ಬೆಳಗಾವಿ 04: ಬೆಳಗಾವಿಯ ಸ್ಮಾರ್ಟ್ ಸಿಟಿಯ ಕಿರೀಟ ಅದರ ಬೆನ್ನಲ್ಲೆ ಅಭಿವೃದ್ಧಿ ಕಾರ್ಯಗಳು ಭರದಿಂದ ಸಾಗಿವೆ. ಆದ್ರೆ ಶೀಘ್ರವೇ ಕಾಮಗಾರಿಯನ್ನ ಪೂರ್ಣಗೊಳಿಸುವ ಭರದಲ್ಲಿ ಅರ್ದಂಬರ್ದ ಕೆಲಸವನ್ನು ಕೈಗೊಂಡಿರುವುದಕ್ಕೆ ಟಿಳಕವಾಡಿಯ ರಾಣಿ ಲಕ್ಷ್ಮೀ ಬಾಯಿ ರೋಡ್ ಉದಾಹರಣೆ ಎನ್ನಬಹುದು.. ಇಲ್ಲಿಯ ಫೆವರ್ಸಗಳು ಮಕ್ಕಳ ಆಟಿಕೆ ಸಾಮಾನಾಗಿ ಪರಿವರ್ತನೆ ಹೊಂದಿವೆ. ಇನ್ನು ಸಮೀಪದ ಆಟದ ಮೈದಾನದಲ್ಲ್ಲಿ ಇವುಗಳನ್ನು ಬೌಂಡರಿಗಳನ್ನು ಹಾಕಲು ಮಕ್ಕಳು ಉಪಯೋಗಿಸುತಿದ್ದಾರೆ. ರಸ್ತೆಯಲ್ಲಿ ಹಾಕಿದ ಪೇವರ್ಸಗಳಿಗೆ ಕಾಂಕ್ರಿಟ್ ಹಾಕದ ಪರಿಣಾಮ ಪೇವರ್ಸಗಳೆಲ್ಲ ಕಿತ್ತು ಹೋಗಿವೆ. ಕಿತ್ತ ಫೇವರ್ಸಗಳನ್ನು ಮಕ್ಕಳು ಆಟವಾಡಲು ಉಪಯೋಗಿಸಿದರೆ. ಇನ್ನು ಜನರು ಅವುಗಳನ್ನು ತಮ್ಮ ಮನೆಗೆ ಒಯ್ಯುತ್ತಿದ್ದಾರೆ.
ಸುಮಾರು 30 ರಿಂದ 40 ವರ್ಷದ ವರೆಗೆ ಅಭಿವೃದ್ಧಿ ಕಾಣದ ಟಿಳಕವಾಡಿಯಲ್ಲಿರುವ ರಾಣಿ ಲಕ್ಷ್ಮೀಬಾಯಿ ರಸ್ತೆಯಲ್ಲಿ ಫೇವಸ್ರ್ಗಳನ್ನು ಅಳವಡಿಸಲಾಗುತ್ತಿತ್ತು. ಆದ್ರೆ ಅರ್ಧಂಬರ್ಧ ಫೇವರ್ಸ ಅಳವಡಿಸಿ ಅದಕ್ಕೆ ಸಿಮೆಂಟ್ ಹಾಕದೇ ಹಾಗೇ ಬಿಟ್ಟಿದ್ದರಿಂದ ಎಲ್ಲವೂ ಕಿತ್ತು ಹೋಗಿವೆ. ಈ ಕುರಿತು ಅಲ್ಲಿನ ರೆಹವಾಸಿಗಳು ಸಂಬಂಧಿಸಿದವರಿಗೆ ಸಂಪಕರ್ಿಸಿದರೂ ಯಾರೂ ಸರಿಯಾಗಿ ಸ್ಪಂದಿಸುತ್ತಿಲ್ಲಾ.
ಇಲ್ಲಿ ರಸ್ತೆ ಅಭಿವೃದ್ಧಿ ಮಾಡುತ್ತಿರುವುದು ಸಂತಸ ತಂದಿದೆ ಆದರೆ ಅದನ್ನು ಸರಿಯಾದ ರೀತಿಯಲ್ಲಿ ಕಾಮಗಾರಿ ಮಾಡದಿರುವದರಿಂದ ಜನ ಸಾಮಾನ್ಯರಿಗೆ ತೊಂದರೆಯಾಗುತ್ತಿದೆ. ಕುರಿತು ಶೀಘ್ರವೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಅಭಿವೃದ್ಧಿಗೆ ಜನರ ಬೆಂಬಲವಿದೆ ಆದರೆ ಅದನ್ನು ಸರಿಯಾದ ಕ್ರಮದಲ್ಲಿ ಮಾಡಬೇಕು ಎಂಬುದು ಟಿಳಕವಾಡಿ ರಹವಾಸಿಗಳ ಆಗ್ರಹ