ಪಿಸ್ತೂಲ್ ಶೂಟಿಂಗ್ ಚಾಂಪಿಯನ್ ಸ್ಪರ್ಧೆ: ನಿಧಿ ಸಾಧನೆ
ಬೆಳಗಾವಿ 21: ಇದೇ ದಿ. 17 ರಂದು ನ್ಯೂ ದೆಹಲಿಯ ಡಾ. ಕರಣಿಸಿಂಗ ಶೂಟಿಂಗ್ ರೇಂಜ್‌ದಲ್ಲಿ ನಿಧಿ ರಾಜೇಂದ್ರ ಕುಲಕರ್ಣಿ ರಾಷ್ಟ್ರಮಟ್ಟದ ಪಿಸ್ತೂಲ್ ಶೂಟಿಂಗ್ ಚಾಂಪಿಯನ್ ಸ್ಪರ್ಧೆಯಲ್ಲಿ ನಿಧಿ ಸಾಧನೆ ಮೆರೆದಿದ್ದಾರೆ. ಕರ್ನಾಟಕದಿಂದ ಯುವ ವರ್ಗದಿಂದ ಪ್ರತಿನಿಧಿಸಿ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ಬೆಂಗಳೂರಲ್ಲಿ ಸ್ಪೋರ್ಟ್ಸ ಅಥಾರಟಿ ಆಫ್ ಇಂಡಿಯಾದವರು ಜುಲೈ ತಿಂಗಳಲ್ಲಿ ಏರಿ್ಡಸಿದ್ದ ರಾಜ್ಯ ಮಟ್ಟದ ಚಾಂಪಿಯನಶಿಪ್ ಸ್ಪರ್ಧೆಯಲ್ಲಿ ಭಾಗವಹಿಸಿ ತೇರ್ಗಡೆ ಹೊಂದಿದ್ದರು. ಗೋವಾದಲ್ಲಿ ಜರುಗಿದ ರಾಷ್ಟ್ರ ಮಟ್ಟದ ಪೂರ್ವಭಾವಿ ಸ್ಪರ್ಧೆಯಲ್ಲಿ ತೇರ್ಗಡೆ ಹೊಂದಿ ಈಗ ರಾಷ್ಟ್ರ ಮಟ್ಟದ ಸ್ಪರ್ಧೆಗೆ ನಿಧಿ ಆಯ್ಕೆಯಾಗಿದ್ದಾರೆ.
ನಿಧಿ ಕುಲಕರ್ಣಿ ಇವಳು ಅರ್ಜುನ ಶೂಟಿಂಗ್ ಅಕಾಡಮಿಯ ಗೀರೀಶ ಹಾಲಭಾವಿ ಹಾಗೂ ಹುಬ್ಳಿ ಶೂಟಿಂಗ್ ಅಕಾಡಮಿಯ ರವಿಚಂದ್ರ ಬಾಳೆಹೊಸೂರ ಹತ್ತಿರ ತರಬೇತಿಯನ್ನು ಪಡೆದಿದ್ದಾಳೆ. ಇವಳು ಬೆಳಗಾವಿ ಖ್ಯಾತ ದಂತವೈದ್ಯರಾದ ಡಾ. ರಾಜೇಂದ್ರ ಕುಲಕರ್ಣಿ ಮತ್ತು ಡಾ. ಅಭಾ ಕುಲಕರ್ಣಿ ದಂಪತಿಗಳ ಸುಪುತ್ರಿ.