ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ಮಹಾ ಶಿವರಾತ್ರಿ ಮಹೋತ್ಸವ ಅಂಗವಾಗಿ ಅಂಚೆ ಪೇದೆಗಳಿಗೆ ಸನ್ಮಾನ

Post constables honored as part of Maha Shivratri Mahotsava at Eshwariya Vishwa Vidyalaya

ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ಮಹಾ ಶಿವರಾತ್ರಿ ಮಹೋತ್ಸವ ಅಂಗವಾಗಿ ಅಂಚೆ ಪೇದೆಗಳಿಗೆ ಸನ್ಮಾನ 

ಗದಗ 04: ಮಹಾಶಿವರಾತ್ರಿ ಮಹೋತ್ಸವದ ಅಂಗವಾಗಿ ಪುಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ಈಶ್ವರೀಯ ವಿಶ್ವ ವಿದ್ಯಾಲಯವು ಗದುಗಿನ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಏರಿ​‍್ಡಸಿದ ಕಾಶಿ ವಿಶ್ವನಾಥ ದರ್ಶನ ಸರ್ವ ಜನತೆಯನ್ನು ಆಕರ್ಷಿಸಿತು. ಇದೇ ಸಂದರ್ಭದಲ್ಲಿ ಸೇವಾನಿರತ ಸರ್ವ ಅಂಚೆ ಪೇದೆಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ರಾಜಯೋಗಿನಿ ಬ್ರಹ್ಮಾಕುಮಾರಿ ಜಯಂತಿ ಅಕ್ಕನವರು ಮಾತನಾಡುತ್ತಾ " ಮಕ್ಕಳು ಹುಟ್ಟುವಾಗಲೇ ಅಳಲು ಶುರು ಮಾಡತ್ತವೆ. ಅಂದರೇ ಜಗತ್ತಿನೊಂದಿಗೆ ಕಮ್ಯುನಿಕೇಷನ್ ಪ್ರಾರಂಭವಾಯಿತು ಎಂದು ಅರ್ಥ. ಮಹಾ ಭಾರತದಲ್ಲಿ ಸಂಜಯನು ದೃತರಾಷ್ಟ್ರನಿಗೆ ಕೊಟ್ಟ ಸಮಾಚಾರ ನೋಡಿದರೆ ಅಂದೇ ದೂರದ ವಿಷಯ ಸಂಗ್ರಹಿಸುವ ತಾಕತ್ತು ಇತ್ತು(ದೂರದರ್ಶನ), ಶಂಕರಾಚಾರ್ಯರು ಸಂಕಲ್ಪದ ಮೂಲಕ ಕಮ್ಯುನಿಕೇಷನ್ ಮಾಡಿದರು. ಪ್ರಾಚೀನ ಕಾಲದಲ್ಲಿ ಆಧ್ಯಾತ್ಮ ಶಕ್ತಿಯಿಂದ ಇದ್ದಂತ ಕಮ್ಯುನಿಕೇಷನ್ ಕಡಿಮೆ ಆಗುತ್ತಾ ಹೋದಂತೆ ಆ ಜಾಗದಲ್ಲಿ ವಿಜ್ಞಾನದ ಶಕ್ತಿ ಬೆಳೆಯಿತು. ಇಂದು ಇಂಟರ್ ನೆಟ್, ಮೋಬೈಲ್ ಗಳಿಂದ ದೂರದಲ್ಲಿದ್ದರು. ಸುಲಭ ಕಮ್ಯುನಿಕೇಷನ್, ಅಂದರೇ ಕಬೂತರ್ ನಿಂದ ಕಂಪ್ಯೂಟರ್ ಎಜ್ ಗೆ ಬಂದ್ದಿದೇವೆ. ಇದರಲ್ಲಿ ಮೊದಲು ಅಂಚೆಯ ಪದ್ಧತಿಯನ್ನು ಈಸ್ಟ್‌ ಇಂಡಿಯಾ ಕಂಪನಿಯವರು ಪ್ರಾರಂಭಿಸಿದರು. ಇಂದು ನಮ್ಮ ದೇಶದಲ್ಲಿ ಒಂದುವರೆ ಲಕ್ಷ ಅಂಚೆ ಕಚೇರಿಗಳಿವೆ. ಏನು ಕಂಪ್ಲೆಂಟ್ ಇಲ್ಲದ ವಿಭಾಗ ಇದಾಗಿದೆ. ಮನೆ ಮನೆಗೆ, ಗಲ್ಲಿ ಗಲ್ಲಿಗೆ, ಹಳ್ಳಿ ಹಳ್ಳಿಗೆ ಮೊದಲು ಅಂಚೆ ಪೇದೆಗಳು ಅಂಚೆಯನ್ನು ಬೈಕುಗಳಿಂದ ಕಾಲ್ನಡಿಗೆಯಿಂದಲೇ ತಲುಪಿಸುತ್ತಿದ್ದರು ಆ ಮೇಲೆ ಸೈಕಲ್, ಸ್ಕೂಟಿ, ತಲುಪಿಸುತ್ತಿದ್ದಾರೆ. ಅಂಚೆ ಪೇದೆಗಳ ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿ, ಆರೋಗ್ಯ ಎಲ್ಲವು ತುಂಬಿ ಬರಲಿ, ಪ್ರತಿ ನಿತ್ಯ 1 ಗಂಟೆ ಅಂದರೇ ಸಂಜೆ 6 ರಿಂದ 7 ಗಂಟೆಯವರೆಗೆ, ಗದುಗಿನ ಬಸವೇಶ್ವರ ನಗರ, ಸಿದ್ಧರಾಮೇಶ್ವರ ನಗರ, ಸಿದ್ದಲಿಂಗ ನಗರ, ಬೆಟಗೇರಿ ಯ ಈಶ್ವರೀಯ ವಿಶ್ವ ವಿದ್ಯಾಲಯದ ಸತ್ಸಂಗದಲ್ಲಿ ಭಾಗಿಯಾಗಲು ಕರೆ ನೀಡಿದರು". ಗದುಗ ನ ಅಂಚೆ ವಿಭಾಗದ ಪೋಸ್ಟ್‌ ಮಾಸ್ಟರ್ ಆಗಿರುವ ಡಿ.ಜಿ. ಮ್ಯಾಗೇರಿ ಅವರು ಮಾತನಾಡುತ್ತಾ "ಈಗ ನಮ್ಮ ಎಲ್ಲಾ ಸಿಬ್ಬಂದಿಗಳಿಗೆ ಬ್ರಹ್ಮಾಕುಮಾರಿ ಅಕ್ಕಂದಿರು ಮೆಡಿಟೇಶನ್ ಮಾಡಿಸಿ ಬೇರೆನೇ ಲೋಕಕ್ಕೆ ಕರೆದೊಯ್ದರು. ಅಧ್ಯಾತ್ಮ ಜ್ಞಾನ ಮತ್ತು ಮೆಡಿಟೇಶನ್ ಜೊತೆಗೆ ಇಟ್ಟುಕೊಂಡರೆ ನಮ್ಮ ಜೀವನವು ಸತ್ಯ, ಸ್ವಚ್ಛ ಮತ್ತು ಸಶಕ್ತವಾಗುವುದು" ಎಂದು ಹೇಳಿ ಪೋಸ್ಟ್‌ ಮ್ಯಾನ್ ಅಣ್ಣಂದಿರು, ಅಕ್ಕಂದಿರಿಗೆ ಸನ್ಮಾನಿಸಿರುವುದರ ಬಗ್ಗೆ ಹರ್ಷ ವ್ಯಕ್ತಪಡಿಸಿದರು. ಅಂಚೆ ಪೇದೆಯಾಗಿರುವ ಶರಣಯ್ಯ ಹಿರೇಮಠ ಅಣ್ಣನವರು ಮಾತನಾಡಿ ಇಷ್ಟು ವರ್ಷದ ನಮ್ಮ ಸೇವಾ ಜೀವನದಲ್ಲಿ ಈ ರೀತಿ ನಮ್ಮನ್ನ ಯಾರು ಗೌರವಿಸಿ ಸನ್ಮಾನಿಸಿರಲ್ಲಿಲ್ಲ. ಶಿವನ ಈ ವೇದಿಕೆಯಲ್ಲಿ ಸನ್ಮಾನಿಸಿದಕ್ಕೆ ಧನ್ಯವಾದ ಹೇಳಿದರು. ಒಟ್ಟು 32 ಅಂಚೆ ಪೇದೆಗಳು ವೇದಿಕೆಯ ಮೇಲೆ ಉಪಸ್ಥಿತರಾಗಿ, ಈಶ್ವರೀಯ  ಸನ್ಮಾನವನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ  ಬ್ರಹ್ಮಾಕುಮಾರಿ ರೇಖಾ ಸ್ವಾಗತಿಸಿದರು, ಬ್ರಹ್ಮಾಕುಮಾರಿ ಸಾವಿತ್ರಿ ನಿರೂಪಿಸಿದರು.