ಹಾಲು ಒಕ್ಕೂಟದ ವ್ಯವಸ್ಥಾಪರಾಗಿ ಪ್ರಭುಶಂಕರ ಚಾರ್ಜ್
ಬಳ್ಳಾರಿ 01: ಇಲ್ಲಿನ ರಾಯಚೂರು, ಬಳ್ಳಾರಿ, ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಗಳ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರನ್ನು ಬದಲಾವಣೆ ಮಾಡಲಾಗಿದೆ.ಈ ಮೊದಲು ಪೀರಾ್ಯನಾಯ್ಕ ಅವರು ಕಾರ್ಯನಿರ್ವಹಿಸುತ್ತಿದ್ದರು. ಇಲ್ಲಿ ಚುನಾಯಿತ ಆಡಳಿತ ಮಂಡಳಿ ಅಸ್ತಿತ್ವದಲ್ಲಿ ಇಲ್ಲದ ಕಾರಣ ಯಾವುದೇ ಮಹತ್ವದ ನಿರ್ಣಯಗಳನ್ನು ತೆಗೆದುಕೊಳ್ಳಲು ಆಗುತ್ತಿಲ್ಲ. ಆದರೂ ಕೆಲ ವಿಚಯಗಳಿಗೆ ಟೆಂಡರ್ ಕರೆಯಬೇಕೆಂಬ ಒತ್ತಡಕ್ಕೆ ಮಣಿಯದ ಕಾರಣ ವರ್ಗಾವಣೆ ಮಾಡಿಸಿದ್ದಾರೆ ಎಂದು ಹೇಳಲಾಗುತ್ತಿದೆ.ಈಗ ಇವರ ಜಾಗಕ್ಕೆ ಪ್ರಭುಶಂಕರ್ ಅವರು ಬಂದು ಚಾರ್ಜ್ ತೆಗೆದುಕೊಂಡಿದ್ದಾರೆ. ನಷ್ಟದಲ್ಲಿರುವ ಈ ಒಕ್ಕೂಟವನ್ನು ಇವರು ಹೇಗೆ ಮುನ್ನಡೆಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.