ರಾಮದುರ್ಗ 05: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರ ಪಾತ್ರ ಪ್ರಮುಖವಾಗಿದ್ದು, ಚುನಾವಣೆಯ ಸಂದರ್ಭದಲ್ಲಿ ಯೋಚಿಸಿ ಮತ ಚಲಾಯಿಸಿದಲ್ಲಿ ದೇಶದ ವ್ಯವಸ್ಥಿತ ಆಡಳಿತ ಸಾಧ್ಯವಿದೆ. ಕಾರಣ ಪ್ರತಿಯೊಬ್ಬರು ತಪ್ಪದೆ ತಮ್ಮ ಹಕ್ಕು ಚಲಾಯಿಸಬೇಕೆಂದು ಸಹಾಯಕ ಚುನಾವಣಾಧಿಕಾರಿ ಬಿ. ಸುರೇಶರಾವ್ ಹೇಳಿದರು.
ಪಟ್ಟಣದ ಕೇಂದ್ರ ಗ್ರಂಥಾಲಯದ ಆವರಣದಲ್ಲಿ ಗುರುವಾರ ಸಂಜೆ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ತಾಲೂಕಾ ಆಡಳಿತದ ಸಹಯೋಗದಲ್ಲಿ ಸ್ವೀಪ್ ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ್ದ ಮತದಾನ ಜಾಗೃತಿ ಕವಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾವ್ಯಗಳು ಜನರ ಮನಸ್ಸಿಗೆ ನೇರವಾಗಿ ತಲುಪುವುದರಿಂದ ಕಾವ್ಯವಾಚನದ ಮೂಲಕ ಜಾಗೃತಿ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸ್ವೀಪ್ ಸಮಿತಿ ಅಧ್ಯಕ್ಷ ಡಾ. ಎ.ಜಿ.ಪಾಟೀಲ, ಚುನಾವಣೆಯ ನಂತರ ದೇಶದ ಅಭಿವೃದ್ಧಿಯ ಕನಸಿನೊಂದಿಗೆ ಮತದಾರರು ಮತದಾನ ಮಾಡಿ, ದೇಶಕ್ಕೆ ಕಾಣಿಕೆ ನೀಡಬೇಕೆಂದು ಹೇಳಿದರು.
ತಹಶೀಲ್ದಾರ ಬಸನಗೌಡ ಕೋಟೂರ ಮಾತನಾಡಿ, ತಾಲೂಕಿನಲ್ಲಿರುವ ಶಿಕ್ಷಕರು ಪ್ರತಿ ಗ್ರಾಮಗಳಲ್ಲಿ ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಂಡು ಎಲ್ಲರೂ ತಮ್ಮ ಮತಗಳನ್ನು ಮಾರಿಕೊಳ್ಳದೇ ಕಡ್ಡಾಯವಾಗಿ ಮತ ಚಲಾಯಿಸಲು ಜಾಗೃತಿ ಮೂಡಿಸಬೇಕೆಂದರು.
ಅಧ್ಯಕ್ಷತೆ ವಹಿಸಿದ್ದ ತಾಲೂಕಾ ಕಸಾಪ ಅಧ್ಯಕ್ಷ ಪಾಂಡುರಂಗ ಜಟಗನ್ನವರ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾದರಿಯಾದ ಭಾರತ ದೇಶದ ಉಳಿವಿಗಾಗಿ ಉತ್ತಮ ವ್ಯಕ್ತಿಗಳನ್ನು ಚುನಾವಣೆಯಲ್ಲಿ ಕಾಯ್ಕೆ ಮಾಡುವ ಜವಾಬ್ದಾರಿ ಪ್ರತಿ ಭಾರತೀಯನ ಮೇಲಿದೆ ಎಂದರು.
ಕವಿಗಳಾದ ವಿಜಯಕುಮಾರ ಕಿಳ್ಳಿಕ್ಯಾತರ, ಜಗದೀಶ ಗಾಣಿಗೇರ, ಆನಂದ ಪಾಟೀಲ, ಚಂದನಗೌಡ ಪಾಟೀಲ, ಬಿ.ಯು. ಬೈರಕದಾರ, ಆನಂದ ಹಕ್ಕೆನ್ನವರ, ಆರ್.ಕೆ. ಬಿಕ್ಕನ್ನವರ, ಬಾಳಪ್ಪ ನಡಗಡ್ಡಿ, ಎಸ್.ಜೆ. ನಾಟೀಕರ, ರವಿಕಿರಣ ಪಾಟೀಲ, ಫಕೀರಪ್ಪ ಚಿಗರಿ, ಎಸ್.ಎಂ. ಕಲ್ಲೂರ, ಎಸ್.ವಿ. ಕಲ್ಯಾಣಶೆಟ್ಟಿ ಕಾವ್ಯವಾಚನ ಮಾಡಿದರು.
ಪುರಸಭೆ ಮುಖ್ಯಾಧಿಕಾರಿ ಕೇಶವ ಚೌಗುಲೆ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿದರ್ೇಶಕ ಕೆ.ಎಸ್. ಕಕರ್ಿ, ಬಿ.ಆರ್.ಸಿ ಕ್ಷೇತ್ರ ಸಮನ್ವಯ ಅಧಿಕಾರಿ ಕೆ.ಡಿ.ಅಚನೂರ, ಅಕ್ಷರ ದಾಸೋಹ ಸಹಾಯ ನಿದರ್ೇಶಕ ಬಿ.ಎಫ್.ಮುನವಳ್ಳಿ ಸೇರಿದಂತೆ ಇತರರಿದ್ದರು.
ಪ್ರೊ| ಎಸ್.ಎಂ.ಸಕ್ರಿ ಸ್ವಾಗತಿಸಿದರು. ಶಿಕ್ಷಕರ ಸಂಘದ ಅಧ್ಯಕ್ಷ ಎ.ವಿ. ಪಾಟೀಲ ನಿರೂಪಿಸಿದರು. ಪ್ರೊ| ಪ್ರಕಾಶ ತೆಗ್ಗಿಹಳ್ಳಿ ವಂದಿಸಿದರು. ಕಾರ್ಯಕ್ರಮದ ನಂತರ ಮತದಾನ ಜಾಗೃತಿ ದೀಪೋತ್ಸವ ಕಾರ್ಯಕ್ರಮ ಜರುಗಿತು.