ಸಕ ಾರ್ರದ ವಿರುದ್ಧ ಪ್ರಣವಾನಂದ ಶ್ರೀಗಳ ಆಕ್ರೋಶ: ಏಪ್ರಿಲ್ 6ಕ್ಕೆ ಸಚಿವ ಶಿವರಾಜ್ ತಂಗಡಗಿ ಮನೆ ಮುತ್ತಿಗೆ

ಸಕ ಾರ್ರದ ವಿರುದ್ಧ ಪ್ರಣವಾನಂದ ಶ್ರೀಗಳ ಆಕ್ರೋಶ: ಏಪ್ರಿಲ್ 6ಕ್ಕೆ ಸಚಿವ ಶಿವರಾಜ್ ತಂಗಡಗಿ ಮನೆ ಮುತ್ತಿಗೆ Pranavananda's outcry against the government: Minister Shivraj Thangadgi's house besieged on April

ಕೊಪ್ಪಳ 12 : ಈಡಿಗ ಸಮುದಾಯದ ನ್ಯಾಯಸಮ್ಮತ ಬೇಡಿಕೆಗಳನ್ನು ಈಡೇರಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿರುವ ಈಡಿಗ ಸಮಾಜದ ಗುರುಗಳಾದ ಶ್ರೀ ಪ್ರಣವಾನಂದ ಸ್ವಾಮೀಜಿ, ಏಪ್ರಿಲ್ 6ರಂದು ಕೊಪ್ಪಳ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಅವರ ಮನೆಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ.ಅವರು ಗುರುವಾರದನ್ನು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಶ್ರೀಗಳು, ಈಡಿಗ ಜನಾಂಗದ ಹಕ್ಕೊತ್ತಾಯಗಳಿಗಾಗಿ ಗುಲ್ಬರ್ಗಾದ ಚಿತ್ತಾಪುರದಿಂದ ಬೆಂಗಳೂರಿನವರೆಗೆ ಸುಮಾರು 708 ಕಿಲೋಮೀಟರ್ ನಡೆಸಿದ ಸುದೀರ್ಘ ಪಾದಯಾತ್ರೆಗೆ ಈ ಸರ್ಕಾರ ಕಿಂಚಿತ್ತೂ ಗೌರವ ನೀಡಲಿಲ್ಲ ಎಂದು ವಿಷಾದಿಸಿದರು.

"ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಧರಣಿ ನಡೆಸಿದಾಗ ಸರ್ಕಾರ ಮಾತು ಕೊಟ್ಟಿತ್ತು. ಆದರೆ, ಮಧ್ಯಸ್ಥಿಕೆ ವಹಿಸಿದ್ದ ಸಚಿವ ಶಿವರಾಜ್ ತಂಗಡಗಿ ಅವರು ಕೊಟ್ಟ ಮಾತನ್ನು ಉಳಿಸಿಕೊಳ್ಳದೆ ವಚನ ಭ್ರಷ್ಟರಾಗಿದ್ದಾರೆ. ಇದರ ಪ್ರತಿಫಲವಾಗಿ ಏಪ್ರಿಲ್ 6ರಂದು ಕೊಪ್ಪಳದ ಅವರ ನಿವಾಸ ಹಾಗೂ ಬೆಂಗಳೂರಿನ ಆರಿ​‍್ಟ. ನಗರದಲ್ಲಿರುವ ಅವರ ಮನೆಗೆ ಏಕಕಾಲದಲ್ಲಿ ಮುತ್ತಿಗೆ ಹಾಕಲಾಗುವುದು," ಎಂದು ಘೋಷಿಸಿದರು.ಸಚಿವ ಮಧು ಬಂಗಾರ​‍್ಪ ವಿರುದ್ಧ ಕಿಡಿ: ’ಕುಲದ್ರೋಹಿ’ ಪಟ್ಟಸಮುದಾಯದ ಶಾಸಕರು ಮತ್ತು ಸಚಿವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಶ್ರೀಗಳು,ಸರ್ಕಾರದೊಳಗಿರುವ ಸಮುದಾಯದ ಪ್ರತಿನಿಧಿಗಳೇ ಜನಾಂಗಕ್ಕೆ ಬೆನ್ನಿಗೆ ಬಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆರೋಪ : ಸಚಿವ ಮಧು ಬಂಗಾರ​‍್ಪ ಅವರೇ ಈ ಹೋರಾಟ ಹತ್ತಿಕ್ಕಲು ಪ್ರಮುಖ ಕಾರಣ.ಪಾದಯಾತ್ರೆ ಯಶಸ್ವಿಯಾಗಬಾರದು ಮತ್ತು ಯಾವುದೇ ಬೇಡಿಕೆಗಳು ಈಡೇರಬಾರದು ಎಂದು ಅವರು ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಿದ್ದಾರೆ, ಸಮುದಾಯದ ಏಳು ಜನ ಪ್ರತಿನಿಧಿಗಳು ಸರ್ಕಾರದಲ್ಲಿದ್ದರೂ ಬಡ ಈಡಿಗರ ಪರ ಧ್ವನಿ ಎತ್ತುತ್ತಿಲ್ಲ. ಇವರೆಲ್ಲರೂ ’ಕುಲದ್ರೋಹಿಗಳು’ ಎಂದು ಸ್ವಾಮೀಜಿ ಆಕ್ರೋಶ ಹೊರಹಾಕಿದರು.ಸೇಂದಿ ಮಾರಾಟ ಪುನರ್ ಸ್ಥಾಪನೆಗೆ ಒತ್ತಾಯಈಡಿಗ ಸಮುದಾಯದ ಕುಲಕಸುಬಾದ ಸೇಂದಿ ಮಾರಾಟವನ್ನು ನಿಷೇಧಿಸಿದ್ದರಿಂದ ಸಾವಿರಾರು ಕುಟುಂಬಗಳು ಬೀದಿಗೆ ಬಿದ್ದಿವೆ.

ಮದ್ಯ ಮಾಫಿಯಾ ಹಾವಳಿ: ಇಂದಿನ ಸರ್ಕಾರ ಮದ್ಯ ಮಾಫಿಯಾದ ಲಾಬಿಗೆ ಮಣಿದಿದೆ. ಇದರಿಂದಾಗಿ ಬಡ ಈಡಿಗರ ಬದುಕನ್ನು ಕಸಿದುಕೊಳ್ಳಲಾಗಿದೆ.ಸಿದ್ದರಾಮಯ್ಯ ವಿರುದ್ಧ ಟೀಕೆ : ಈ ಹಿಂದೆ ಸಿದ್ದರಾಮಯ್ಯನವರು ಅಬಕಾರಿ ಸಚಿವರಾಗಿದ್ದ ಕಾಲದಲ್ಲೇ ಸೇಂದಿ ನಿಷೇಧಿಸಿ ಈಡಿಗ ಸಮುದಾಯವನ್ನು ತುಳಿಯುವ ಕೆಲಸ ಆರಂಭಿಸಿದರು. ಸಮುದಾಯದ ನಾಯಕರು ಮುಂದೆ ಬರದಂತೆ ತಡೆದರು.ಪರ್ಯಾಯ ವ್ಯವಸ್ಥೆಯ ಕೊರತೆ: ಯಾವುದೇ ಚರ್ಚೆ ನಡೆಸದೆ ಅಥವಾ ಪರ್ಯಾಯ ಉದ್ಯೋಗ ನೀಡದೆ ಏಕಾಏಕಿ ನಿಷೇಧ ಹೇರಿದ್ದರಿಂದ ಜನಾಂಗಕ್ಕೆ ಅನ್ಯಾಯವಾಗಿದೆ. ತಕ್ಷಣವೇ ಸೇಂದಿ ಮಾರಾಟವನ್ನು ಮರುಸ್ಥಾಪಿಸಬೇಕು ಎಂದು ಅವರು ಆಗ್ರಹಿಸಿದರು.

ಹೋರಾಟದ ಮುಂದಿನ ಹಾದಿ "ನಮ್ಮ ಜನಾಂಗದ ಉಳಿವಿಗಾಗಿ ಮತ್ತು ಹಕ್ಕುಗಳಿಗಾಗಿ ನಿರಂತರ ಹೋರಾಟ ಅನಿವಾರ್ಯವಾಗಿದೆ. ನಾವು ಯಾರಿಗೂ ಹೆದರುವುದಿಲ್ಲ, ಹೋರಾಟದ ಮೂಲಕವೇ ನಮ್ಮ ಹಕ್ಕನ್ನು ಪಡೆಯುತ್ತೇವೆ," ಎಂದು ಶ್ರೀಗಳು ಸವಾಲು ಹಾಕಿದರು. ಸಮಾಜದ ಬಡ ಜನರ ಹಿತದೃಷ್ಟಿಯಿಂದ ಈ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವುದಾಗಿ  ತಿಳಿಸಿದರುಸುದ್ದಿಗೋಷ್ಠಿಯಲ್ಲಿ ರಾಷ್ಟ್ರೀಯ ಈಡಿಗ ಮಹಾಮಂಡಳಿಯ ಕೊಪ್ಪಳ ಜಿಲ್ಲಾ ಅಧ್ಯಕ್ಷರಾದ ರಾಜಪ್ಪ ಇಳಿಗೇರ,

ಈಡಿಗ ಸಂಘದ ಜಿಲ್ಲಾ ಅಧ್ಯಕ್ಷರಾದ ಕಾಶಿನಾಥ್ ಬಿಚ್ಚಾಲಿ, ಗಂಗಾವತಿ ತಾಲೂಕ ಅಧ್ಯಕ್ಷರಾದ ಬಸವರಾಜ ಗುತ್ತೇದಾರ್, ಕೊಪ್ಪಳ ಈಡಿಗ ಸಂಘದ ಕಾರ್ಯದರ್ಶಿ ಎ, ವಿ ರವಿ ಧಣಿ, ವಿಜಯನಗರ ಈಡಿಗ ಮಹಾಮಂಡಳಿ ಅಧ್ಯಕ್ಷರಾದ ಅಂಬುಜಾಕ್ಷಿ, ಕೊಪ್ಪಳ ತಾಲೂಕ ಅಧ್ಯಕ್ಷರಾದ ಹನುಮಂತಪ್ಪ ಭೀಮನೂರು ಯಲಬುರ್ಗಾ ತಾಲೂಕ ಅಧ್ಯಕ್ಷರಾದ ನಾಗರಾಜ್ ಇಳಿಗೆರ್, ಸಮಾಜದ ಗಣ್ಯರಾದ ಆನಂದ ಬಾಬು ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.