ರಾಣೇಬೆನ್ನೂರು 20 : ಸ್ಥಳೀಯ ಶ್ರೀರಾಮ ನಗರದ ಹಿಂದುಳಿದ ವರ್ಗಗಳ ವಸತಿ ನಿಲಯಗಳಲ್ಲಿ ಕಳಪೆ ಗುಣಮಟ್ಟದ ಆಹಾರ ವಿತರಿಸುತ್ತಿರುವುದಾಗಿ ಆರೋಪಿಸಿದ ಎಸ್ಎಫ್ಐ ಮುಖಂಡರು ಪ್ರತಿಭಟಿಸಿ ತಾಲೂಕಿನ ವಿಸ್ತೀಣರ್ಾಧಿಕಾರಿ ವಿ.ಎಸ್.ಹಿರೇಮಠ ಅವರಿಗೆ ಮನವಿ ಸಲ್ಲಿಸಿ ಸಮಸ್ಯ ಸರಿಪಡಿಸುವಂತೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎಸ್ಎಫ್ಐ ಜಿಲ್ಲಾ ಸಂಚಾಲಕ ಬಸವರಾಜ ಭೋವಿ ಅವರು ಇಲ್ಲಿನ ಸಮಸ್ಯ ಕುರಿತು ವಸತಿ ನಿಲಯದ ವಿಧ್ಯಾಥರ್ಿಗಳು ಹಲವಾರು ಬಾರಿ ಸಂಘಟನೆಯ ಗಮನಕ್ಕೆ ತಂದಿದ್ದರು. ತಾವು ಸಹ ಈ ಕುರಿತು ಮೇಲಿನ ಅಧಿಕಾರಿಗಳಿಗೆ ಮಾಹಿತಿ ಸಲ್ಲಿಸಿ ಕ್ರಮ ಕೈಗೊಳ್ಳುವಂತೆ ದೂರು ನೀಡಲಾಗಿತ್ತು. ಆದರೂ ಅಧಿಕಾರಿಗಳು ನಮ್ಮ ದೂರಿಗೆ ಸ್ಪಂದಿಸದೇ ನಿರ್ಲಕ್ಷ್ಯತನ ತೋರಿದ್ದಾರೆ. ಇದರಿಂದ ಬೇಸತ್ತ ವಿಧ್ಯಾಥರ್ಿಗಳು ಮಂಗಳವಾರ ರಾತ್ರಿ ಪ್ರತಿಭಟನೆಗೆ ಮುಂದಾಗಿದ್ದಾರೆ.
ಕೂಡಲೆ ಕ್ರಮ ಕೈಗೊಂಡು ವಿದ್ಯಾಥರ್ಿಗಳಿಗೆ ಸರಿಯಾದ ರೀತಿಯಲ್ಲಿ ಆಹಾರ ವಿತರಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು. ಮನವಿ ಸಲ್ಲಿಕೆ ಮುಂಚೂಣಿಯಲ್ಲಿ ತಾಲೂಕಾಧ್ಯಕ್ಷ ಪ್ರಮೋದ ಮುದ್ದಿ, ಕಾರ್ಯದಶರ್ಿ ಲಕ್ಷ್ಮಣ ಜಂಗಳೆಪ್ಪನವರ, ಬಸವರಾಜ ಎ.ಎಲ್., ಚಂದ್ರು ಎಂ.ಕೆ., ಶಿವಕುಮಾರ ಉದಯ, ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು