ಪೋಲಿಸರ ದಾಳಿ: ಮಹಾರಾಷ್ಟ್ರ ಮದ್ಯ ವಶ

Police raid: Maharashtra liquor seized

ಪೋಲಿಸರ ದಾಳಿ: ಮಹಾರಾಷ್ಟ್ರ ಮದ್ಯ ವಶ  

ಇಂಡಿ: ಇಂಡಿ ವಲಯ ವ್ಯಾಪ್ತಿಯ ಚಡಚಣ ತಾಲೂಕಿನ ಹಲಸಂಗಿ ಗ್ರಾಮದಿಂದ ಅಂದಾಜು 1 ಕಿ.ಮೀ.ಅಂತರದಲ್ಲಿ ಕೆಇಬಿ ಎದುರುಗಡೆ ಕ್ಯಾನಲ್ ಪಕ್ಕದಲ್ಲಿರುವ ಪಾನ್ ಶಾಪ್ ಅಂಗಡಿ ಮೇಲೆ ಇಂಡಿ ಅಬಕಾರಿ ಇಲಾಖೆ ಪೋಲಿಸರು ದಿ. 11ರಂದು ಬೆಳಿಗ್ಗೆ 8ಗಂಟೆಗೆ ದಾಳಿ ಮಾಡಿ ಒಟ್ಟು 9 ಲೀಟರ್ ಮಾಹಾರಾಷ್ಟ್ರ ಮದ್ಯವನ್ನು ವಶ ಪಡಿಸಿಕೊಂಡಿದ್ದಾರೆ.ಆರೋಪಿತನಾದ ಇಂಡಿ ತಾಲೂಕಿನ ಹಲಸಂಗಿ ಗ್ರಾಮದ ನಿವಾಸಿ ಶರಣಪ್ಪ ಭೀಮರಾಯ ಜಕ್ಕೂಂಡಿ(34) ಈತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.  

ಇಂಡಿ ವಲಯ ಅಬಕಾರಿ ನೀರೀಕ್ಷಕರು ರಾಹುಲ ಎಸ್ ನಾಯಕ ಇವರ ನೇತೃತ್ವದಲ್ಲಿ ಅಬಕಾರಿ ಉಪ ನೀರೀಕ್ಷಕರು ಪರೀನಾ ವನಕ್ಯಾಳ ಅವರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಸಿಬ್ಬಂದಿಗಳಾದ ಬಸವಂತ ಬೈರಗೊಂಡ ಸಂಜೀವಕುಮಾರ ಹೂವಿನವರ ಹಾಗೂ ಮಲ್ಲಪ್ಪ ಬಿರಾದಾರ ದಾಳಿಯಲ್ಲಿ ಪಾಲ್ಗೊಂಡಿದ್ದರು ಎಂದು ರಾಹುಲ್ ನಾಯಕ ಅಬಕಾರಿ ನೀರೀಕ್ಷಕರು ಇಂಡಿ ವಲಯ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.