ಬೆಂಗಳೂರು, ಜು.2: ಸ್ಯಾಂಡಲ್ ವುಡ್ ಹಾಸ್ಯನಟ ಮಿಮಿಕ್ರಿ ರಾಜ್‍ಗೋಪಾಲ್ ವಿಧಿವಶರಾಗಿದ್ದಾರೆ.
ಕಳೆದ ಕೆಲ ದಿನಗಳಿಂದ ಅಸ್ತಮಾ, ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಪಡೆಯುತ್ತಿದ್ದರು. ನಿನ್ನೆ ರಾತ್ರಿ 1 ಗಂಟೆ ಸುಮಾರಿಗೆ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.
69 ವರ್ಷದ ರಾಜಗೋಪಾಲ್ ಅವರು ಕೆಂಗೇರಿ ಬಳಿಯ ವಲಗರಹಳ್ಳಿಯಲ್ಲಿ ಬಿಡಿಎ ನಿರ್ಮಿಸಿರುವ ವಸತಿ ಸಮುಚ್ಚಯದಲ್ಲಿ ನೆಲೆಸಿದ್ದರು. ಕನ್ನಡ, ತಮಿಳು ಸೇರಿ 650ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ರಾಜಗೋಪಾಲ್ ಅವರು ಅಭಿನಯಿಸಿದ್ದಾರೆ. ತಮ್ಮ ಮಿಮಿಕ್ರಿ ಮೂಲಕ ಅವರು ಜನರನ್ನು ರಂಜಿಸುವಲ್ಲಿ ಒಂದು ಕೈ ಮೇಲಿದ್ದರು. ಇಂದು ಮಧ್ಯಾಹ್ನ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಇತ್ತೀಚೆಗೆ ಸ್ಯಾಂಡಲ್‍ವುಡ್‍ನಲ್ಲಿ ನಟ ಚಿರಂಜೀವಿ ಸರ್ಜಾ, ಹಾಸ್ಯ ನಟರಾದ ಬುಲೆಟ್ ಪ್ರಕಾಶ್, ಮೈಕಲ್ ಮಧು ಮತ್ತು ರಿಯಾಲಿಟಿ ಶೋ ವಿನ್ನರ್ ಮೆಬೀನಾ ಮೈಕಲ್ ಮೃತಪಟ್ಟಿದ್ದರು.