ಮೆದುಳು ಕ್ಯಾನ್ಸರ್ ರೋಗಕ್ಕೆ ಧನಾತ್ಮಕ ಸಂಶೋಧನೆ: ಕರಿದುರ್ಗಣ್ಣವರ

ಧಾರವಾಡ 07: ಭಯಾನಕ ರೋಗವೆಂದೇ ಬಿಂಬಿತವಾಗಿರುವ ಮೆದುಳು ಗಡ್ಡೆ ಕ್ಯಾನ್ಸರ್, ನೀರಿನಲ್ಲಿ ಫ್ಲೋರೋಸಿಸ್ ಅಂಶದಿಂದ ಬರುವ ನ್ಯೂನ್ಯತೆಗಳು ಇವುಗಳ ಕುರಿತಾಗಿ ಕನರ್ಾಟಕ ವಿಶ್ವವಿದ್ಯಾಲಯದ ರಸಾಯನಶಾಸ್ತ್ರ ವಿದ್ಯಾಥರ್ಿಗಳು ಸಂಶೋಧನ ಕೈಕೊಂಡಿದ್ದು, ಇದರಲ್ಲಿ ಧನಾತ್ಮಕ ಬೆಳವಣಿಗೆ ಕಂಡು ಬಂದಿದೆ ಎಂದು ಕ.ವಿ.ವಿ ರಸಾಯನಶಾಸ್ತ್ರ ವಿಭಾಗದ ಅಧ್ಯಕ್ಷ ಡಾ. ಎಂ. ವಾಯ್ . ಕರಿದುರ್ಗಣ್ಣವರ ಇಂದಿಲ್ಲಿ ಹೇಳಿದರು. 

ಕನರ್ಾಟಕ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ಪ್ರೊ. ಎಸ್.ಪಿ. ಹಿರೇಮಠ ದತ್ತಿ ಕಾರ್ಯಕ್ರಮದ ಅಂಗವಾಗಿ 'ಪ್ರೊ. ಎಸ್.ಪಿ. ಹಿರೇಮಠ ಯುವ ವಿಜ್ಞಾನಿ ಪ್ರಶಸ್ತಿ' ಪ್ರದಾನ ಸಮಾರಂಭದ ಮುಖ್ಯಅತಿಥಿಗಳಾಗಿ ಮಾತನಾಡುತ್ತಿದ್ದರು. 

2024 ನೇ ಇಸ್ವಿ ವೇಳೆಗೆ ದೇಶದಲ್ಲಿ ಇಂಧನ ಸಮಸ್ಯೆ ಮತ್ತಿಷ್ಟು ಹೆಚ್ಚಾಗಲಿದ್ದು, ಈ ಬಗ್ಗೆ ಚಿಂತನೆ ಮಾಡುವುದು ಅವಶ್ಯವಿದೆ. ಅತಿ ಚಿಕ್ಕ ವಿಷಯವಾದ ಮೊಬೈಲ್ ಚಾಜರ್ಿಂಗ್ ಸಹ ಈಗ ಕರೆಗಳು ಹೆಚ್ಚಾದಾಗ ದಿನಕ್ಕೆ ಎರಡು ಬಾರಿ ಚಾಜರ್ಿಂಗ್ ಮಾಡುವ ಪರಿಸ್ಥಿತಿ ಇದೆ. ಈ ಬಗ್ಗೆ ಅಧ್ಯಯನವನ್ನು ನಡೆಸಲಾಗುತ್ತಿದ್ದು, ಈ ಬಗ್ಗೆ ವ್ಯವಹಾರಿಕವಾಗಿ ಜನಸಾಮಾನ್ಯರ ಕೈಗೆಟುಕುವಂಥ ಉಪಕರಣವನ್ನು ಶೋಧಿಸುವ ಪ್ರಯತ್ನಗಳು ನಡೆದಿವೆ ಎಂದು ಅವರು ಹೇಳಿದರು. ಇಂಥ ಪ್ರಯೋಗ ಯಶಸ್ವಿಯಾದರೆ ಕನಿಷ್ಠ 23 ದಿನಗಳ ಕಾಲ ಮೊಬೈಲ್ ಫೋನಗೆ ಚಾಜರ್ಿಂಗ್ ಇರುವುದಿಲ್ಲವೆಂದು ಅವರು ಹೇಳಿದರು. ಇದಕ್ಕೆ ಸಂಬಂಧಿಸಿದಂತೆ ತಮ್ಮ ಸಂಶೋಧನೆಗಳನ್ನು ಪ್ರಧಾನ ಮಂತ್ರಿ ಮೋದಿ ಅವರ ಗಮನಕ್ಕೆ ತರಲಾಗಿತ್ತು. ಅವರು ರಾಜ್ಯ ಸರಕಾರಕ್ಕೆ ಈ ಬಗ್ಗೆ ಸೂಚನೆಯನ್ನು ಕಳಿಸಿದ್ದರು. ಈ ಹಿನ್ನೆಲೆಯಲ್ಲಿ ಹಿರಿಯ ಅಧಿಕಾರಿಗಳೊಬ್ಬರು ಬಂದು ಚಚರ್ಿಸಿದ್ದಾಗಿ ಹೇಳಿದರು. 

ಕುವೆಂಪು ವಿಶ್ವವಿದ್ಯಾಲಯದ ಕುಲಪತಿಗಳೂ ಆಗಿದ್ದ ದಿ. ಡಾ. ಎಸ್.ಪಿ. ಹಿರೇಮಠ ಅವರು ಅತ್ಯುತ್ತಮ ರಸಾಯನಶಾಸ್ತ್ರ ವಿಜ್ಞಾನಿಗಳು ಆಗಿದ್ದರೆಂದು ಅವರನ್ನು ಸ್ಮರಿಸಿದರು. ಡಾ. ಹಿರೇಮಠ ಕುಷ್ಠರೋಗ ನಿವಾರಣೆ ಬಗ್ಗೆಯೂ ತಮ್ಮ ಸಂಶೋಧನೆ ಕೈಕೊಂಡಿದ್ದರೆಂದು ಹೇಳಿದರು. 

ಸಭೆಯಲ್ಲಿ ಕ.ವಿ.ವಿ. ರಸಾಯನಶಾಸ್ತ್ರ ವಿಭಾಗದ ಆಜೀವ ಪ್ರಾಧ್ಯಾಪಕ ಪ್ರಶಸ್ತಿ ಪಡೆದ ಡಾ. ಎಸ್.ಟಿ. ನಂದಿಬೇವೂರ, ಅವರ ಪತ್ನಿ ಹಾಗೂ ಯುವ ವಿಜ್ಞಾನಿ ಪ್ರಶಸ್ತಿ ಪಡೆದ ಶಿವಮೊಗ್ಗ ಕುವೆಂಪು ವಿಶ್ವವಿದ್ಯಾಲಯದ ಕು. ಕೆ.ಎಂ. ಶ್ರೀಲೇಖಾ ಅವರನ್ನು ಸನ್ಮಾನಿಸಲಾಯಿತು. ತಮ್ಮ ಸನ್ಮಾನಕ್ಕೆ ಉತ್ತರ ನೀಡಿದ ಡಾ. ಎಸ್.ಟಿ. ನಂದಿಬೇವೂರ ಅವರು ತಮ್ಮ ಹಾಗೂ ದಿ. ಎಸ್.ಪಿ. ಹಿರೇಮಠ ಅವರ ಬಾಂಧವ್ಯವನ್ನು ಸ್ಮರಿಸಿದರು.  ಡಾ. ಶ್ರೀಮತಿ ಉಜ್ವಲಾ ಹಿರೇಮಠ ಅವರು ತಮ್ಮ ದಿ. ಪತಿಯನ್ನು ಭಾವಪೂರ್ಣವಾಗಿ ನೆನೆಪಿಸಿಕೊಂಡರು. ಸಭೆಯಲ್ಲಿ ಕುಮಾರಿ ಶ್ರದ್ಧಾ ಮೂರಶಿಳ್ಳಿ ವಚನಗಾಯನ ಹಾಡಿದರು. ಕ.ವಿ.ವ. ಸಂಘದ ಪ್ರಧಾನ ಕಾರ್ಯದಶರ್ಿ ಪ್ರಕಾಶ ಎಸ್. ಉಡಿಕೇರಿ ಸ್ವಾಗತಿಸಿದರು. ಕ.ವಿ.ವ.ಸಂಘದ ಕಾರ್ಯಾಧ್ಯಕ್ಷ ಶಿವಣ್ಣ ಬೆಲ್ಲದ, ಉಪಾಧ್ಯಕ್ಷ ನಿಂಗಣ್ಣ ಕುಂಟಿ, ಸಹ ಕಾರ್ಯದಶರ್ಿ ಸದಾನಂದ ಶಿವಳ್ಳಿ, ಕಾರ್ಯಕಾರಿ ಸಮಿತಿ ಸದಸ್ಯ ಶಾಂತೇಶ ಗಾಮನಗಟ್ಟಿ ಹಾಗೂ ಪಾರ್ವತಿ ಹಾಲಭಾವಿ ಗ್ರಂಥಾರ್ಪಣೆ ಮಾಡಿದರು. ಕಾರ್ಯಕಾರಿ ಸಮಿತಿ ಸದಸ್ಯ ಮನೋಜ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ,  ಕೊನೆಗೆ ಆಭಾರ ಮನ್ನಿಸಿದರು. ಸಭೆಯಲ್ಲಿ ಪ್ರೊ. ಹವಿನಾಳೆ, ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ, ಡಾ. ಮಲ್ಲಿಕಾಜರ್ುನ ಪಾಟೀಲ, ಮಹದೇವ ಸಿದ್ನಾಳ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.