ಹಾರೋಬೆಳವಡಿಯಲ್ಲಿ ಪ್ರೌಢ ಶಾಲಾ ಮಕ್ಕಳ ವೈವಿಧ್ಯಮಯ ಚಟುವಟಿಕೆಗಳ ಪ್ರದರ್ಶನ
ಲೋಕದರ್ಶನ ವರದಿ
ಧಾರವಾಡ 31: ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಮಕ್ಕಳಿಗಾಗಿ ಸಂಘಟಿಸುವ ಪ್ರತಿಭಾ ಕಾರಂಜಿ ಸ್ಪಧರ್ೆಗಳು ವಿದ್ಯಾಥರ್ಿಗಳಲ್ಲಿ ಹುದುಗಿರುವ ಅನೇಕ ವಿಧದ ಪ್ರತಿಭೆಗಳನ್ನು ಹೊರಹಾಕಲು ಸೂಕ್ತವಾದ ವೇದಿಕೆಯಾಗಿದೆ ಎಂದು ಕಿತ್ತೂರು ಚೆನ್ನಮ್ಮ ಸೌಹಾರ್ದ ಸಹಕಾರಿ ಬ್ಯಾಂಕಿನ ಇನಾಂಹೊಂಗಲ ಶಾಖೆಯ ಆಡಳಿತ ಮಂಡಳಿಯ ಉಪಾಧ್ಯಕ್ಷ ರಾಮಣ್ಣ ಜಕ್ಕಣ್ಣವರ ಹೇಳಿದರು
ಅವರು ಸಮೀಪದ ತಾಲೂಕಿನ ಹಾರೋಬೆಳವಡಿ ಗ್ರಾಮದ ಹಿರಿಯ ಪ್ರಾಥಮಿಕ ಕನ್ನಡ ಸರಕಾರಿ ಪಾಠಶಾಲೆಯಲ್ಲಿ ಹಮ್ಮಿಕೊಂಡಿದ್ದ ಪ್ರೌಢ ಶಾಲಾ ವಿದ್ಯಾಥರ್ಿಗಳ ಪ್ರಸಕ್ತ ಸಾಲಿನ ಅಮ್ಮಿನಬಾವಿ ಕ್ಲಸ್ಟ್ರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪಧರ್ೆಗಳನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಪ್ರಾಥಮಿಕ ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷ ಈರನಗೌಡ ಕಲ್ಲನಗೌಡರ ಅಧ್ಯಕ್ಷತೆವಹಿಸಿದ್ದರು. ಅಮ್ಮಿನಬಾವಿ ಸಮೂಹ ಸಂಪನ್ಮೂಲ ವ್ಯಕ್ತಿ ಎಸ್.ಎನ್. ಸಾವಳಗಿ ಪ್ರತಿಭಾ ಕಾರಂಜಿ ಸ್ಪಧರ್ೆಗಳ ಮಹತ್ವ ಕುರಿತು ಮಾತನಾಡಿದರು. ಕನರ್ಾಟಕ ರಕ್ಷಣಾ ವೇದಿಕೆಯ ರಾಯಪ್ಪ ಸೊಗಲದ, ಹಾರೋಬೆಳವಡಿ ಗ್ರಾಮ ಪಂಚಾಯತಿಯ ಸದಸ್ಯರು, ಅಮ್ಮಿನಬಾವಿ ಕ್ಲಸ್ಟರ್ ಭಾಗದ ಎಲ್ಲ ಪ್ರೌಢ ಶಾಲೆಗಳ ಅಧ್ಯಾಪಕರು ಇದ್ದರು.
ಹಾರೋಬೆಳವಡಿ ಹಿರಿಯ ಪ್ರಾಥಮಿಕ ಕನ್ನಡ ಸರಕಾರಿ ಪಾಠಶಾಲೆಯ ಮುಖ್ಯಾಧ್ಯಾಪಕಿ ರೇಣುಕಾ ಹೆಗಡಿ ಸ್ವಾಗತಿಸಿದರು. ಶಿಕ್ಷಕಿ ಆರ್.ಜಿ. ಬಣಕಾರ ನಿರೂಪಿಸಿದರು. ಅಧ್ಯಾಪಕ ಐ. ಬಿ. ದೇಸಾಯಿ ವಂದಿಸಿದರು.
ಸ್ಪಧರ್ೆಗಳ ಫಲಿತಾಂಶ : ಭರತನಾಟ್ಯ : ಸಿ.ಎಂ ಚಂದರಗಿ (ಅಮ್ಮಿನಬಾವಿ), ಭಾವಗೀತೆ : ಮಧು ಅಮರಗೋಳ (ಮರೇವಾಡ), ಜಾನಪದ ಗೀತ ಗಾಯನ : ಕುಮಾರಿ ಎ.ಎಂ. ಮಾಳಗಿ (ಅಮ್ಮಿನಬಾವಿ), ಸಂಸ್ಕೃತ ಧಾಮರ್ಿಕ ಶ್ಲೋಕ ಪಠಣ : ಅನುಪಮಾ ಅಣ್ಣಿಗೇರಿ (ಅಮ್ಮಿನಬಾವಿ), ಹಿಂದಿಯಲ್ಲಿ ಭಾಷಣ : ಐಶ್ವರ್ಯ ತೋಟಣ್ಣವರ (ಮರೇವಾಡ), ಇಂಗ್ಲೀಷ್ ಭಾಷಣ : ಮುಕಾರಿ ಎಸ್.ವ್ಹಿ. ಹಂಚಿನಾಳ (ಅಮ್ಮಿನಬಾವಿ), ಕನ್ನಡ ಭಾಷಣ : ಕುಮಾರಿ ಎಸ್.ಎಸ್. ರಾಗೂನವರ (ಅಮ್ಮಿನಭಾವಿ), ಛದ್ಮವೇಷ : ಮಲ್ಲಿಕಾಜರ್ುನ ಹೆಬ್ಬಾಳ (ಮರೇವಾಡ), ಆಶುಭಾಷಣ : ಕುಮಾರಿ ಎಸ್.ವೈ. ಕರಡಿಗುಡ್ಡ (ಅಮ್ಮಿನಭಾವಿ), ಮಿಮಿಕ್ರಿ : ಅಭಿಷೇಕ ಲಿಗಾಡಿ (ಕವಲಗೇರಿ), ಚಚರ್ಾಸ್ಪಧರ್ೆ: ಕುಮಾರಿ ಎಸ್.ಎಸ್. ದೊಡವಾಡ (ಅಮ್ಮಿನಬಾವಿ), ರಂಗೋಲಿ : ಆರ್.ಬಿ. ಬಂಡಿವಡ್ಡರ (ಅಮ್ಮಿನಬಾವಿ), ಸಮೂಹ ನೃತ್ಯ : ಬಸವರಾಜ ತಳವಾರ ಹಾಗೂ ಸಂಗಡಿಗರು (ಮರೇವಾಡ), ಸಮೂಹ ಗೀತ ಗಾಯನ : ಎಸ್.ಎಂ. ಮುದಕಪ್ಪನವರ ಹಾಗೂ ಸಂಗಡಿಗರು (ಅಮ್ಮಿನಬಾವಿ), ನಾಟಕ : ಮಹಾದೇವ ಕೆಂ[ಪಣ್ಣವರ ಹಾಗೂ ತಂಡ (ಮರೇವಾಡ), ದೃಶ್ಯಕಲೆ : ಶ್ವೇತಾ ಅಮರಗೋಳ ಹಾಗೂ ತಂಡ (ಮರೇವಾಡ)