ಪ್ರಶಾಂತ ಚವ್ಹಾಣ ನಿಧನ
ರಾಣೇಬೆನ್ನೂರು 03: ಇಲ್ಲಿನ ವಿನಾಯಕ ನಗರದ ನಿವಾಸಿ, ಹರಿಹರದ ಗಿರಿಯಮ್ಮ ಕಾಲೇಜಿನ ನೌಕರ ಪ್ರಶಾಂತ ವ. ಚವ್ಹಾಣ(36) ಅವರು ರವಿವಾರ ಮುಂಜಾನೆ ತೀವ್ರ ಹೃದಯಾಘಾತದಿಂದ ನಿಧನ ಹೊಂದಿದರು.ಮೃತರು, ಪತ್ನಿ, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಮೃತ ಪ್ರಶಾಂತ ಅವರು, ನಿವೃತ್ತ ಮುಖ್ಯ ಶಿಕ್ಷಕ ವಿ. ಎಲ್.ಚವ್ಹಾಣ ಮತ್ತು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಅನುಸೂಯಾ ರಾಠೋಡ ಅವರ ಪುತ್ರರಲ್ಲೊಬ್ಬರಾಗಿದ್ದಾರೆ. ಮೃತರ ಅಂತಿಮ ಕ್ರಿಯೆ ಇಲ್ಲಿನ ಮುಕ್ತಿ ಧಾಮದಲ್ಲಿ ಇಂದು ಸಂಜೆ ಅಪಾರ ಜನ ಸಮುದಾಯದ ಮಧ್ಯೆ ನೆರವೇರಿಸಲಾಯಿತು.