಗಳು ಪ್ರಾಥರ್ಿಸಿದರು. ಸಕರ್ಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ವಿಜಯಲಕ್ಷ್ಮಿ ಪಾಟೀಲ ನಿರೂಪಿಸಿದರು.