ನವದೆಹಲಿ 12: ರೈಲ್ವೆ ಧನಸಹಾಯದ ಬೇಡಿಕೆಗಳ ಕುರಿತ ಮ್ಯಾರಥಾನ್ ಚರ್ಚೆ ಗೆ ಲೋಕಸಭೆಯಲ್ಲಿಂದು ಉತ್ತರ ನೀಡಿದ ರೈಲ್ವೆ ಸಚಿವ ಪಿಯೂಶ್ ಗೋಯಲ್, 2006, ಜುಲೈ 11ರ ಮುಂಬೈ ಸ್ಫೋಟ ಪ್ರಕರಣವನ್ನು ಉಲ್ಲೇಖಿಸಿ, ಕಾಂಗ್ರೆಸ್ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ.
2009ರಲ್ಲಿ ನಡೆದ ಸರಣಿ ಸ್ಫೋಟ ಪ್ರಕರಣದಲ್ಲಿ 209 ಜನರು ಸಾವನ್ನಪ್ಪಿ, 700ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಮುಂಬೈ ಉಪನಗರ ರೈಲಿನಲ್ಲಿ 2006, ಜುಲೈ 11ರಂದು 11 ನಿಮಿಷಗಳ ಅವಧಿಯಲ್ಲಿ ಏಳು ಕಡೆ ಬಾಂಬ್ ಸ್ಫೋಟ ಸಂಭವಿಸಿತ್ತು. ನಿನ್ನೆ ನಾವು ರೈಲ್ವೆಯ ಬಗ್ಗೆ ತಡರಾತ್ರಿವರೆಗೂ ಚರ್ಚೆ ನಡೆಸಿದೆವು...ಗುರುವಾರ ಪ್ರಮುಖ ದಿನವಾಗಿತ್ತು. ನಾನು ಜನಪ್ರತಿನಿಧಿಯಾಗಿ ಬಂದ ಮುಂಬೈ ನಗರದ 2006, ಜುಲೈ 11ರಂದು ಸರಣಿ ಬಾಂಬ್ ಸ್ಫೋಟಕ್ಕೂ ಸಾಕ್ಷಿಯಾಗಿತ್ತು. ಕನಿಷ್ಠ 209 ಮಂದಿ ಸಾವನ್ನಪ್ಪಿ, 700ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು ಎಂದು ಸಚಿವರು ನೆನಪಿಸಿದರು.
ಅದು ವಿಭಿನ್ನ ಕಥೆ, 2006ರಲ್ಲಿ, ಇಷ್ಟು ದೊಡ್ಡ ಘಟನೆಗಳ ಹೊರತಾಗಿಯೂ ಭಯೋತ್ಪಾದಕ ಕೃತ್ಯದ ದುಷ್ಕರ್ಮಿಗಳ ಬಗ್ಗೆ ಯಾವುದೇ ಕ್ರಮಕೈಗೊಂಡಿರಲಿಲ್ಲ. ಮೋದಿ ಸಕರ್ಾರದ ಅಧಿಕಾರಾವಧಿಯಲ್ಲಿ ಇಂತಹದ್ದೊಂದು ಸಂಭವಿಸಿದ್ದರೆ ಸೂಕ್ತ ಪ್ರತಿಕ್ರಿಯೆ ನೀಡುತ್ತಿದ್ದೆವು ಎಂದು ಹೇಳಿದರು.
ಸೂಕ್ತವಾದ ಪ್ರತಿಕ್ರಿಯೆಯನ್ನು ನೀಡಲಾಗುತ್ತಿತ್ತು ಎಂದು ಅವರು ಹೇಳಿ, ಯುಪಿಎ ಸರಕಾರದ ಮೇಲೆ ಆರೋಪ ಮಾಡುವ ಭರದಲ್ಲಿ ಶೇಮ್ ಎಂಬ ಪದ ಬಳಸಿದರು. ಇದು ಭಾರೀ ಕೋಲಾಹಲಕ್ಕೆ ಕಾರಣವಾಯಿತು. ಸಚಿವರ ಹೇಳಿಕೆಗೆ ಕಾಂಗ್ರೆಸ್ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿ ಗದ್ದಲವೆಬ್ಬಿಸಿದರು. ಭಯೋತ್ಪಾದನೆ ಬಗ್ಗೆ 'ಮೃದು' ಧೋರಣೆ ಅನುಸರಿಸಿದೆ ಎಂದು ಕಾಂಗ್ರೆಸ್ ನೇತೃತ್ವದ ಯುಪಿಎ ವಿರುದ್ಧ ಬಿಜೆಪಿ ಮತ್ತು ಮೋದಿ ಸರಕಾರ ಹೆಚ್ಚಾಗಿ ದೂಷಿಸಿದೆ.