ಪ್ರಾಮಾಣಿಕ ಸೇವೆ ಸಲ್ಲಿಸುವುದರಲ್ಲಿ ಅಂಚೆ ನೌಕರರು ಮುಂಚೋಣಿಯಲ್ಲಿದ್ದಾರೆ : ಸಿದ್ಧಲಿಂಗ ಮಹಾಸ್ವಾಮಿಗಳು

Postal workers are at the fore in providing honest service: Siddhalinga Mahaswamy

ಪ್ರಾಮಾಣಿಕ ಸೇವೆ ಸಲ್ಲಿಸುವುದರಲ್ಲಿ ಅಂಚೆ ನೌಕರರು ಮುಂಚೋಣಿಯಲ್ಲಿದ್ದಾರೆ : ಸಿದ್ಧಲಿಂಗ ಮಹಾಸ್ವಾಮಿಗಳು 

ವಿಜಯಪುರ  26: ಗ್ರಾಮೀಣ ಅಂಚೆ ನೌಕರರ ಸಂಘ ವಿಜಯಪುರ ವಿಭಾಗ ವಿಜಯಪುರ, ಇದರ ದೈವಾರ್ಷಿಕ ಅಧಿವೇಶನವು ಬುಧವಾರ ದಿನಾಂಕ : 25-12-2024 ರಂದು ಕಂದಗಲ ಹಣಮಂತರಾಯ ರಂಗ ಮಂದಿರ ವಿಜಯಪುರದಲ್ಲಿ ನೇರವೇರಿತು.  

ಪರಮ ಪೂಜ್ಯ ಸಿದ್ದಲಿಂಗ ಮಹಾಸ್ವಾಮಿಗಳು ಸಿದ್ದಲಿಂಗೇಶ್ವರ ಮಠ ವಿಜಯಪುರ ಇವರು  ದಿವ್ಯ ಸಾನಿಧ್ಯವನ್ನು ವಹಿಸಿದ್ದರು, ಆಶೀರ್ವಚಿಸಿ ಉಪನ್ಯಾಸದಲ್ಲಿ ಇಡೀ ದೇಶದಲ್ಲಿ ಪ್ರಮಾಣಿಕ ಸೇವೆ ಸಲ್ಲಿಸುವವರಲ್ಲಿ ಅಂಚೆ ಇಲಾಖೆ ್ಘ ಗ್ರಾಮೀಣ ಅಂಚೆ ಇಲಾಖೆ ನೌಕರರು ಮುಂಚೂಣಿಯಲ್ಲಿರುತ್ತಾರೆ. ಆದರೆ ಗ್ರಾಮೀಣ ಅಂಚೆ ನೌಕರರ ಸಮಸ್ಯೆಗಳಿಗೆ ಕೇಂದ್ರ ಸರಕಾರ ಸೂಕ್ತವಾಗಿ ಸ್ಪಂದಿಸಿರುವುದಿಲ್ಲ, ಬರುವ ಮುಂದಿನ ದಿನಮಾನಗಳಲ್ಲಿ ಅವರ ಬೇಡಿಕೆಗಳು ಈಡೇರಲಿ ಎಂದು ಶುಭ ಹಾರೈಸಿದರು. 

ಈ ಅಧಿವೇಶನದ ಉದ್ಘಾಟಕರಾಗಿ ಅಖೀಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್‌.ಎಸ್‌. ಮಹಾದೇವಯ್ಯ ದೆಹಲಿ ಇವರು ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿ, ಬರುವ ದಿನಗಳಲ್ಲಿ ಕೇಂದ್ರ ಸರಕಾರ ಅಂಚೆ ಇಲಾಖೆಯನ್ನು ಖಾಸಗಿಕರಣದತ್ತ ಕೊಂಡೊಯುತ್ತಿದ್ದು, ಈಗಿನಿಂದಲೇ ನಾವೆಲ್ಲರೂ ಒಗ್ಗಟ್ಟಾಗಿ ಹೋರಾಡಬೇಕಾಗಿದೆ. ಮತ್ತು ಎಂಟನೇ ವೇತನ ಆಯೋಗದ ರಚನೆಗಾಗಿ ಹೋರಾಟ ಮಾಡಬೇಕಾದ ಪ್ರಸಂಗ ಬಂದಿದೆ. ಅದಕ್ಕಾಗಿ ಪೂರ್ವ ತಯಾರಿ ಇರಲು ಪ್ರೇರೇಪಿಸಿದರು. 

ಈ ಅಧಿವೇಶನದ ಮುಖ್ಯ ಅಥಿತಿಗಳಾಗಿ ಬೆಂಗಳೂರು ವಲಯದ ಮಾಜಿ ವಲಯ ಕಾರ್ಯದರ್ಶಿಗಳಾದ ಕೆ. ಎಸ್‌. ರುದ್ರೇಶಿ ಮಾತನಾಡುತ್ತಾ ನಮ್ಮ ಗ್ರಾಮೀಣ ಅಂಚೆ ನೌಕರರು ಏನೆ ಸೌಲಭ್ಯ ಪಡೆದುಕೊಳ್ಳಬೇಕಾದರೆ ಹೋರಾಟ ಮಾಡಿ ಪಡೆದುಕೊಳ್ಳಬೇಕು. ಇಂತಹ ಸಂದಿಗ್ಧ ಪರಿಸ್ಥೀತಿ ಇಂದಿನ ದಿನಮಾನದಲ್ಲಿ ನಿರ್ಮಾಣಗೊಂಡಿದೆ. ಗ್ರಾಮೀಣ ಅಂಚೆ ನೌಕರರಿಗೆ ಆವೈಜ್ಞಾನಿಕ ಟಾರ್ಗೆಟ ಕೊಡುತ್ತಿದ್ದಾರೆ. ಇದರಿಂದ ನೌಕರರು ಮಾನಿಸಿಕವಾಗಿ ಹತಾಶೆಗೊಂಡಿದ್ದಾರೆ. ಅದಕ್ಕಾಗಿ ಎಲ್ಲ ನೌಕರರು ಸಂಘಟನೆ ಸದಸ್ಯರಾಗಬೇಕು, ಸಂಘಟನೆಯ ಜೊತೆಗೆ ಇರಬೇಕು, ಅವಶ್ಯಕತೆ ಬಂದಾಗ ಹೋರಾಟಕ್ಕೆ ಸಿದ್ದರಾಗಬೇಕು ಎಂದು ಕರೆಕೊಟ್ಟರು. 

ಈ ಅಧಿವೇಶನದಲ್ಲಿ ವಲಯ ಕಾರ್ಯದರ್ಶಿ ರಾಜಕುಮಾರ, ಆರ್ ಆರ್ ಎಂ, ಎಂ ಕುರಹಟ್ಟಿ, ಕಾನೂನು ಸಲಹೆಗಾರರಾದ ಎಸ್ ಹೆಚ್ ಮಂಜುನಾಥ, ಮಾಜಿ ತಾಲೂಕಾ ಪಂಚಾಯತಿ ಅಧ್ಯಕ್ಷ ರಾಹುಲ ಕುಬಕಡ್ಡಿ, ಹಾಗೂ ಇತರರು ಉಪಸ್ಥಿತರಿದ್ದರು. ಕಾರ್ಯಕ್ರಮ ನಿರೂಪಣೆಯನ್ನು ಇಬ್ರಾಹಿಮ್ ಬಿದರಕುಂದಿ, ಗುರು ಬೆಳ್ಳುಬ್ಬಿ, ನಿವೃತ್ ಶಿಕ್ಷಕರಾದ ಎಲ್ ಪಿ ಹೂಗಾರ ನೇರವೇರಿಸಿಕೊಟ್ಟರು. 

ಇದೇ ಸಂದರ್ಭದಲ್ಲಿ ನೂತ ಪದಾಧಿಕಾರಿಗಳು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಸುಭಾಸ ಹೊರತ, (ಇಂಗಳಗಿ) ಖಜಾಂಚಿಯಾಗಿ ಎಸ್ ಆರ್ ನರಳೆ (ನಾದ ಕೆಡಿ) ಕಾರ್ಯದರ್ಶಿಯಾಗಿ ಗುರು ಬೆಳ್ಳುಬ್ಬಿ (ಜೈನಾಪೂರ) ಹಾಗೂ ಇತರೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.