ಲೋಕದರ್ಶನ ವರದಿ
ಗದಗ 21: ಲಕ್ಷ್ಮೇಶ್ವರ ನಗರದ ವಾರ್ಡ ನಂಬರ 01ರಲ್ಲಿ ಒಳಚರಂಡಿ ಕಾಮಗಾರಿಯನ್ನು ನಡೆಸುತ್ತಿರುವ ಗುತ್ತಿಗೆದಾರರು ಸಂಪೂರ್ಣವಾಗಿ ಕಳಪೆ ಕಾಮಗಾರಿಯನ್ನು ಮಾಡುತ್ತಿರುವುದು ಕೊಳಗೇರಿ ಜನರ ಆಕ್ರೋಶಕ್ಕೆ ಕಾರಣವಾಗಿದ್ದಾರೆ. ಕೊಳಗೇರಿ ಜನ ವಾಸವಿರುವ ಸ್ಥಳದ ಮುಖಾಂತರ ಹಾದು ಹೋಗುವ ಒಳಚರಂಡಿಗಳು ಸಂಪೂರ್ಣ ಇಟ್ಟಿಗೆ ಹಾಗೂ ಮರಳು ಕಳಪೆ ಇದೆ ಎಂದರು.ಮರಳು ಬದಲು ಎಂ. ಸ್ಯಾಂಡನ್ನು ಬಳಸದೆ ಕಲ್ಲಿನ ಪುಡಿ ಗಿಲೇಟ್ ಈ ತರಹದ ಸಾಮಗ್ರಿಗಳನ್ನು ಬಳಸಿ ಕಾಮಗಾರಿಯನ್ನು ನಡೆಸುತ್ತಿದ್ದರು ಕಳಪೆ ಕಾಮಗಾರಿ ಮುಂದುವರೆಸದಿರಲು ಸಾರ್ವಜನಿಕರು ಆಗ್ರಹಿಸಿದರು. ಸ್ಥಗಿತಗೊಂಡ ಕಾಮಗಾರಿಯು ಮುಂದೆ ಅದೆಂತಹ ಸಾಮಗ್ರಿಗಳನ್ನು ತಂದು ಕಾಮಗಾರಿ ಮಾಡುವರು ಎಂದು ಕಾದುನೋಡುತ್ತಿದ್ದಾರೆ. ಇದಕ್ಕೆ ಸಂಬಂಧಪಟ್ಟ ಒಳಚರಂಡಿ ಇಲಾಖೆ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಸ್ಧಳಕ್ಕೆ ಬೇಟಿ ನೀಡಿ ಕೊಳಗೇರಿ ಜನರಿಗೆ ಮುಂದಾಗುವ ತೊಂದರೆಯನ್ನು ನಿಲ್ಲಿಸಬೇಕು. ನಗರದ ಬಹುತೇಕ ಚರಂಡಿಗಳ ಹೊಲಸು ದಲಿತರು ವಾಸವಿರುವ ಸ್ಧಳದ ಮುಖಾಂತರ ಹಾದು ಹೋಗುತ್ತದೆ ಆದ್ದರಿಂದ ಒಳಚರಂಡಿ ನೇಲದ ಆಳಕ್ಕೆ ಇರದೆ ನೇಲದ ಮೇಲೆನೆ ನಿಮರ್ಿಸಿದ್ದು ಅದರಲ್ಲೂ ಒಳಚರಂಡಿ ನಿಮರ್ಿಸುತ್ತಿರುವ ಸ್ಧಳ ಪುರಾತನ ನೀರು ಹರಿಯುವ ಹಳ್ಳವಾಗಿದ್ದರಿಂದ ಇಲ್ಲಿ ಸಂಪೂರ್ಣವಾಗಿ ಗುಣಮಟ್ಟದ ಸಾಮಗ್ರಿಗಳನ್ನು ಬಳಸಬೇಕೆಂದು ಸ್ಧಳೀಯರ ಆಗ್ರಹ ಈ ಸ್ಧಳದಲ್ಲಿ ಕೇಳುವವರು ಯಾರು ಇಲ್ಲವೆಂದು ಸಂಪೂರ್ಣವಾಗಿ ಕಳಪೆ ಕಾಮಗಾರಿಯನ್ನು ನಡೆಸುತ್ತಿರುವ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು.ಸಂಬಂಧಪಟ್ಟ ಒಳಚರಂಡಿ ಅಧಿಕಾರಿಗಳು ಇದರ ಸ್ಧಳ ಪರಿಶೀಲನೆ ಮಾಡಿ ಈ ಸ್ಧಳದಲ್ಲಿ ಶಾಸ್ವತ ಸುರಕ್ಷಿತ ಕಾಮಗಾರಿಯನ್ನು ಮಾಡಲು ಕ್ರಮ ಕೈಗೂಳ್ಳಬೇಕೆಂದು ಸ್ಧಳೀಯರ ಆಗ್ರಹ.