ಅಧಿಕಾರ ಮತ್ತು ದುಡ್ಡು ಶಾಶ್ವತವಲ್ಲ ಜನಸೇವೆ ಶಾಶ್ವತ : ಪಠಾಣ
ಶಿಗ್ಗಾವಿ 10: ಅಧಿಕಾರ ಮತ್ತು ದುಡ್ಡು ಶಾಶ್ವತವಲ್ಲ ನಾವು ಏನು ಜನ ಸೇವೆ ಮಾಡುತ್ತೇವೆ ಅದು ಶಾಶ್ವತ ಎಂದು ಶಾಸಕ ಯಾಸೀರ ಅಹ್ಮದಖಾನ ಪಠಾಣ ಹೇಳಿದರು. ಪಟ್ಟಣದ ವಿರಕ್ತಮಠದಲ್ಲಿ 32ನೇ ಶರಣ ಸಂಸ್ಕೃತಿ ಉತ್ಸವ-2025 ರ ಅಂಗವಾಗಿ ನಡೆದ ಧರ್ಮಸಮಾರಂಭದಲ್ಲಿ ಮಾತನಾಡಿದ ಅವರು ಬಸವಣ್ಣ ಶ್ರೂದ್ದರ ಪರವಾಗಿ ಹೋರಾಡಿದವರು, ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಎಂಬುದು ಅನುಭವ ಮಂಟಪದ ಧ್ಯೇಯವಾಗಿತ್ತು ಬಸವಣ್ಣ ಮತ್ತು ಅಂಬೇಡ್ಕರ್ ಅವರ ವ್ಯಕ್ತಿತ್ವ, ಆದರ್ಶ, ಗುಣಗಾನಗಳು ಹೊಂದಾಗಿದ್ದವು, ದೈವ ನಿರ್ಣಯವಾದ ಮೇಲೆ ನಾವು ಯಾರು ಏನು ಮಾಡಲಿಕ್ಕೆ ಆಗುವುದಿಲ್ಲ ಅದನ್ನೆಲ್ಲ ಮಾಡಿಸುವನು ಪರಮಾತ್ಮ ಎಂದರು.
ಪಾವನ ಸಾನಿಧ್ಯವಹಿಸಿ ಶಿವಾನಂದ ಬ್ರಹನ್ಮಠ ಗದಗ ಸದಾಶಿವಾನಂದ ಭಾರತೀ ಮಹಾಸ್ವಾಮಿಗಳು ಆರ್ಶಿವದಿಸಿ ಭಾರತ ದೇಶದಾದ್ಯಂತ ಶಿವಶರಣ ವಚನಗಳು ಸಮಾಜದಲ್ಲಿನ ಅಂಕು, ಡೊಂಕುಗಳನ್ನು ತಿದ್ದುವ ಮೂಲಕ ಸದೃಢ ನಾಡು ನಿರ್ಮಾಣ ಮಾಡುತ್ತಿವೆ. ಆದರೆ ವಚನಗಳು ಹೊರ ನೋಟ ಒಂದಾದರೆ ಒಳ ನೋಟವೆ ಬೇರೆಯಾಗಿದೆ. ಹೀಗಾಗಿ ವಚನಗಳನ್ನು ತಿಳಿದಾಗ ಜ್ಞಾನ ಹೆಚ್ಚಿಸುವ ಜತೆಗೆ ಬದುಕು ಪಾವನವಾಗುತ್ತಿದೆ ಎಂದರು. ಸೀತಾಗಿರಿ ಎ.ಸಿ.ವಾಲಿ ಮಹಾರಾಜರು ಹಾಗೂ ವೇದಮೂರ್ತಿ ಮಹಾಂತೇಶ ಶಾಸ್ತ್ರಿಗಳು ಚನ್ನಗೇರಿ ಪ್ರವಚನ ಮಾಡಿದರು. ವಿರಕ್ತಮಠದ ಸಂಗನಬಸವ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಬಸವ ದೇವರು ಸಾನ್ನಿಧ್ಯ ವಹಿಸಿದ್ದರು. ಸಂಗೀತ ಸೇವೆ ಗದಿಗೆಯ್ಯ ಹಿರೇಮಠ, ತಬಲಾ ಬಸವರಾಜ ಹೂಗಾರ, ಸಿದ್ದಲಿಂಗಪ್ಪ ನರೇಗಲ್ಲ, ವಿವಿಧ ಕ್ಷೇತ್ರದಲ್ಲಿನ ಸಾಧಕರಿಗೆ ಮತ್ತು ದಾನಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಗ್ಯಾರಂಟಿ ಅಧ್ಯಕ್ಷ ಎಸ್.ಎಫ್.ಮಣಕಟ್ಟಿ, ಗುಡ್ಡಪ್ಪ ಜಲದಿ,ಡಾ.ಸಿ.ಎಸ್.ನಿಡಗುಂದಿ, ನಂದೀಶ ಯಲಿಗಾರ, ಉಮೇಶ ಗೌಳಿ, ಮುತ್ತುರಾಜ ಕ್ಷೌರದ, ದಿ.ನಾರಾಯಣ ಬ್ರಹ್ಮಾವರ ಹಾಗೂ ಕುಟುಂಬ, ಮಂಜುನಾಥ ವೇರ್ಣೇಕರ ಸೇರಿದಂತೆ ದೇವಸ್ಥಾನದ ಸೇವಾ ಸಮಿತಿ ಸದಸ್ಯರು ಇದ್ದರು. ನೃತ್ಯ ಶಿಕ್ಷಕಿ ಜಾನ್ಹವಿ ಸಾಯಿಭಾಬಾ ಶಿವನ ರೂಪಕ ನೆರವೇರಿಸಿದರು. ಪ್ರೋ ಶಶಿಕಾಂತ ರಾಠೋಡ ಕಾರ್ಯಕ್ರಮ ನಿರ್ವಹಿಸಿದರು.