ಲೋಕದರ್ಶನ ವರದಿ
ಬೆಳಗಾವಿ 20: ಉತ್ತರ ಕರ್ನಾಟಕ ವಿಭಾಗದ ವ್ಹಿಟಿಯುದ ಜೈನ್ ಎಂಜಿನೀಯರಿಂಗ್ ಕಾಲೇಜಿನ ಮೆಕಾನಿಕಲ್ ಎಂಜಿನೀಯರಿಂಗ್ ವಿಭಾಗದ ಅಂತಿಮ ವರ್ಷದ ವಿದ್ಯಾಥರ್ಿಗಳು, ತಮ್ಮ ಯೋಜನಾ ಕಾರ್ಯದ ಭಾಗವಾಗಿ ಪ್ಲೇಮ ಟ್ಯೂಬ್ ಅಪರ್ಟಸ್ ಎಂಬ ಆಧುನಿಕ ಸಂಶೋಧನಾ ಸೌಲಭ್ಯವನ್ನು ಯಶಸ್ವಿಯಾಗಿ ತಯಾರಿಸಿ, ಬೆಳಗಾವಿಯ ಜೈನ್ ಕಾಲೇಜ್ ಆಫ್ ಎಂಜಿನೀಯರಿಂಗದಲ್ಲಿ ನೆಲೆಗೊಳಿಸಿದರು.
ಇಂಥದೊಂದು ಯಶಸ್ವಿ ಹಾಗೂ ಪರಿಣಾಮಕಾರಿ ಸಂಶೋಧನೆ ಬೆಳಕು ಕಾಣಲು ವಿದ್ಯಾರ್ಥಿಗಳ ಪ್ರಯತ್ನ, ಸಂಶೋಧಕ ಸುಪರವೈಜರ್ ಡಾ.ಎಂ. ಶ್ರೀಧರ ಬಾಬುರವರ ಮಾರ್ಗದರ್ಶನ ಹಾಗೂ ಐ.ಐ.ಟಿ-ಬಾಂಬೆ ಇವರೆಕ್ಕರ ಸಹಾಯದಿಂದ ಈ ಸಾಧನೆ ಸಾಧ್ಯವಾಯಿತು.
ಈ ಯೋಜನೆಯು ಅತ್ಯಂತ ಮಹತ್ವದ ಪ್ಲೇಮ ವೆಲೊಸಿಟಿಯ ಮಾಪನದಲ್ಲಿ ಪ್ರಮಾಣಕ್ಕನುಗುಣವಾಗಿ ದಹನ ವಸ್ತುಗಳಾದಂಥ ಐ.ಸಿ. ಎಂಜೀನ್, ಬರ್ನರ್ಸ, ಗ್ಯಾಸ್ ಟಬರ್ೈನ್ ಎಂಜೀನ್ಸ್ ಮುಂತಾದವುಗಳ ಡಿಸೈನ್ ರೂಪಿಸುವಲ್ಲಿ ಸಹಾಯಕವಾಗಿದೆ.
ಇದಕ್ಕಿಂತ ಹೆಚ್ಚಾಗಿ, ಸುಪರವೈಜರ್ ಅಭಿಪ್ರಾಯಪಡುವಂತೆ ಪ್ರದರ್ಶಿಸಲ್ಪಟ್ಟ ಈ ಸಂಶೋಧನಾ ಕಾರ್ಯವು ವಿದ್ಯಾಥರ್ಿಗಳ ಸಂಶೋಧನಾ ಹಸಿವನ್ನು ಅಂದರೆ, ಅವರಲ್ಲಿ ಕೌಶಲ್ಯ ಹೆಚ್ಚಿಸಿಸಲು ಹಾಗೂ ಎನಜರ್ಿ ಲ್ಯಾಬೋರೋಟರಿಗಳಲ್ಲಿ ಸಹಾಯಕವಾಗಿದೆ. ಈ ಕಾರ್ಯದಿಂದ ಬಂದ ಫಲಶೃತಿ ಏನೆಂದರೆ, ಅಂತರ್ ರಾಷ್ಟ್ರೀಯ ಸಮ್ಮೇಳನದಲ್ಲಿ ಒಂದು ಸಂಶೋಧನಾ ಲೇಖನದಂರೆ ಸಂಪಕರ್ಿಸಲು ಸಹಾಯಕವಾಗುತ್ತದೆ.
ಈ ವಿಕಾಸಗೊಂಡಿರುವ ಪ್ಲೇಮ್ ಟ್ಯೂಬ್ ಅಪರ್ಟಸ್ ಐ.ಐ.ಟಿ ಪ್ರೊಫೆಸರ್ಗಳಿಂದಲೂ ಪ್ರಶಂಸಿಸಲ್ಪಟ್ಟಿದೆ. ಈ ಸಂಶೋಧನಾ ಕಾರ್ಯವು ಪ್ರಾಂಶುಪಾಲ ಹಾಗೂ ನಿರ್ದೇಶಕ ಡಾ. ಕೆ.ಜಿ ವಿಶ್ವನಾಥ, ವಿಭಾಗದ ಮುಖ್ಯಸ್ಥರು ಪ್ರೊ. ಡಿ.ಬಿ. ಪಾಟೀಲ ಹಾಗೂ ಮೆಕ್ಯಾನಿಕಲ್ ಎಂಜಿನೀಯರಿಂಗ್ ವಿಭಾಗದ ಹಿರಿಯ ಫ್ಯಾಕಲ್ಟೀ ಸದಸ್ಯರುಗಳ ಬೆಂಬಲ ಪಡೆದಿದೆ.