ರಸ್ತೆ ಅಗಲೀಕರಣಕ್ಕೆ ಬಡ ಕುಟುಂಬ ನಿವಾಸಿಗಳ ವಿರೋಧ

Poor family residents oppose road widening

ರಸ್ತೆ ಅಗಲೀಕರಣಕ್ಕೆ ಬಡ ಕುಟುಂಬ ನಿವಾಸಿಗಳ ವಿರೋಧ  

ಕಂಪ್ಲಿ 13:  ಪಟ್ಟಣದ ಅಭಿವೃದ್ಧಿಗೆ ಎಲ್ಲಾರ ಸಹಕಾರವಿದೆ. ಇಲ್ಲಿನ ನಡುವಲ ಮಸೀದಿಯಿಂದ ಜೋಗಿ ಕಾಲುವೆವರೆಗಿನ ರಸ್ತೆಯ ಎರಡು ಕಡೆಗಳಲ್ಲಿ ಬಡ ಕುಟುಂಬಗಳು ವಾಸಿಸುತ್ತಿದ್ದು, ಅಭಿವೃದ್ಧಿ ಹೆಸರಿನಲ್ಲಿ ಪುರಸಭೆಯು ರಸ್ತೆ ಅಗಲೀಕರಣಕ್ಕೆ ಮುಂದಾಗಿರುವುದು ಸರಿಯಲ್ಲ ಕೂಡಲೇ ರಸ್ತೆ ಅಗಲೀಕರಣ ಕೈಬಿಡಬೇಕು ಎಂದು ಹಿರಿಯ ನಿವಾಸಿ ಕೆ.ಅನಂತಪದ್ಮಾನಾಭಂ ಒತ್ತಾಯಿಸಿದರು.ಪಟ್ಟಣದಲ್ಲಿರುವ ಶಿಲಾ ರಾಮಚಂದ್ರ ದೇವಸ್ಥಾನದಲ್ಲಿ ಬುಧವಾರ ಸಭೆಯಲ್ಲಿ ಮಾತನಾಡಿ, ರಸ್ತೆಯ ಎರಡು ಕಡೆಗಳಲ್ಲಿ ಸಾಕಷ್ಟು ಕುಟುಂಬಗಳು ಸುಮಾರು ವರ್ಷಗಳಿಂದ ಜೀವನ ಮಾಡುತ್ತಿದ್ದಾರೆ  ಕೆಲ ಮನೆಗಳು ಶಿಥಿಲಗೊಂಡಿದ್ದು, ಕೆಲವರು ಸಾಲ ಮಾಡಿ ಹೊಸ ಮನೆಗಳನ್ನು ಕಟ್ಟಿಕೊಂಡಿದ್ದಾರೆ.  ಪುರಸಭೆಯ ಯಾವುದೇ ಜಾಗ ಅತಿಕ್ರಮಿಸಿಕೊಂಡಿಲ್ಲ. ನೋಂದಣಿ ಮಾಡಿಸಿಕೊಂಡ ವಾಸ ಮಾಡಲಾಗುತ್ತಿದೆ. ತೆರಿಗೆಯನ್ನು ನೋಂದಣಿ ಪ್ರಕಾರ ಪಾವತಿಸಲಾಗುತ್ತಿದೆ. 2006ರಲ್ಲಿ ರಸ್ತೆ ಅಗಲೀಕರಣ ಮಾಡಲು ತೀರ್ಮಾನಿಸಿದ್ದರು.  ಇಲ್ಲಿ ನೆಲೆಸಿರುವ ಕುಟುಂಬಗಳಿಗೆ ಪುರಸಭೆಯಿಂದ ಯಾವುದೇ ನೋಟೀಸ್ ಬಂದಿಲ್ಲ. ಅಗಲೀಕರಣ ಬಗ್ಗೆ ನಿವಾಸಿಗಳ ಗಮನಕ್ಕೆ ಬಂದಿಲ್ಲ. ಇತ್ತೀಚೆಗೆ ಪುರಸಭೆಯಿಂದ ನಡುವಲ ಮಸೀದಿಯಿಂದ ಹಿಡಿದು ಜೋಗಿ ಕಾಲುವೆವರೆಗಿನ ರಸ್ತೆ ಮಧ್ಯದಿಂದ ಎರಡು ಕಡೆಗಳಲ್ಲಿ 30:30 ಅಡಿ ಅಳತೆ ಮಾಡಿ, ಗುರುತು ಚಿಹ್ನೆ ಹಾಕಲಾಗಿದೆ. ನಂತರ ಮಾನ್ಯ ಶಾಸಕರು ಸ್ಥಳ ವಿಕ್ಷೀಸಿ, 15:15 ಅಡಿ ಅಗಲೀಕರಣಕ್ಕೆ ಅನುಮತಿ ನೀಡಲು ಕೋರಿದರು. ತದನಂತರ ಮಾರ್ಚ್‌ 1ರಂದು ಪುರಸಭೆ ಸಿಬ್ಬಂದಿಗಳು ಬಂದು, ಎರಡು ಕಡೆಗಳಲ್ಲಿ ತಲಾ 17 ವರೆ ಅಡಿಯಷ್ಟು ಗುರುತಿಸಿದ್ದಾರೆ. ಇಲ್ಲಿನ ಕುಟುಂಬಗಳಿಗೆ ತಿಳಿಸದೇ, ನಷ್ಟ ಪರಿಹಾರ ಇಲ್ಲದೇ ರಸ್ತೆ ಅಗಲೀಕರಣ ಮಾಡುವುದು ಯಾವ ನ್ಯಾಯ? ಇಲ್ಲಿನ ಕುಟುಂಬಗಳು ಸಂಪೂರ್ಣವಾಗಿ ಬಡತನದಲ್ಲಿ ಜೀವನ ನಡೆಸುತ್ತಿದ್ದಾರೆ. ಪುರಸಭೆಯವರು ಮನೆಗಳನ್ನು ಒಡೆದರೆ, ಪುನ: ಮನೆ ಕಟ್ಟಿಕೊಳ್ಳುವುದಕ್ಕೆ ಆಗುವುದಿಲ್ಲ. ಅಲ್ಪಸ್ವಲ ಜಾಗದಲ್ಲಿರುವ ಕುಟುಂಬಗಳು ಬೀದಿ ಪಾಲಾಗುತ್ತಾರೆ. ಇಲ್ಲಿ 15-25 ಬಾವಿಗಳಿವೆ.  ಆದ್ದರಿಂದ ಅಗಲೀಕರಣ ಮಾಡಬಾರದು. ಒಂದು ವೇಳೆ ರಸ್ತೆ ಅಗಲೀಕರಣ ತೆರವು ಮಾಡಿದರೆ, ಪುರಸಭೆಯು ನೇರ ಹೊಣೆಗಾರರಾಗಬೇಕಾಗುತ್ತದೆ.ಇಲ್ಲಿನ ಕುಟುಂಬಗಳ ಅಳಲನ್ನು ಆಲಿಸಿ, ರಸ್ತೆ ಅಗಲೀಕರಣ ರದ್ದು ಮಾಡಬೇಕೆಂದು ಒತ್ತಾಯಿಸಿದರು. ಸಂದರ್ಭದಲ್ಲಿ ನಿವಾಸಿಗಳಾದ ಬಿ.ರಮೇಶ, ಅನಿಲ್‌ಕುಮಾರ, ಶಶಿಧರ, ಗೋಪಾಲಕೃಷ್ಣ, ಗಿರಿರಾಜ ಆಚಾರ್, ಅನಂತಾಚಾರ್, ರುದ್ರ​‍್ಪ ಆಚಾರ್, ಕರಿಬಸಯ್ಯಸ್ವಾಮಿ, ಸಂದೀಪ್, ಪಂಪಣ್ಣ, ನಾಗರಾಜ, ಶ್ರೀನಿವಾಸ, ಶಿವರಾಜ, ರಾಘವೇಂದ್ರಶೆಟ್ಟಿ, ವಿಜಯಲಕ್ಷ್ಮಿ, ಜಯಶ್ರೀ, ಯು.ಅಮೃತಾ ಸೇರಿದಂತೆ ಇತರರು ಇದ್ದರು.