ಗ್ರಾಮೀಣ ಸಿಪಿಐ ರಂಗಪ್ಪ ದೊಡ್ಡಮನಿ ಬಗ್ಗೆ ಶ್ಲಾಘನೆ
ಗಂಗಾವತಿ 16: ಗ್ರಾಮೀಣ ಭಾಗದ ಸಿಪಿಐ ಆಗಿ ರಂಗಪ್ಪ ದೊಡ್ಡಮನಿ ಅವರು ಅಧಿಕಾರ ಸ್ವೀಕರಿಸಿದ ನಂತರ ಅವರು ಇಲ್ಲಿನ ಗ್ರಾಮೀಣ ಭಾಗದಲ್ಲಿ ಆಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಮತ್ತು ಶಾಂತಿ ಸೌಹಾರ್ದತೆಗಾಗಿ ಗ್ರಾಮೀಣ ಭಾಗದಲ್ಲಿ ಈಗಾಗಲೇ ಕಾರ್ಯ ಪ್ರಾರಂಭಿಸಿದ್ದು, ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಒಟ್ಟು 4ಕಡೆ ಮೊದಲನೆಯದು ಕಡೆಬಾಗಿಲು ಚೆಕ್ ಪೋಸ್ಟ್, ಎರಡನೆಯದು ಸಣಾಪುರ ಚೆಕ್ ಪೋಸ್ಟ್, ಮೂರನೆಯದು ಕಿಷ್ಕಿಂದ ಕ್ರಾಸ್, ನಾಲ್ಕನೆಯದು ಸಾಣಾಪುರ ಕೆರೆ ಹತ್ತಿರ ಹೀಗೆ ಕಡೆ ನಾಲ್ಕು ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.
ಏಕೆಂದರೆ ಇತ್ತೀಚೆಗೆ ಗ್ರಾಮೀಣ ಭಾಗದಲ್ಲಿ ಅಪರಾಧಗಳ ಸಂಖ್ಯೆ ಹೆಚ್ಚಾಗ ತೊಡಗಿದ್ದು ಮತ್ತು ಇತ್ತೀಚಿಗೆ ಹೈದರಾಬಾದ್ ಮೂಲದ ಮಹಿಳಾ ವೈದ್ಯ ಒಬ್ಬರು ಈಜಲು ಹೋಗಿ ಪ್ರಾಣ ಕಳೆದುಕೊಂಡರು ಹಾಗೇನೆ ಇಸ್ರೇಲ್ ಪ್ರಜೆ, ಮಹಿಳೆಯಗೆ ಕಿರಿಕಿರಿ ಉಂಟಾಗಿ ನಂತರ ಸ್ಥಳೀಯ ಸ್ವದೇಶಿ ಮತ್ತು ವಿದೇಶಿ ಮಹಿಳೆಯರಿಗೆ ಅತ್ಯಾಚಾರದ ಘಟನೆ ನಡೆಯಿತು ಹಾಗೂ ಒರಿಸ್ಸಾ ಮೂಲದ ಬಿಬಾಸ್ ಈತನನ್ನು ಕಾಲುವೆ ನೋಕಿ, ಕೊಲೆ ಮಾಡಿದ್ದು ಇಂತಹ ಅಪರಾಧಗಳನ್ನು ತಡೆಯಲು ಮುನ್ನೆಚ್ಚರಿಕೆ ಕ್ರಮವಾಗಿ ದಿಟ್ಟ ಹೆಜ್ಜೆಯೊಂದಿಗೆ ಇಂತಹ ಗುರುತರವಾದ ಸಿಸಿ ಕ್ಯಾಮೆರಾ ಗಳನ್ನು ಅಲ್ಲಲ್ಲಿ ಅಳವಡಿಸುವುದರ ಜವಾಬ್ದಾರಿಯನ್ನು ಇದೇ ಮೊದಲ ಬಾರಿಗೆ ಗ್ರಾಮೀಣ ಸಿಪಿಐ ರಂಗಪ್ಪ ದೊಡ್ಡಮನಿ ಪ್ರಾರಂಭಿಸಿದ್ದಾರೆ, ಇವರ ಬಗ್ಗೆ ಸಾರ್ವಜನಿಕ ವಲಯದಲ್ಲಿ ಉತ್ತಮ ಸೇವೆ ನೀಡಬಲ್ಲರು ಎಂಬ ಭರವಸೆ ಯೊಂದಿಗೆ ಮಾತನಾಡುತ್ತಿದ್ದಾರೆ.
ಗ್ರಾಮೀಣ ಭಾಗದ ಎಲ್ಲರ ಸಹಕಾರದ ಜೊತೆಗೆ ಇಲಾಖೆಯ ನಿಯಮಗಳನ್ನು ಅನುಷ್ಠಾನ ಮಾಡಲಾಗುತ್ತದೆ ಎಂದು ಮಾಧ್ಯಮದೊಂದಿಗೆ ಮಾತನಾಡಿದರು.ಪೊಲೀಸ್ ಇಲಾಖೆಯ ಮತ್ತು ಶೋಷಿತ ಜನರಿಗೆ ಕಾನೂನಾತ್ಮಕ ವಾಗಿ ನ್ಯಾಯ ಒದಗಿಸುವಂತಹ ಪ್ರಾಮಾಣಿಕ ಕಾರ್ಯ ಮಾಡುತ್ತೇನೆ. ಮೇಲಾಧಿಕಾರಿಗಳ ಆದೇಶದಂತೆ ಅಕ್ರಮ ಚಟುವಟಿಕೆಗಳನ್ನು ತಡೆದು ಪ್ರತಿಯೊಬ್ಬರು ಶಾಂತಿ ಕಾನೂನು ಸುವ್ಯವಸ್ಥೆ ಅಡಿಯಲ್ಲಿ ಜೀವನ ನಡೆಸುವ ವಾತಾವರಣ ನಿರ್ಮಿಸಲಾಗುತ್ತದೆ ಎಂದರು.