ಲೋಕದರ್ಶನ ವರದಿ
ಕೊಪ್ಪಳ 19: ಕಾವ್ಯ ನದಿ ನೀರಿನಂತೆ ಪ್ರವಹಿಸುತ್ತಲೇ, ವರ್ತಮಾನದ ತಲ್ಲಣಗಳಿಗೆ ಸ್ಪಂದಿಸಬೇಕು, ಆಗಲೇ ಕಾವ್ಯಕ್ಕೆ ಒಂದು ಮೌಲ್ಯ ದಕ್ಕುತ್ತದೆ ಎಂದು ಕವಿ ಶಿ ಕಾ ಬಡಿಗೇರ ಅಭಿಪ್ರಾಯಪಟ್ಟರು.
ಕನರ್ಾಟಕ ಸೂಫಿ ಹಾಗೂ ಶಬರಿ ಪ್ರಕಾಶನ ತುಮಕೂರು ಅವರು, ಸಾಹಿತಿ ಅಕ್ಬರ್ ಕಾಲಿಮಿಚರ್ಿ ಅವರ ಮನೆಯಲ್ಲಿಏರ್ಪಡಿಸಿದ್ದ ಈಚನೂರು ಇಸ್ಮಾಯಿಲ್ ಅವರ ತಾಯ್ತನದ ಸೆರಗು ಹಾಗು ಬೌದ್ದಿಕ ಭಾರತ ಕವನ ಸಂಕಲನಗಳ ಲೋಕಾರ್ಪಣೆ ಬಳಿಕ, ತಾಯ್ತನದ ಸೆರಗು ಕೃತಿ ಕುರಿತು ಕುರಿತು ಮಾತನಾಡಿದರು.
ಕಾವ್ಯ ಬರೀ ಪದಗಳ ಗುಚ್ಚವಾಗದೇ, ರಸಭರಿತ ಹಣ್ಣಾದರೆ ಸವಿಯಲು ಹಿಯವಾಗುತ್ತದೆ ಎಂದರು. 'ಇದು ನಿಚ್ಚಂ ಪೊಸತು, ಅರುಣ ಹೊಂಬಲ್ ಸೊಗಸು' ಎಂಬ ಆದಿಕವಿಯ ಮಾತನ್ನು ಕಾವ್ಯ ಕುರಿತ ವ್ಯಾಖ್ಯೆಯನ್ನು ಉದಾಹರಿಸಿದರು.
ಇಸ್ಮಾಯಿಲ್ ಅವರ ಮತ್ತೊಂದು ಕೃತಿ 'ಬೌದ್ಧಿಕ ಕುರುಹಿನ ಚಿಂತೆ' ಕುರಿತು ಕನ್ನಡಭಾಷಾ ಉಪನ್ಯಾಸಕ ಶಿವಪ್ರಸಾದ ಹಾದಿಮನಿ ಮಾತನಾಡುತ್ತ ಕವಿಗೆ ಸಾಮಾಜಿಕ ಕಳಕಳಿಯ ಜೊತೆಗೆ ಕಾವ್ಯ ರಚನೆಯ ಕುಶಲತೆ ಬೇಕಾಗುತ್ತದೆ.
ಕವಿರಾಜ ಮಾರ್ಗಕಾರ ಹೇಳುವಂತೆ ಕುರಿತೋದಯುಂ ಕಾವ್ಯ ಪರಿಣತಿ ಮತಿಗಳ್ ಎನ್ನುವಂತೆ ನಾವು ಕಾವ್ಯ ಬರೆಯುತ್ತೇವೆ. ಆದರೆ, ಛಂದಸ್ಸು, ಉಪಮೆ ಹಾಗು ರೂಪಕಗಳಿಗೆ ಹೊತ್ತು ಕೊಡದೇ ಹೋದಾಗ, ಕಾವ್ಯ ಹಿಡಿತದಿಂದ ಜಾರಿ ಹೋಗುವ ಸಂಭವ ಇರುತ್ತದೆ. ಹಾಗಾಗಿ ಕವಿ ಎಚ್ಚರಿಕೆಯಿಂದ ಕಾವ್ಯ ಕೃಷಿಗೆ ಇಳಿಯಬೇಕೆಂದು ಸಲಹೆ ನೀಡಿದರು.
ಸಾಹಿತಿ ಅಕ್ಬರ್ ಸಿ ಕಾಲಮಿಚರ್ಿ ಸಂಕಲನ ಬಿಡುಗಡೆಗೊಳಿಸಿ ಮಾತನಾಡುತ್ತ ಕವಿ ತನ್ನ ನೋವು, ಸೆಡವು ಹಾಗೂ ಸಿಟ್ಟುಗಳನ್ನು ಹೊರ ಹಾಕಲು ಇದೊಂದು ಪ್ರಬಲ ಮಾಧ್ಯಮ ಎಂದರು.
ಕವಿ ಈಚನೂರು ಇಸ್ಮಾಯಿಲ್ ಮಾತನಾಡಿ, ಕೊಪ್ಪಳ ಜಿಲ್ಲೆಯ ಉದಾರತೆಯನ್ನು ಕೊಂಡಾಡಿದರು. ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಶಂ ನಿಂ ತಿಮ್ಮನಗೌಡ್ರ ಮಾತನಾಡಿ ಕಾವ್ಯ ಕಾವ್ಯವಾಗಿಯೇ ಇರಬೇಕು. ನಮ್ಮ ಚಿಂತನೆಗಳನ್ನು ಹೊರ ಹಾಕಲಿಕ್ಕೆ ಗದ್ಯವೂ ಇದೆ. ನಿತ್ಯ ಓದು ನಮ್ಮ ಸಾಹಿತ್ಯ ಕೃಷಿಗೆ ಮಳೆ ಇದ್ದಂತೆ. ಹಾಗಾಗಿ ಓದಿಗೆ ಹೆಚ್ಚು ಒತ್ತು ಕೊಡಲು ಕಿವಿ ಮಾತು ಹೇಳಿದರು.ಕವಯಿತ್ರಿ ಅನಸೂಯ ಜಾಗೀರದಾರ ಪ್ರಾಥರ್ಿಸಿದರು. ಶಿಕ್ಷಕ ಶಿವರಾಜ ಏಣಿ ಸ್ವಾಗತಿಸಿದರು. ಶಿಕ್ಷಕ ಮುನಿರಾಜು ಕಾರ್ಯಕ್ರಮ ನಿರೂಪಿಸಿದರ, ಕೊನೆಯಲ್ಲಿ ಕವಿ ಮಂಜುನಾಥ ಚಿತ್ರಗಾರ ವಂದಿಸಿದರು.