ಲೋಕದರ್ಶನವರದಿ
ಬ್ಯಾಡಗಿ02: ಶೇ.45 ರಷ್ಟು ಯುವಕರನ್ನು ಹೊಂದಿರುವ ಭಾರತದಲ್ಲಿ ಬಡತನ ಇನ್ನೂ ಜೀವಂತವಾಗಿರುವುದು ಖೇದದ ಸಂಗತಿ, ಇದಕ್ಕೆ ಪ್ರಮುಖ ಕಾರಣ ಅವರಲ್ಲಿರುವ ನಿಷ್ಕಾಳಜಿ ಮತ್ತು ಆಲಸ್ಯತನ ಕಾರಣ, ಯಾವುದೇ ಕಾರಣಕ್ಕೂ ಯುವಕರು ಸಕರ್ಾರದ ಯೋಜನೆಗಳಿಗೆ ಕೈಚಾಚದೇ ತಮ್ಮ ಬುದ್ಧಿವಂತಿಕೆ ಹಾಗೂ ತೋಳ್ಬಲಗಳಿಂದ ತಮ್ಮ ಕುಟುಂಬಗಳನ್ನು ನಿರ್ವಹಣೆ ಮಾಡಿದರೇ ಸಾಕು, ಅದೇ ದೇಶಕ್ಕೆ ಅವರು ನೀಡುವ ದೊಡ್ಡ ಕೊಡುಗೆಯಾಗಲಿದೆ ಎಂದು ಪ್ರಾಚಾರ್ಯ ಎಂ.ಎಂ.ಪಾಟೀಲ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲೂಕಿನ ಚಿಕ್ಕಬಾಸೂರ ಗ್ರಾಮದ ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ಶಿಬಿರದ ಸಮಾರೋಪ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಅವರು, ದೇಶಕ್ಕೆ ಸಹಾಯ ಮಾಡಲು ಯಾವುದೇ ಅಧಿಕಾರದಲ್ಲಿದ್ದರೇ ಮಾತ್ರ ಸಾಧ್ಯವೆಂಬುದು ಸುಳ್ಳು ಸಕರ್ಾರದ ಪುಕ್ಕಟೆ ಯೋಜೆನಗಳಿಗೆ ಕೈಚಾಚದೇ ತಮ್ಮದೇ ದುಡಿಮೆ ಹಣದ ಮೇಲೆ ನಿಮ್ಮ ಕುಟುಂನಗಳನು ನಿರ್ವಹಣೆ ಮಾಡಿಕೊಳ್ಳುವಂತಾಗಬೇಕು, ಅಂದಾಗ ತಮ್ಮ ಜೊತೆ ದೇಶವೂ ಸಹ ಸ್ವಾವಲಂಬಿಯಾಗಲು ಸಾಧ್ಯವಾಗಲಿದೆ ಎಂದರು.
ಸ್ವಾಭಿಮಾನದ ಪ್ರಶ್ನೆ ಎದುರಾಗಿದೆ: ಶತ್ರು ರಾಷ್ಟ್ರಗಳ ಕುಮ್ಮಕ್ಕಿನಿಂದ ದೇಶದಲ್ಲಿ ಅಭದ್ರತೆ ಎದ್ದು ಕಾಣುತ್ತಿದೆ, ಸ್ವಾತಂತ್ರ್ಯ ಪಡೆದ ಕೇವಲ 7 ದಶಕಗಳಲ್ಲಿ ಮತ್ತೊಮ್ಮ ಗುಲಾಮಗಿರಿ ಅನುಭವಿಸುವಂತಹ ಸನ್ನಿವೇಶ ಇದೀಗ ಕಾಣುತ್ತಿದ್ದು ಭಾರತಕ್ಕೆ ಸ್ವಾಭಿಮಾನದ ಪ್ರಶ್ನೆ ಎದುರಾಗಿದೆ, ಕೇವಲ ಯುವಕರಿಂದ ಮಾತ್ರ ಈ ದೇಶವನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ ಆ ಕಾರಣಕ್ಕಾಗಿ ಯುವಕರು ದೇಶದಲ್ಲಿ ಎದುರಾಗುವ ಎಲ್ಲ ಸನ್ನಿವೇಶಗಳಿಗೂ ಎದೆಕೊಟ್ಟು ನಿಲ್ಲುವುದಕ್ಕೆ ಸನ್ನದ್ಧರಾಗುವಂತೆ ಕರೆ ನೀಡಿದರು.
ವೈಜ್ಞಾನಿಕ ಮನೋಭಾವನೆ ಬೆಳೆಸಿಕೊಳ್ಳಿ: ತಾ.ಪಂ.ಸದಸ್ಯ ಪ್ರಭುಗೌಡ ಪಾಟೀಲ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿರುವ ಮೂಢ ನಂಬಿಕೆಗಳನ್ನು ಹೋಗಲಾಡಿಸಲು ಆರಂಭದಿಂದಲೇ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆ ಬೆಳೆಸಿಕೊಳ್ಳುವುದು ಸೂಕ್ತ, ಸಮಾಜದ ಉನ್ನತಿಗೆ ಪ್ರತಿಯೊಬ್ಬ ವಿದ್ಯಾಥರ್ಿಗಳು ಮೂಢನಂಬಿಕೆ ಬೀರುವಂತಹ ವಿಷಯಗಳಿಂದ ದೂರವಾಗಿವಾದಾಗ ಮಾತ್ರ ಸುಂದರ ಸಮಾಜ ನಿಮರ್ಾಣವಾಗಲು ಸಾಧ್ಯ, ಗ್ರಾಮದಲ್ಲಿ ನೈರ್ಮಲ್ಯ ಯೋಜನೆಗಳನ್ನು ಸಾರ್ವಜನಿಕರಿಗೆ ತಿಳಿಸುವ ಕೆಲಸವಾಗಬೇಕು, ಉತ್ತಮ ಪರಿಸರ ನಿಮರ್ಾಣಕ್ಕಾಗಿ ವಿದ್ಯಾಥರ್ಿದಿಸೆಯಿಂದಲೇ ಆಸಕ್ತಿಯನ್ನು ರೂಪಿಸಿಕೊಳ್ಳುವಂತೆ ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಯೋಜನಾಧಿಕಾರಿ ರಾಮಚಂದ್ರ ಹೆಗಡೆ ಅವರಿಗೆ ಸಾತೇನಹಳ್ಳಿ ಲಿಂಗೈಕ್ಯ ಈಶ್ವರಪ್ಪ ಕರಡೇರ ಪ್ರತಿಷ್ಠಾನ ಮತ್ತು ಬೆಂಗಳೂರ ಕೆ.ಎನ್.ಗ್ರೂಪ್ ಇವರ ಆಶ್ರಯದಲ್ಲಿ ನೀಡಲಾದ ಉತ್ತಮ ಯೋಜನಾಧಿಕಾರಿ ಎಂಬ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಗ್ರಾ.ಪಂ.ಅಧ್ಯಕ್ಷರುಗಳಾದ ಇಬ್ರಾಹಿಂ ಮಜೀದವಾಲೆ, ಸುರೇಶ ಮೆಣಸಿನಹಾಳ, ಗ್ರಾ.ಪಂ. ಸದಸ್ಯರಾದ ಈಶ್ವರಪ್ಪ ದೊಡ್ಮನಿ, ಮಲ್ಲನಗೌಡ ಪಾಟೀಲ, ಉಜ್ಜಯ್ಯ ಕರಿನಾಗಣ್ಣನವರ, ಸಾವಕ್ಕ ಗಾಳೇರ, ಸುಧಾ ಗಾಳೇರ, ಮಹದೇವಯ್ಯ ಮಠದ, ರಾಮು ದೊಡ್ಮನಿ, ಚೇತನ ಬಾಳನಗೌಡ್ರ ಉಪಸ್ಥಿತರಿದ್ದರು. ಚೈತ್ರ ಹೊಸಳ್ಳಿ ಸ್ವಾಗತಿಸಿದರು, ಮೇಘಾ ಗಾಳೇರ ನಿರೂಪಿಸಿದರು, ಗಿರಿಶ ದೊಡ್ಮನಿ ವಂದಿಸಿದರು.