ಮಿರಜ್ ಪಟ್ಟಣದಲ್ಲಿ ಇನ್ನರ್‌ವ್ಹಿಲ್ ಕ್ಲಬ್ ವತಿಯಿಂದ ಪ್ಲಾಸ್ಟಿಕ್ ಮುಕ್ತ ಅಭಿಯಾನ ಬಟ್ಟೆ ಚೀಲಗಳ ತಯಾರಿಕೆಗೆ ಪ್ರೋತ್ಸಾಹ
ಕಾಗವಾಡ 16 : ಮಹಾರಾಷ್ಟ್ರದ ಮಿರಜ್ ಪಟ್ಟಣದ ಇನ್ನರ್‌ವ್ಹಿಲ್ ಕ್ಲಬ್ ವತಿಯಿಂದ ಇತ್ತಿಚಿಗೆ ಪ್ಲಾಸ್ಟಿಕ್ ಮುಕ್ತ ಸಮಾಜ ಮತ್ತು ಬಟ್ಟೆ ಚೀಲಗಳ ಉಪಯೋಗಕ್ಕಾಗಿ ಪ್ರೋತ್ಸಾಹಿಸಿ, ಪರಿಸರ ರಕ್ಷಣೆಯ ವಿಶೇಷ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು.
ಈ ವೇಳೆ ಇನ್ನರ್‌ವೀಲ್ ಕ್ಲಬ್‌ನ ಮಿರಜ್ ಶಾಖೆಯ ಅಧ್ಯಕ್ಷ ಡಾ. ಪೂಜಾ ಭೋಮಾಜ ಮತ್ತು ಕಾರ್ಯದರ್ಶಿ ಮಧುರಾ ಜೋಶಿ ಮಾತನಾಡಿ, ದಿನನಿತ್ಯದ ಬದುಕಿನಲ್ಲಿ ಪ್ಲಾಸ್ಟಿಕ್ ಬಳಕೆ ಹೆಚ್ಚುತ್ತಿದ್ದು, ಇದರಿಂದ ಪರಿಸರಕ್ಕೆ ಹಾನಿಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ಲಾಸ್ಟಿಕ್ ಬಳಿಕೆಯನ್ನು ಕಡಿಮೆ ಮಾಡಿ, ಬಟ್ಟೆ ಚೀಲಗಳನ್ನು ಉಪಯೋಗಿಸಿ, ಪರಿಸರ ರಕ್ಷಣೆ ಮಾಡಬೇಕೆಂದು ಈ ಅಭಿಯಾನದ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ.
ನಮ್ಮ ಕ್ಲಬ್ ಮೂಲಕ ಮಹಿಳೆಯರಿಗೆ ಬಟ್ಟೆ ಚೀಲಗಳನ್ನು ತಯಾರಿಸಲು ಮತ್ತು ಉಪಯೋಗಿಸಲು ಉತ್ತೇಜನ ನೀಡಲಾಗುತ್ತಿದ್ದು, ಬಟ್ಟೆ ಚೀಲಗಳನ್ನು ತಯಾರಿಸುವ ಯಂತ್ರವನ್ನು ಲಭ್ಯ ಮಾಡಿ ಕೊಡಲಾಗುತ್ತಿದೆ. ಮಹಿಳೆಯರು ಇದರ ಲಾಭ ಪಡೆದುಕೊಳ್ಳಬೇಕೆಂದರು. ಇದೇ ವೇಳೆ ಬಟ್ಟೆ ಚೀಲ ತಯಾರಿಸುವ ಯಂತ್ರವನ್ನು ಪಟ್ಟಣದ ಲಕ್ಷ್ಮಿ ಮಾರ್ಕೆಟ್‌ನಲ್ಲಿರುವ ಮಹಿಳಾ ಉದ್ಯೋಗ ಇಲಾಖೆಗೆ ಹಸ್ತಾಂತರಿಸಲಾಯಿತು.ಈ ಸಮಯದಲ್ಲಿ ರಜಿಯಾ ನಾಯಕವಾಡಿ, ಗಜೇಂದ್ರ ಕಲ್ಲೋಳಿ, ಕೇತಕಿ ಮಹಾಜನ, ಡಾ. ನಿಶಾ ಕರಂಜೆ, ಡಾ. ಗೀತಾ ಕದಂ, ಅನಘಾ ರಾಜೋಪಾಧ್ಯಾಯ, ಹಿಮಾಂಶು ಲೇಲೆ, ಅಮೋಲ್ ಠೊಂಬರೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.