ಧನಾತ್ಮಕ ಚಿಂತನೆಯಿಂದ ಕಾರ್ಯದಲ್ಲಿ ಯಶಸ್ಸು ಕಾಣಲು ಸಾಧ್ಯ: ಡಾ. ಶಿವಾನಂದ ಶೆಟ್ಟರ

ಧಾರವಾಡ 22: ಯಾವುದನ್ನೆ ಆಗಲಿ ಧನಾತ್ಮಕ ಚಿಂತನೆಯಿಂದ ನಿರ್ವಹಿಸಿದಾಗ ಮಾತ್ರ ಕಾರ್ಯದಲ್ಲಿ ಯಶಸ್ಸು ಕಾಣಲು ಸಾಧ್ಯ. ಯಾವುದೇ ಕ್ಷೇತ್ರದಲ್ಲೂ ಸ್ಪರ್ಧಿ ಸುವಾಗ ನಾನು ಸೋಲುತ್ತೇನೆ ಎಂಬ ಭಾವನೆಯನ್ನು ಇಟ್ಟುಕೊಂಡು ಭಾಗವಹಿಸಬಾರದು. ಆ ಸ್ಪರ್ಧೆಯಲ್ಲಿ ಭಾಗವಹಿಸುವುದೆ ಬಹಳ ಮುಖ್ಯವಾಗಿರುತ್ತದೆ. ಆದ್ದರಿಂದ ಸೋಲು-ಗೆಲುವುಗಳ ಕಡೆಗೆ ಗಮನ ಹರಿಸದೆ, ಸರ್ವ ಸಿದ್ಧತೆಯೊಂದಿಗೆ ಕ್ರೀಡಾ ಮನೋಭಾವದಿಂದ ಸ್ಪರ್ಧೆಯಲ್ಲಿ ಭಾಗವಹಿಸಬೇಕು. ಒಂದಿಲ್ಲ ಒಂದು ದಿನ ಪ್ರಯತ್ನಕ್ಕೆ ಫಲ ಖಚಿತವಾಗಿ ಸಿಗುವುದೆಂಬ ಭರವಸೆ ಸ್ಪಧರ್ಾಳುಗಳಿಗೆ ಇರಬೇಕು, ಸತ್ಯವನ್ನು ಒಪ್ಪಿಕೊಳ್ಳುವ ಮನೋಭಾವ ಇದ್ದಾಗ ಗಾಂಧಿ ಕಲ್ಪನೆಯ ಸಮನ್ವಯತೆಯನ್ನು ಸಾಧಿಸಲು ಸಾಧ್ಯ ಎಂದು ಕನರ್ಾಟಕ ವಿಶ್ವವಿದ್ಯಾಲಯ ಗಾಂಧಿ ಅಧ್ಯಯನ ಪೀಠದ ಅಧ್ಯಕ್ಷ ಡಾ. ಶಿವಾನಂದ ಶೆಟ್ಟರ ಹೇಳಿದರು.

ಅವರು ಕನರ್ಾಟಕ ವಿದ್ಯಾವರ್ಧಕ ಸಂಘದ ಸಾಹಿತ್ಯ ಮಂಟಪದ ಅಡಿಯಲ್ಲಿ ಹಮ್ಮಿಕೊಂಡ 150ನೇ ಗಾಂಧಿ ಜಯಂತಿ ಅಂಗವಾಗಿ  ಪಿಯುಸಿ,ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿ ಗಳಿಗಾಗಿ ನಡೆದ ಕನ್ನಡ ಪ್ರಬಂಧ ಸ್ಪರ್ಧೆ -2019 ರ ವಿಜೇತರಿಗೆ ಬಹುಮಾನ ವಿತರಣೆ ಸಮಾರಂಭ ಮತ್ತು ಗಾಂಧಿ ಸ್ಮರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ನಮ್ಮ ನಿತ್ಯದ ಬದುಕಿನಲ್ಲಿ ನಾವಾಡುವ ಮಾತು ಮತ್ತು ಕಾರ್ಯದಲ್ಲಿನ ಅಂತರ ಕಡಿಮೆ ಇದ್ದಾಗ ನಾವು ಮಾದರಿಯಾಗಿ ನಿಲ್ಲುತ್ತೇವೆ. ಗಾಂಧಿ, ಬುದ್ದ, ಬಸವ, ಅಂಬೇಡ್ಕರ್ ಮತ್ತು ಇತ್ತೀಚಿನ ಅಬ್ದುಲ್ ಕಲಾಂ, ಸಿದ್ದೇಶ್ವರ ಸ್ವಾಮಿಜಿ ಹೀಗೆ ಹಲವರು ತಮ್ಮ ಮಾತು ಮತ್ತು ಕೃತಿಯ   ನಡುವಿನ ಅಂತರ ಕಡಿಮೆ ಇರುವುದರಿಂದಲೇ ನಮಗೆ  ಮಾದರಿಯಾಗುತ್ತಾರೆ ಎಂದು ಶೆಟ್ಟರಹೇಳಿದರು. 

ಮುಖ್ಯ ಅತಿಥಿಗಳಾಗಿ ಆಗಮಿಸಿದ  ಕಥೆಗಾರರು, ಚಿಂತಕರಾದ ಕುಮಟಾದ ಶ್ರೀಧರ ಬಳಗಾರ ಮಾತನಾಡಿ ಗಾಂಧಿ ಮತ್ತು ಅಂಬೇಡ್ಕರ್ ನಡುವೆ ಭಿನ್ನತೆಯನ್ನು ಕಾಣುವುದು ಸಹಜ. ಅವರಲ್ಲಿನ ವೈರುಧ್ಯತೆಗಳನ್ನು ಸಹ ಸಹಜವಾಗಿ ಕಾಣಬಹುದು. ಆದರೆ ಗಾಂಧಿಯವರ ಆಧ್ಯಾತ್ಮಿಕ ವಿಚಾರ ಮತ್ತು ಅಂಬೇಡ್ಕರ್ ಅವರ ಆಥರ್ಿಕ ಚಿಂತನೆಯ ವಿಚಾರ ಒಂದಾದಾಗ ಮಾತ್ರ ಗಾಂಧಿ ಕಲ್ಪನೆಯ ರಾಮರಾಜ್ಯ ಮತ್ತು ಅಂಬೇಡ್ಕರ್ ಅವರ ಸಮಾಜ ಸುಧಾರಣೆಯ ಚಿಂತನೆ ಒಂದಾಗಲು ಸಾಧ್ಯ ಹೇಳಿದರು.

ವೇದಿಕೆಯಲ್ಲಿ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರಾದ ಎಸ್.ಬಿ.ಗಾಮನಗಟ್ಟಿ ಉಪಸ್ಥಿತರಿದ್ದರು. 

150 ಗಾಂಧಿ ಜಯಂತಿ ಅಂಗವಾಗಿ ನಡೆದ ಪಿಯುಸಿ, ಪದವಿ ಮತ್ತು ಸ್ನಾತಕೋತ್ತರ ಪದವಿ ಪ್ರಬಂಧ ಸ್ಪರ್ಧೆ -2019ರಲ್ಲಿ 

ಪಿಯುಸಿಯಲ್ಲಿ : ಧಾರವಾಡ ಕರ್ನಾಟಕ ಮಹಾವಿದ್ಯಾಲಯದ ದ್ವಿತೀಯ ಪಿಯುಸಿ ವಿದ್ಯಾರ್ಥಿ  ಅಂಜನಾ ಗೌಳಿ ಪ್ರಥಮ, ಆರ್ ಎಲ್ ಎಸ್ ಕಾಲೇಜ ಪ್ರಥಮ ಪಿಯುಸಿ ವಿದ್ಯಾರ್ಥಿ ಗಳಾದ  ಕಾವ್ಯ ಗಂ.ಹತ್ತಿಕಟಗಿ ದ್ವಿತೀಯ, ಸುನಿತಾ ಬ ಚಿಕ್ಕಣ್ಣವರ- ತೃತೀಯ ಸ್ಥಾನ ಪಡೆದಿದ್ದಾರೆ.

ಪದವಿಯಲ್ಲಿ; ಕರ್ನಾಟಕ ಕಲಾ ಮಹಾವಿದ್ಯಾಲಯದ ಬಿ.ಎ.ತೃತೀಯ ವಿದ್ಯಾರ್ಥಿ  ಶರಣು ಜಿ ಪ್ರಥಮ, ಸರಕಾರಿ ಪ್ರಥಮ ದರ್ಜೆ  ಕಾಲೇಜನ ಬಿ.ಎ ದ್ವಿತೀಯ ವಿದ್ಯಾರ್ಥಿ  ಮೃತ್ಯುಂಜಯ ಕಬ್ಬೂರ ದ್ವಿತೀಯ, ಹುಬ್ಬಳ್ಳಿ ಎಸ್.ವಿ.ಪಿ.ಎಮ್.ವ್ಹಿ.ಪಿ.ಕಾಲೇಜ ವಿದ್ಯಾರ್ಥಿ  ಪ್ರೀತಿ ಜಿ ಹುಬ್ಬಳ್ಳಿ- ತೃತೀಯ ಸ್ಥಾನ ಪಡೆದಿದ್ದಾರೆ.

ಸ್ನಾತಕೋತ್ತರ ಪದವಿಯ ಹುಬ್ಬಳ್ಳಿ ಎಸ್.ವಿ.ಪಿ.ಎಮ್.ವ್ಹಿ.ಪಿ.ಕಾಲೇಜ ಎಮ್ ಎ ದ್ವಿತೀಯ ವರ್ಷದ ವಿದ್ಯಾರ್ಥಿ  ಶಾರದಾ ಗು ಗುಂಜಳ ಪ್ರಥಮ, ಕರ್ನಾಟಕ  ವಿಶ್ವವಿದ್ಯಾಲಯ ಎಮ್.ಎ.ದ್ವಿತೀಯ ವರ್ಷದ ವಿದ್ಯಾರ್ಥಿ  ಮಂಜುನಾಥ ಬಿ ಆಯ್ ದ್ವಿತೀಯ, ಎಸ್.ವಿ.ಪಿ.ಎಮ್.ವ್ಹಿ.ಪಿ.ಕಾಲೇಜ ಎಮ್.ಎ.ದ್ವಿತೀಯ ವರ್ಷದ ವಿದ್ಯಾರ್ಥಿ  ರೋಹಿಣಿ ಗಂ ಬಡಿಗೇರ ತೃತೀಯ ಸ್ಥಾನ ಪಡೆದಿದ್ದಾರೆ.

ಸಾಹಿತಿಗಳಾದ ಮಾತಾರ್ಂಡಪ್ಪ ಎಮ್. ಕತ್ತಿ ಪಿಯುಸಿ, ಪದವಿ ಮತ್ತು ಸ್ನಾತಕೋತ್ತರ ವಿದ್ಯಾಥರ್ಿಗಳಿಗೆ ನಡೆದ ಪ್ರಬಂಧ ಸ್ಪರ್ಧೆ-2019ರ ವಿಜೇತರಿಗೆ ಬಹುಮಾನ ವಿತರಣೆಯ ಕಾರ್ಯಕ್ರಮ ನಡೆಸಿಕೊಟ್ಟರು.

ಸಂಘದ ಪ್ರಧಾನ ಕಾರ್ಯದರ್ಶಿ ಗಳಾದ ಪ್ರಕಾಶ ಎಸ್ ಉಡಿಕೇರಿ ಸ್ವಾಗತಿಸಿದರು. ಗಾಯಕರಾದ ಪ್ರೇಮಾನಂದ ಶಿಂಧೆ ಪ್ರಾರ್ಥಿ ಸಿದರು. ಸಾಹಿತ್ಯ ಮಂಟಪದ ಸಂಚಾಲಕರಾದ ಚೈತ್ರಾ ಮೋಹನ ನಾಗಮ್ಮನವರ ಪ್ರಾಸ್ತಾವಿಕವಾಗಿ ಮಾತನಾಡಿ, ಗಣ್ಯರನ್ನು ಪರಿಚಯಿಸಿದರು. ಮಹೇಶ ಪರಸಣ್ಣನವರ ನಿರೂಪಿಸಿದರು. ಗಿರೀಜಾ ಹಿರೇಮಠ ವಂದಿಸಿದರು.

ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ನಿಂಗಣ್ಣ ಕುಂಟಿ(ಇಟಗಿ), ಕೋಶಾಧ್ಯಕ್ಷ ಕೃಷ್ಣ ಜೋಶಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಶಿವಾನಂದ ಭಾವಿಕಟ್ಟಿ, ಪ್ರಭು ಕುಂದರಗಿ, ಶಿ.ಮ. ರಾಚಯ್ಯನವರ, ಮಹಾದೇವ ಸತ್ತಿಗೇರಿ ಸೇರಿದಂತೆ ಮುಂತಾದವರು ಇದ್ದರು.