ಚುನಾವಣೆ ಫಲಿತಾಂಶದ ಬಳಿಕ ರಾಜಕೀಯ ಧ್ರುವೀಕರಣ

ಬೆಂಗಳೂರು 4: ಲೋಕಸಭಾ ಚುನಾವಣಾ ಫಲಿತಾಂಶದ ಬಳಿಕ ರಾಜ್ಯ ರಾಜಕೀಯದಲ್ಲಿ ಧ್ರುವೀಕರಣವಾಗಲಿದೆ. ಎಲ್ಲವೂ ಫಲಿತಾಂಶದ ಮೇಲೆ ಅವಲಂಬಿತವಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ  ಬಿ ಎಸ್ ಯಡಿಯೂರಪ್ಪ ಭವಿಷ್ಯ ನುಡಿದರು.  

   ತಿರುಪತಿ ತಿಮ್ಮಪ್ಪನ ದರ್ಶನ ಪಡೆದುಕೊಂಡು ನಗರಕ್ಕೆ ಆಗಮಿಸಿದ ಅವರು ತಮ್ಮ ಡಾಲಸರ್್ ಕಾಲೋನಿ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 22 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ನಂತರ  ರಾಜ್ಯದ ರಾಜಕೀಯದಲ್ಲಿ ಏನೆಲ್ಲಾ ಏರುಪೇರಾಗಲಿದೆ ಎಂಬುದನ್ನು ಜನತೆ ನೋಡಲಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ನಲ್ಲಿ ಗೊಂದಲಗಳಿದ್ದು ಸಿದ್ದರಾಮಯ್ಯ, ಮುಖ್ಯಮಂತ್ರಿ ಕುಮಾರಸ್ವಾಮಿ, ಮಾಜಿ ಪ್ರಧಾನಿ ದೇವೇಗೌಡರ ಹೇಳಿಕೆಗಳು ಸಾಕಷ್ಟು ಗೊಂದಲಗಳನ್ನು ಹುಟ್ಟು ಹಾಕುತ್ತಿವೆ. ಎಲ್ಲದಕ್ಕೂ ಫಲಿತಾಂಶದ ಬಳಿಕ ಸ್ಪಷ್ಟ ಉತ್ತರ ಸಿಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. 

   ಎಲ್ಲರಿಗೂ ಒಳ್ಳೆಯದಾಗಲಿ, ಬರಗಾಲ ನೀಗಲಿ, ನರೇಂದ್ರ ಮೋದಿ ಮತ್ತೊಮ್ಮೆ ದೇಶದ ಪ್ರಧಾನಿಯಾಗಲಿ, ಜನರ ಆಶೀವರ್ಾದ ನಮ್ಮ ಮೇಲೆ ಇರಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಲು ತಿರುಪತಿಗೆ ತೆರಳಿದ್ದೆ. ಬೆಳಿಗ್ಗೆ ದೇವರ ದರ್ಶನ ಪಡೆದು, ಪ್ರಾರ್ಥನೆ ಮಾಡಿ ವಾಪಸ್ಸಾಗಿದ್ದೇನೆ ಎಂದರು. ರವಿವಾರದಿಂದ ಉಪ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಳ್ಳುತ್ತೇನೆ. 

  ಇಂದು ಬೆಳಗ್ಗೆ ಕುಂದಗೋಳಕ್ಕೆ ತೆರಳಲಿದ್ದು ಒಂದೆರಡು ದಿನಗಳ ಬಳಿಕ ಚಿಂಚೋಳಿಗೆ ತೆರಳಿ ಅಭ್ಯಥರ್ಿಗಳ ಪರ ಪ್ರಚಾರ ನಡೆಸಲಿದ್ದೇನೆ ಎಂದರು. 

   ಎರಡೂ ವಿಧಾನ ಸಭಾ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯಥರ್ಿಗಳು ಗೆಲ್ಲಲಿದ್ದು, ಮೈತ್ರಿ ಸಕರ್ಾರದ ಜನ ವಿರೋಧಿ ನೀತಿಯಿಂದ ಬಿಜೆಪಿಗೆ ಉಪ ಚುನಾವಣೆಯಲ್ಲಿ ಹೆಚ್ಚಿನ ಲಾಭವಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.