ಶಂಕ್ರ್ಪ ಸಿನ್ನೂರದೇವಾಂಗ ಸಮಾಜದ ವತಿಯಿಂದ ಭಾವಚಿತ್ರ ಮೆರವಣಿಗೆ, ಧಾರ್ಮಿಕ ಕಾರ್ಯಕ್ರಮ
Portrait procession, religious program by Shankrapa Sinnur Devanga Samaj
ಹನುಮಸಾಗರ 03: “ದೇವಲ ಮಹರ್ಷಿ ಎಲ್ಲ ದೇವಾನುದೇವತೆಗಳಿಗೆ ವಸ್ತ್ರವನ್ನು ನೀಡಿದಂತ ಮಹಾನ್ ಋಷಿಗಳಾಗಿದ್ದಾರೆ. ನೇಕಾರಿಕೆ ಕೇವಲ ವೃತ್ತಿಯಲ್ಲ, ಅದು ನಮ್ಮ ಪರಂಪರೆ, ಗೌರವ ಮತ್ತು ಆತ್ಮೀಯತೆಯ ಪ್ರತೀಕವಾಗಿದೆ,” ಎಂದು ದೇವಾಂಗ ಸಮಾಜದ ಅಧ್ಯಕ್ಷ ಶಂಕ್ರ್ಪ ಸಿನ್ನೂರ ಹೇಳಿದರು.ದೇವಾಂಗ ಸಮಾಜದ ವತಿಯಿಂದ ಭಾನುವಾರ ದೇವಲ ಮಹರ್ಷಿ ಜಯಂತಿಯ ಅಂಗವಾಗಿ ಭಾವಚಿತ್ರ ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು. “ನಮ್ಮ ದೇವಾಂಗ ಸಮಾಜದ ಎಲ್ಲರೂ ನೇಕಾರಿಕೆ ವೃತ್ತಿಯ ಮೂಲಕ ಜೀವನೋಪಾಯ ನಡೆಸುತ್ತಿರುವುದು ಶ್ಲಾಘನೀಯ ವಿಷಯ. ಇಂದಿನ ಕಾಲದಲ್ಲೂ ನಾವು ನಮ್ಮ ಉದ್ಯೋಗದಿಂದ, ನಮ್ಮ ಪರಂಪರೆಯಿಂದ ಹಿಂದೆ ಸರಿಯಬಾರದು. ವಸ್ತ್ರವನ್ನು ದೇವರಿಗೆ ನೀಡಿದ ಪರಂಪರೆಯನ್ನು ಮುಂದುವರಿಸುವುದು ನಮ್ಮ ಕರ್ತವ್ಯ,” ಎಂದರು.ಕಾರ್ಯಕ್ರಮದ ಅಂಗವಾಗಿ ದೇವಲ ಮಹರ್ಷಿ ಭಾವಚಿತ್ರ ಮೆರವಣಿಗೆಯಲ್ಲಿ ಮಯತೈದೆ ಮಹಿಳೆಯರು ಸಾಂಪ್ರದಾಯಿಕ ಉಡುಗೆಯಲ್ಲಿ, ಪುರುಷರು ಭಕ್ತಿ ಗೀತೆಗಳ ಸದ್ದುಮದ್ದು ನಡುವೆ ಪಾಲ್ಗೊಂಡರು. ದೇವಾಲಯದಿಂದ ಪ್ರಾರಂಭವಾದ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಾಗಿ, ನಂತರ ದೇವಾಲಯದವರಗೆ ಮುಕ್ತಾಯವಾಯಿತು. ಬೆಳಿಗ್ಗೆಯಿಂದ ಭಜನೆ, ಅಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು.
ದೇವಾಂಗ ಸಮಾಜದ ಉಪಾಧ್ಯಕ್ಷ ಸುರೇಶ ಸಿನ್ನೂರ, ಹನಮಂತಗೌಡ ಸಿನ್ನೂರ, ರಾಮಣ್ಣ ಸಿನ್ನೂರ, ಶಂಕ್ರ್ಪ ಸಂಪ್ಪಡಿ, ಅಶೋಕ ಸಿನ್ನೂರ, ಮಹೇಶ ಸಿನ್ನೂರ, ರಾಯಣಪ್ಪ ಹುಲಮನಿ, ಮಂಜುನಾಥ ಸಿನ್ನೂರ, ಕುಡ್ಲೆಪ್ಪ ಸಿನ್ನೂರ, ಶಂಕ್ರ್ಪ ಹುಲಮನಿ,, ವಸಂತ ಸಿನ್ನೂರ, ಮಹೇಶ್ ಹುಲಮನಿ, ರಮೇಶ್ ಶೀಲವಂತರ, ಶಂಕರ ಹುಲಮನಿ, ರಾಘವೇಂದ್ರ ಸಿನ್ನೂರ ಭುವನೇಶ್ವರಿ ಸಿನ್ನೂರ, ಗಾಯತ್ರಿ ಸಿನ್ನೂರ, ದಾನಮ್ಮ ಸಿನ್ನೂರ, ವತ್ಸಲಾ ಸಿನ್ನೂರ, ವಿದ್ಯಾ ಸಪ್ಪಂಡಿ, ರೂಪಾ ಯರಗಲ್ಲ, ವಿಜಯಾ ಕಾಳಗಿ, ಸುಮಾ ಸಿನ್ನೂರ, ಗಂಗಮ್ಮ ಹುಲಮನಿ, ಶಿಲ್ಪಾ ಸಿನ್ನೂರ, ಸರಸ್ವತಿ ಸಿನ್ನೂರ, ವಿಜಯಲಕ್ಷ್ಮಿ ಕಾಳಗಿ, ಲಕ್ಷ್ಮೀ ಸಿನ್ನೂರ, ರಂಜಿತಾ ಹುಲಮನಿ, ಸವಿತಾ ಸಿನ್ನೂರ ಸೇರಿದಂತೆ ಅನೇಕ ಭಕ್ತರು ಇತರರು ಇದ್ದರು. ಪೋಟೋ: ಹನುಮಸಾಗರದ ದೇವಾಂಗ ಸಮಾಜದ ವತಿಯಿಂದ ಪ್ರಮುಖ ಬೀದಿಗಳಲ್ಲಿ ದೇವಲ ಮಹರ್ಷಿ ಭಾವಚಿತ್ರ ಮೆರವಣಿಗೆ ನಡೇಯಿತು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 