ಹುಕ್ಕೇರಿ : ಹುಕ್ಕೇರಿ ತಾಲೂಕಿನ ಹುಕ್ಕೇರಿ, ಸಂಕೇಶ್ವರ ಹಾಗೂ ಯಮಕನಮಡರ್ಿ ಪೋಲಿಸ ಠಾಣೆ ವ್ಯಾಪ್ತಿಯಲ್ಲಿ ನಡೆದ 11 ಮನೆ ದರೋಡೆಗಳಲ್ಲಿ ಕಳುವಾದ ರೂ 12,61,100 ಬೆಲೆಬಾಳುವ ಚಿನ್ನದ ಹಾಗೂ ಬೆಳ್ಳಿ ಆಭರಣಗಳನ್ನು ಪೋಲಿಸರು ವಶಕ್ಕೆ ಪಡೆದು ಆರೋಪಿಯನ್ನು ಬಂಧಿಸಿ ನ್ಯಾಯಾಲಯದೆದುರು ಹಾಜರು ಪಡೆಸಿದ್ದಾರೆ. ಹೀಗಾಗಿ ತಾಲೂಕಿನ ಜನ ನಿಟ್ಟಿಸಿರು ಬಿಟ್ಟಿದ್ದಾರೆ. ಕಳ್ಳತನದಿಂದ ತಾಲೂಕಿನ ಜನರಲ್ಲಿ ಭೀತಿಯ ವಾತಾವರಣ ನಿಮರ್ಾಣಗೊಂಡಿತ್ತು.
ಬೆಳಗಾವಿ ಪೋಲಿಸ ಅಧೀಕ್ಷಕ ಸುಧೀರಕುಮಾರ ರೆಡ್ಡಿ, ಗೋಕಾಕ ಉಪ ವಿಭಾಗದ ಉಪ ಅಧೀಕ್ಷಕ ಡಿ.ಟಿ.ಪ್ರಭು ಇವರ ಮಾರ್ಗದರ್ಶನದಲ್ಲಿ ಹುಕ್ಕೇರಿ ಪೋಲಿಸ ವೃತ್ತ ನಿರೀಕ್ಷಕ ಎಸ್.ಕೆ.ಹೊಳೆನ್ನವರ, ಹುಕ್ಕೇರಿ ಠಾಣೆಯ ಉಪ ನಿರೀಕ್ಷಕ ಪ್ರಲ್ಹಾದ ಚೆನ್ನಗಿರಿ, ಸಂಕೇಶ್ವರ ಠಾಣೆಯ ಉಪ ನಿರೀಕ್ಷಕ ಎಮ್.ಆರ್.ಎಮ್ ತಹಶೀಲದಾರ, ಯಮಕನಮಡರ್ಿ ಠಾಣೆಯ ಉಪ ನಿರೀಕ್ಷಕ ಗಜಾನನ ನಾಯಿಕ ಹಾಗೂ ಪೋಲಿಸ ಸಿಬ್ಬಂದಿಗಳಾದ ಬಿ.ಬಿ.ನೇಲರ್ಿ, ಎಸ್.ಎಮ್.ಚಿಕ್ಕನ್ನವರ, ವಿಠ್ಠಲ ನಾಯಿಕ, ಆರ್.ಆರ್.ಗಿಡ್ಡಪ್ಪಗೋಳ, ಸಿ.ವಾಯ್.ಕಿಲಾರಗಿ, ಅಜೀತ ಚಿಕ್ಕೋಡಿ, ಅಜರ್ುನ ಮಸರಗುಪ್ಪಿ, ಎಸ್.ಎ.ಶೇಖ, ಎಸ್.ಬಿ.ಪೂಜೇರಿ ಬಿ.ಬಿ.ಕರನಿಂಗ, ಆರ್.ಎಸ್.ಪಾಟೀಲ ಇವರು ರಾತ್ರಿ ವೇಳೆ ಗಸ್ತು ಮಾಡುತ್ತಿದ್ದಾಗ ಸ್ಥಳೀಯ ಬಾಯಪಾಸ್ ರಸ್ತೆ ಮೇಲೆ ಸಂಶಯಾಸ್ಪದ ರೀತಿಯಲ್ಲಿ ಅಡ್ಡಾಡುತ್ತಿದ್ದ ಹುಕ್ಕೇರಿ ಚಿಕ್ಕೋಡಿ ರಸ್ತೆ ಮೇಲಿನ ಉಮೇಶ ನಗರದ ನಿವಾಸಿ ಬಾಬು ಯಲ್ಲಪ್ಪ ಭಜಂತ್ರಿ (32) ಇತನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದರು
ಆತ ಕಬ್ಬಿನ ರಾಡ್ನಿಂದ 2017-18 ನೇ ಸಾಲಿನಲ್ಲಿ ತಾಲೂಕಿನ ಸಂಕೇಶ್ವರದಲ್ಲಿ 7, ಹುಕ್ಕೇರಿಯಲ್ಲಿ 1, ಯಮಕನಮಡರ್ಿಯಲ್ಲಿ 3 ಹೀಗೆ ಒಟ್ಟು 11 ಮನೆಗಳಲ್ಲಿ ದರೋಡೆ ಮಾಡಿ ರೂ. 12, 61, 100 ಬೆಲೆಬಾಳುವ ಚಿನ್ನ ಹಾಗೂ ಬೆಳ್ಳಿ ಒಡವೆಗಳು, ನಗದು ರೂ. 3,25000 ಕಳವು ಮಾಡಿ ನಗದು ಹಣವನ್ನು ಚೈನಿಗಾಗಿ ಖಚರ್ು ಮಾಡಿದ್ದಾನೆ. ಒಂದು ಪ್ರಕರಣದ ಚಿನ್ನದ ಒಡವೆಗಳನ್ನು ಚಿಕ್ಕೋಡಿಯ ಚಿನ್ನದ ವ್ಯಾಪಾರಿ ಸವರ್ೊತ್ತಮ ನಾಗರಾಜ ಅರ್ಕಸಾಲಿ ಎಂಬವನಿಗೆ ಕಳವಿನ ಒಡವೆಗಳೆಂದು ಹೇಳಿ ಮಾರಾಟ ಮಾಡಿದ್ದಾನೆ. ಪೋಲಿಸರು ಆತನನ್ನು ಕೂಡ ಬಂಧಿಸಿ ಆತನಿಂದ ಒಡವೆಗಳನ್ನು ವಶಕ್ಕೆ ಪಡೆದಿದ್ದಾರೆ. ಅದರಂತೆ ಉಳಿದ ಚಿನ್ನ ಹಾಗೂ ಬೆಳ್ಳಿ ಒಡವೆಗಳನ್ನು ಆರೋಪಿ ಬಾಬು ಯಲ್ಲಪ್ಪ ಭಜಂತ್ರಿಯಿಂದ ವಶಕ್ಕೆ ಪಡೆದುಕೊಂಡು ಇತನನ್ನು ಹಾಗೂ ಇನ್ನೊರ್ವ ಆರೋಪಿ ಸವರ್ೊತ್ತಮ ನಾಗರಾಜ ಅರ್ಕಸಾಲಿಯನ್ನು ನ್ಯಾಯಾಲಯದೆದುರು ಹಾಜರು ಪಡಿಸಿರುವದಾಗಿ ಪೋಲಿಸ ಮೂಲಗಳು ತಿಳಿಸಿವೆ.