ಧಾರವಾಡ 11: ಧಾರವಾಡ ರಂಗಾಯಣಕ್ಕೆ ನೂತನ ನಿರ್ದೇ ಶಕರಾಗಿ ಅಧಿಕಾರ ಸ್ವಿಕರಿಸಿದ ರಮೇಶ ಎಸ್. ಪರವಿನಾಯ್ಕರ್ ಅವರು ರಂಗಾಯಣದ ರೆಪರ್ಟರಿ ಕಲಾವಿದರೊಂದಿಗೆ ಸಮಾಲೋಚನೆ ಮಾಡಿ ಕಲಾವಿದರ ಸಮಸ್ಯೆಗಳನ್ನು ಆಲಿಸುತ್ತಾ ರಂಗ ಚಟುವಟಿಕೆಗಳ ಅಭಿವೃದಿಗೆ ಪೂರ್ವಕವಾಗಿ ಸಲಹೆ ಸೂಚನೆಗಳನ್ನು ಪಡೆದು ರಂಗ ಚಟುವಟಿಗಳನ್ನು ವಿಸ್ತರಿಕೊಳ್ಳಲು ಕ್ರಿಯಾಯೋಜನೆಗಳನ್ನು ರೂಪಿಸುವದಾಗಿ ತಿಳಿಸಿದರು.
ಅವರು ನಿನ್ನೆ ಸಂಜೆ ರಂಗಾಯಣ ಆವರಣದಲ್ಲಿ ರಂಗಾಸಕ್ತರು ಹಾಗೂ ರೆಪರ್ಟರಿ ಕಲಾವಿದರೊಂದಿಗೆ ಸಭೆ ಜರುಗಿಸಿ ಮಾತನಾಡಿ, ಮುಂದಿನ ದಿನಗಳಲ್ಲಿ ಪ್ರತಿ ಶನಿವಾರ ವಾರಾಂತ್ಯ ನಾಟಕ ಪ್ರದರ್ಶನ ಮತ್ತು ಕಲಾವಿದರೊಂದಿಗೆ ರಂಗದ ಕುರಿತು ಚರ್ಚೆ ನಡೆಸುವದಾಗಿ ತಿಳಿಸಿದರು.
ಮತ್ತು ಕಳೆದ ವಾರ ಬೆಂಗಳೂರಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವರೊಂದಿಗೆ ಜರುಗಿದ ಸಭೆಯಲ್ಲಿ
ಹೊಸಯಲ್ಲಾಪೂರದಲ್ಲಿರುವ ಡಾ. ಗಂಗೂಬಾಯಿಯವರ ಮನೆಯನ್ನು ಸ್ಮಾರಕ ಭವನವನ್ನಾಗಿ ನಿಮರ್ಿಸಲು ವಿನಂತಿಸಿಲಾಗಿದೆ. ಸಚಿವರು ಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ರಾಷ್ಟ್ರೀಯ ನಾಟಕೋತ್ಸವ ಹಾಗೂ ವಿಚಾರ ಸಂಕಿರಣ, ಚಿಣ್ಣರ ಮೇಳ, ಇತರೆ ಯೋಜನೆಗಳನ್ನು ಹಾಕಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಸಭೆಯಲ್ಲಿ ಎಲ್ಲರ ತಿರ್ಮಾ ನದಂತೆ, ಧಾರವಾಡ ರಂಗಾಯಣದ ವ್ಯಾಪ್ತಿಗೆ ಒಳಪಡುವ ಹಾವೇರಿ, ಗದಗ, ಬಾಗಲಕೋಟೆ, ವಿಜಯಪುರ, ಬೆಳಗಾವಿ, ಉತ್ತರ ಕನ್ನಡ ಹಾಗೂ ಧಾರವಾಡದ ಹಿರಿಯ, ಕಿರಿಯ ರಂಗಭೂಮಿ ಕಲಾವಿದರು, ಸಾಹಿತಿಗಳು, ಗಣ್ಯರು ಮತ್ತು ರಂಗಾಸ್ತಾಕರನ್ನು ಒಳಗೊಂಡಂತೆ. ಸಮಾಲೋಚನೆ ಸಭೆಯನ್ನು ಶೀಘ್ರದಲ್ಲಿ ನಡೆಸಲು ನಿರ್ಧಸಲಾಯಿತು. ಈ ಸಮಾಲೋಚನೆ ಸಭೆಯಿಂದ ರಂಗ ಚಟುವಟಿಕೆ ಅಭಿವೃದಿಗೆ ಪೂರಕವಾದ ಸಲಹೆ ಸೂಚನೆಯನ್ನು ಪಡೆಯಲಾಗುವುದು.
ಈ ಸಂದರ್ಭದಲ್ಲಿ ರಂಗಾಯಣದ ಆಡಳಿತಾಧಿಕಾರಿಗಳು, ಹಿರಿಯಕಲಾವಿದರಾದ ವಿಠ್ಠಲ ಕೊಪ್ಪದ, ಚಂದ್ರಶೇಖರ ಜಿಗಜಿನ್ನಗಿ, ಕೆ.ಎಚ್.ನಾಯಕ, ರೆಪರ್ಟರಿ ಕಲಾವಿದರು ಮತ್ತು ಕಛೇರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.