ಪ್ರತಿಭಾ ಕಾರಂಜಿ ರಾಜ್ಯ ಮಟ್ಟಕ್ಕೆ ಆಯ್ಕೆ
ಇಂಡಿ 10: ಮಾನಸ ಗಂಗೋತ್ರಿ ಶಾಲೆಯಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಖವ್ವಾಲಿ ಸ್ಪರ್ದೆ ವಿಭಾಗದಲ್ಲಿ ಇಂಡಿ ತಾಲ್ಲೂಕಿನ ಲಚ್ಯಾಣ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಮಕ್ಕಳು ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಈ ಸ್ಪರ್ಧೆಯಲ್ಲಿ ಲಕ್ಷ್ಮಿ ಬನಸೋಡೆ, ಶ್ರುತಿ ದಶವಂತ, ಸೋನಾಲಿ ಗುರವ್, ಭವಾನಿ ಬಿಸೆ, ಕುಮಾರ್ ರಾಮಪ್ರಸಾದ್ ತೆಳಗಿನಮನಿ,ವಿದ್ಯಾಧರ ಭಂಡಾರಿ, ನಿಖಿಲ್ ಭಜಂತ್ರಿ, ಭಾಗವಹಿಸಿದ್ದರು.ಇವರಿಗೆ ಗುರುಗಳಾದ ಮುರಳೀಧರ ಭಜಂತ್ರಿ ಶಿಕ್ಷಕರು ಮಾರ್ಗದರ್ಶನ ನೀಡಿದರು. ಈ ವಿದ್ಯಾರ್ಥಿಗಳಿಗೆ ಸಾಧನೆಗೆ ಎಸ್‌ಡಿಎಂಸಿ ಅಧ್ಯಕ್ಷ ಈರಣ್ಣ ಕರಲ್ಲೆ, ಉಪಾಧ್ಯಕ್ಷರು ಮತ್ತು ಸರ್ವಸದಸ್ಯರು ಹಾಗೂ ಮುಖ್ಯಗುರುಗಳಾದ ಬಿ ಎಲ್ ಪಾಟೀಲ ಮತ್ತು ಸಹ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗ ಸಂತಸ ವ್ಯಕ್ತಪಡಿಸಿದ್ದಾರೆ.