ಶೇಡಬಾಳ 15: ಜಿನಸೇನ ಭಟ್ಟಾರಕ ಭಟ್ಟಾಚಾರ್ಯ ಸಂಸ್ಥಾನಮಠ ನಾಂದಣಿ ಇವರ ಉತ್ತರಾಧಿಕಾರಿಯಾಗಿ ನೇಮಕಗೊಂಡಿರುವ ಪ್ರತೀಕ ಪ್ರಕಾಶ ಸಸಾಲಟ್ಟಿ ಉರ್ಫ ಬಾಲಬ್ರಹ್ಮಚಾರಿ ಸಮ್ಮೇದ ಇವರಿಗೆ ಆಚಾರ್ಯ ದೇವಸೇನ ಮುನಿಮಹಾರಾಜರು "ಜಯದೇವಸೇನ" ಮುನಿಗಳೆಂದು ಹೊಸ ನಾಮಕರಣ ಮಾಡಿ ಕ್ಷುಲ್ಲಕ ಮುನಿದೀಕ್ಷೆ ನೀಡಿದರು.
ಶನಿವಾರ ದಿ. 15ರಂದು ಸಮೀಪದ ಶೇಡಬಾಳ ಗ್ರಾಮದ ಶಾಂತಿಸಾಗರ ದಿಗಂಬರ ಜೈನ ಛಾತ್ರಾಶ್ರಮದಲ್ಲಿ ಜರುಗಿದ ಧಾಮರ್ಿಕ ಕಾರ್ಯಕ್ರಮದಲ್ಲಿ ಕನರ್ಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳಿಂದ ಆಗಮಿಸಿದ ಲಕ್ಷಾಂತರ ಭಕ್ತರ ಉಪಸ್ಥಿತಿಯಲ್ಲಿ ಪ್ರತೀಕ ಪ್ರಕಾಶ ಸಸಾಲಟ್ಟಿ ಉರ್ಫ ಬಾಲಬ್ರಹ್ಮಚಾರಿ ಸಮ್ಮೇದ ಇವರು ಗೃಹಸ್ಥಾಶ್ರಮ ತೊರೆದು ಕ್ಷುಲ್ಲಕ ಮುನಿ ದೀಕ್ಷೆ ಪಡೆದುಕೊಂಡರು. ಕಾರ್ಯಕ್ರಮದ ಸಾನಿಧ್ಯವನ್ನು ಅಜೀತಮತಿ ಮಾತಾಜಿ, ಸುಮತಿಮತಿ ಮಾತಾಜಿ, ವಿಶಾಲಮತಿ ಮಾತಾಜಿ, ಸುವರ್ಣಮತಿ ಮಾತಾಜಿ, ನವೀನಮತಿ ಮಾತಾಜಿ, ನೀತಿಮತಿ ಮಾತಾಜಿ, ಜಿನಮತಿ ಮಾತಾಜಿಯವರು ವಹಿಸಿದ್ದರು.
ದೀಕ್ಷಾ ಸಮಾರಂಭದ ಪೂರ್ವಭಾವಿಯಾಗಿ ಶನಿವಾರ ಮುಂಜಾನೆ 5.30 ಗಂಟೆಗೆ ಮಂಗಲ ನಿನಾದ, 7 ಗಂಟೆಗೆ ಮೂಲನಾಯಕ ಭಗವಾನ ಆದಿನಾಥ ತೀರ್ಥಂಕರ ಪಂಚಾಮೃತ ಅಭಿಷೇಕ ಮೊದಲಾದ ಧಾಮರ್ಿಕ ಕಾರ್ಯಕ್ರಮಗಳು ಜರುಗಿದವು.
8.45 ಗಂಟೆಗೆ ಬಾಲಬ್ರಹ್ಮಚಾರಿ ಸಮ್ಮೇದ ಇವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಕೇಶಲೋಚನ ಮಾಡಿಕೊಂಡರು. ದೇಹದ ಮೇಲಿನ ಮೋಹ ತೊರೆದು ಸಾರ್ವಜನಿಕರ ಮುಂದೆಯೇ ತಲೆಯ ಮೇಲಿನ ಕೂದಲುಗಳನ್ನು ಕಿತ್ತುಕೊಳ್ಳುತ್ತಿರುವ ದೃಶ್ಯ ನೆರೆದ ಜನಸ್ತೋಮವನ್ನು ಮಂತ್ರಮುಗ್ಧಗೊಳಿಸಿತು. ನಂತರ ವಿಧಿ ವಿಧಾನ ಪೂರ್ವಕವಾಗಿ ಕ್ಷುಲ್ಲಕ ದೀಕ್ಷೆ ನೀಡಲಾಯಿತು.
ಮಹಾರಾಷ್ಟ್ರದ ಮಾಜಿ ಮಂತ್ರಿ ಪ್ರಕಾಶ ಅವಾಡೆ, ಸಂಜಯ ಪಾಟೀಲ ಯಡ್ರಾವಕರ, ಅಣ್ಣಾಸಾಬ ಚಕ್ಕೋತೆ, ಮಹಿಳಾ ಮಂಡಳದ ಅಧ್ಯಕ್ಷೆ ಸ್ವರೂಪಾ ಪಾಟೀಲ ಯಡ್ರಾವಕರ, ರಾಜು ಶೆಟ್ಟಿಯವರ ಧರ್ಮಪತ್ನಿ ಸೇರಿದಂತೆ ಅನೇಕ ಗಣ್ಯ ಮಾನ್ಯರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಮಧ್ಯಾಹ್ನ 3 ಗಂಟೆಗೆ ಮುನಿಶ್ರೀ ಹಾಗೂ ಮಾತಾಜಿಯವರಿಂದ ಪ್ರವಚನ ಕಾರ್ಯಕ್ರಮ ಜರುಗಿದವು.
ನಾಂದಣಿ ಸಂಸ್ಥಾನಮಠದ ಭಟ್ಟಾರಕರಾಗಿ ನೇಮಕಗೊಂಡಿರುವ ಬಾಲಬ್ರಹ್ಮಚಾರಿ ಸಮ್ಮೇದ ಇವರ 1300 ವರ್ಷಗಳ ಇತಿಹಾಸ ಹೊಂದಿರುವ ನಾಂದಣಿ ಸಂಸ್ಥಾನಮಠದ ಭಟ್ಟಾರಕರಾಗಿ ಪಟ್ಟಾಭಿಷೇಕ ಹೊಂದಲಿದ್ದಾರೆ. ಈ ಸಂಸ್ಥಾನ ಮಠದ ಆ ದಿನದಲ್ಲಿ ಕನರ್ಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿನ 740 ಗ್ರಾಮಗಳು ಇವರ ಸುಪುದರ್ಿಯಲ್ಲಿ ಬರಲಿದ್ದು, ಆ ಗ್ರಾಮಗಳಲ್ಲಿನ ಜೈನ ಬಸದಿಗಳ ಜಿಣರ್ೋದ್ಧಾರ, ಧರ್ಮ ಸಂರಕ್ಷಣೆ ಜತೆಗೆ ಧರ್ಮದ ಉನ್ನತಿಗಾಗಿ ಭಟ್ಟಾರಕರು ಶ್ರಮಿಸಲಿದ್ದಾರೆ.
ನಾಂದಣಿ ಸಂಸ್ಥಾನಮಠದ ಪದಾಧಿಕಾರಿಗಳು, ಅಜೀತ ಕುಚನೂರೆ, ಶಾಂತಿಸಾಗರ ಆಶ್ರಮದ ಸಂಚಾಲಕ ರಾಜು ನಾಂದ್ರೆ, ಭರತೇಶ ನಾಂದ್ರೆ, ನೇಮಿನಾಥ ನರಸಗೌಡರ, ಅಜೀತ ನರಸಗೌಡರ, ಸುನೀಲ ಪಾಟೀಲ ಸೇರಿದಂತೆ ಕನರ್ಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳಿಂದ ಸಾವಿರಾರು ಸಂಖ್ಯೆಯಲ್ಲಿ ಶ್ರಾವಕ ಶ್ರಾವಕಿಯರು ಇದ್ದರು. ಚೇತನ ನಾಂದ್ರೆ ಸ್ವಾಗತಿಸಿದರು. ಅಭಿನಂದನ ಗಣೆ ವಂದಿಸಿದರು.