ಲೋಕದರ್ಶನ ವರದಿ
ಕಾರವಾರ 12: ರಾಜ್ಯದ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ಗಳಿಗೆ ಸಕರ್ಾರದ ಸಾಲ ಮನ್ನಾ ಯೋಜನೆ ನೀಡಬೇಕೆಂದು ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಹಾಗೂ ಪಿಕಾರ್ಡ ಬ್ಯಾಂಕ್ ಉಪಾಧ್ಯಕ್ಷ ಈಶ್ವರ ನಾಯ್ಕ ಆಗ್ರಹಿಸಿದರು.
ಮುಖ್ಯಮಂತ್ರಿಗಳಿಗೆ ಈ ಸಂಬಂಧ ಜಿಲ್ಲಾಡಳಿತದ ಮೂಲಕ ಲಿಖಿತ ಮನವಿ ನೀಡಿದ ಅವರು ನಂತರ ಕಾರವಾರದಲ್ಲಿ ಸುದ್ದಿಗೋಷ್ಠಿ ಮಾಡಿ ಮಾತನಾಡಿದರು. ಪಿಎಲ್ಡಿ ಬ್ಯಾಂಕ್ನಲ್ಲಿನ ರೈತರ ಸಾಲ ಮನ್ನಾ ಮಾಡಿದರೆ ರಾಜ್ಯ ಸಕರ್ಾರಕ್ಕೆ
180 ಕೋಟಿ ರೂ. ಹೊರೆಯಾಗಲಿದೆ.
ಈ ಹೊರೆಯಲ್ಲಿ ಉತ್ತರ ಕನ್ನಡಕ್ಕೆ 6 ಕೋಟಿ ರೂ. ಸಕರ್ಾರ ನೀಡಿದಂತಾಗುತ್ತದೆ. ಸಹಕಾರಿ ಸಂಘಗಳು ಮತ್ತು ರಾಷ್ಟ್ರೀಕೃತ ಬ್ಯಾಂಕ್ನಲ್ಲಿನ ರೈತರ ಸಾಲ ಮನ್ನಾ ಮಾಡಿರುವ ಕಾರಣ ಪಿಎಲ್ಡಿ ಬ್ಯಾಂಕ್ಗಳಲ್ಲಿ ದೀರ್ಘವಧಿ ಸಾಲ ಮಾಡಿದ ರೈತರು ಸಹ ಇಲ್ಲಿನ ಸಾಲ ಮನ್ನಾ ಆಗಲಿದೆ ಎಂದು ಸಾಲ ತುಂಬುತ್ತಿಲ್ಲ. ನಾವು ರೈತರಿಗೆ ಶೇ,3 ಬಡ್ಡಿ ದರದಲ್ಲಿ ಹಿಡುವಳಿ ನೋಡಿ 10
ಲಕ್ಷ ರೂ.ವರೆಗೆ ಸಾಲ ನೀಡುತ್ತೇವೆ.
ನಬಾರ್ಡನಿಂದ ಹಣ ಪಡೆದು ಸಾಲ ನೀಡುತ್ತೇವೆ. ನಬಾರ್ಡ ಮಾರ್ಗದರ್ಶನದಲ್ಲಿ ಸಾಲ ನೀಡುವಿಕೆ ಇರುತ್ತದೆ. ಇಲ್ಲಿ ಸಹ ರೈತರಿಗೆ ನೀಡಿದ ಸಾಲದ ಮೇಲಿನ ಶೇ.4 ಬಡ್ಡಿಯನ್ನು ಪಿಎಲ್ಡಿ ಬ್ಯಾಂಕ್ಗೆ ಸಕರ್ಾರ ರೈತರ ಪರವಾಗಿ ಬಡ್ಡಿ ತುಂಬುತ್ತದೆ. ಹಾಗಾಗಿ ರೈತರಿಗೆ ಸಾಲ ಮನ್ನಾದ ಭರವಸೆ ಇದೆ. ಇದು ಪಿಎಲ್ಡಿ ಬ್ಯಾಂಕ್ಗಳ ಮೇಲೆ ಪರಿಣಾಮ ಬೀರಿದೆ. ಸಾಲ ಮರುಪಾವತಿಗೆ ಒತ್ತಾಯ ಮಾಡಿ ನೋಟೀಸ್ ಸಹ ನೀಡುವಂತಿಲ್ಲ. ಈ ಸಂಬಂಧ ಸಹಕಾರಿ ಸಂಘಗಳ ಉಪ ನಿಬಂಧಕರಿಂದ ಸೂಚನೆ ಸಹ ಇದೆ ಎಂದು ಈಶ್ವರ ನಾಯ್ಕ ವಿವರಿಸಿದರು.
ಜಿಲ್ಲೆಯ 11 ಪಿಎಲ್ಡಿ ಬ್ಯಾಂಕ್ಗಳ ಪೈಕಿ 8 ಬ್ಯಾಂಕ್ಗಳ ಸಾಲ ವಸೂಲಾತಿ ಶೇ.70
ರಷ್ಟಿದೆ.
60 ಸಾವಿರ ರೈತರು ನಮ್ಮಲ್ಲಿ ಸಾಲ ಪಡೆದಿದ್ದಾರೆ.
81 ಸಾವಿರ ಸದಸ್ಯರು ಪಿಎಲ್ಡಿ ಬ್ಯಾಂಕ್ ಸದಸ್ಯರಿದ್ದಾರೆ.
8.93 ಕೋಟಿ ಸಾಲ ವಸೂಲಾತಿಗೆ ಬಾಕಿ ಇದೆ, 3
ಪಿಎಲ್ಡಿ ಬ್ಯಾಂಕ್ ಸಾಲ ವಸೂಲಾತಿಯಲ್ಲಿ ಹಿಂದೆ ಬಿದ್ದಿವೆ. ಆದರೆ ನಬಾರ್ಡಗೆ ನಾವು ತುಂಬಬೇಕಾದ ಸಾಲ ಮರುಪಾವತಿಯನ್ನು ಮಾಡುತ್ತಿದ್ದೇವೆ ಎಂದು ಪಿಕಾರ್ಡ ಉಪಾಧ್ಯಕ್ಷ ಈಶ್ವರ ನಾಯ್ಕ ಹೇಳಿದರು. ಪಿಕಾರ್ಡ ಅಡಿ
177 ಬ್ಯಾಂಕ್ ಗಳಿವೆ. ಇಲ್ಲಿ ರೈತರ ಸಾಲ
180 ಕೋಟಿ ಯಷ್ಟಿದೆ. ಅದನ್ನು ರಾಜ್ಯ ಸಕರ್ಾರ ಮನ್ನಾ ಮಾಡಬೇಕೆಂದು ವಿನಂತಿಸಿದರು. ಪತ್ರಿಕಾಗೋಷ್ಠಿಯಲ್ಲಿ ಯೋಗೇಶ್ ರಾಯ್ಕರ್, ಎಂ.ಆರ್.ಹೆಗಡೆ, ಭುವನ ಭಾಗ್ವತ,ಶ್ರೀಪಾದ ರಾಯಸ, ಸತೀಶ್ ತಾಂಡೇಲ ಹಾಗೂ ಜಿಲ್ಲೆಯ 11
ಪಿಎಲ್ಡಿ ಬ್ಯಾಂಕ್ ಅಧ್ಯಕ್ಷರ, ನಿದರ್ೇಶಕರು, ಕೆಲ ಸದಸ್ಯರು ಇದ್ದರು.