ಧಾರವಾಡ, 27: ಬಹುಗ್ರಾಮ ಕುಡಿಯುವ ನೀರು ಪೂರೈಕೆ ಯೋಜನೆಯ ಅಡಿಯಲ್ಲಿ ತಾಲೂಕಿನ ಅಮ್ಮಿನಬಾವಿ ಗ್ರಾಮದ ಮಲಪ್ರಭಾ ನೀರು ಸರಬರಾಜು ಕೇಂದ್ರದಿಂದ ಹೆಬ್ಬಳ್ಳಿ ಗ್ರಾಮದವರೆಗೆ ಹಾಕಲಾಗಿರುವ ಪೈಪ್ಲೈನ್ ಮೇಲಿಂದ ಮೇಲೆ ಅಲ್ಲಲ್ಲಿ ಒಡೆಯುವ ಮೂಲಕ ಕುಡಿಯುವ ನೀರು ಕಾರಂಜಿಯಾಗಿ ಪುಟಿದು ವ್ಯಾಪಕವಾಗಿ ಪೋಲಾಗುತ್ತಿದೆ.
ನಿತ್ಯವೂ ಪ್ರಾತಃಕಾಲ ಅಮ್ಮಿನಬಾವಿಯ ಗ್ರಾಮಸ್ಥರನೇಕರು ಹೆಬ್ಬಳ್ಳಿ ರಸ್ತೆಗುಂಟ ವಾಯುವಿಹಾರಕ್ಕೆ ತೆರಳುತ್ತಿದ್ದು, ಹೆಚ್ಚೂ ಕಡಿಮೆ 10 ರಿಂದ 15 ದಿನಗಳಿಗೆ ಒಂದಾವತರ್ಿ ಇಲ್ಲಿಯ ನೀರು ಸರಬರಾಜು ಮಾಡುವ ಪೈಪ್ಲೈನ್ಗಳು ಒಡೆಯುವ ಮೂಲಕ ಅಮೂಲ್ಯ ಕುಡಿಯುವ ನೀರು ವ್ಯರ್ಥ ಪೋಲಾಗುತ್ತಿದೆ. ಇದರಿಂದಾಗಿ ಕುಡಿಯುವ ನೀರಿನ ನಿರೀಕ್ಷೆಯಲ್ಲಿರುವ ಹಳ್ಳಿಗಾಡಿನ ಜನರು ನೀರು ಪೂರೈಕೆಯಾಗದೇ ನಿರಾಸೆ ಅನುಭವಿಸಿ ತೊಂದರೆಪಡುವಂತಾಗಿದೆ ಎಂದು ದೂರಿದ್ದಾರೆ.
ಕಳಪೆ ಕೆಲಸ : ಜಲಮಂಡಳಿಯವರು ಎಲ್ಲೆಲ್ಲಿ ರಿಪೇರಿ ಕೆಲಸ ಕೈಕೊಳ್ಳುವರೋ ಅದೇ ಸ್ಥಳದಲ್ಲಿಯೇ ಮೇಲಿಂದಮೇಲೆ ಪೈಪುಗಳು ಒಡೆದು ನೀರು ಪುಟಿಯುವುದನ್ನು ಗಮನಿಸಿದರೆ ಪ್ರಾರಂಭದಲ್ಲಿ ಕೈಕೊಂಡ ಕಾಮಗಾರಿಯೂ ಸೇರಿದಂತೆ ಪ್ರಸ್ತುತ ಕೈಕೊಳ್ಳುವ ತತ್ಕಾಲದ ರಿಪೇರಿ ಕೆಲಸಗಳು ಕಳಪೆ ಮಟ್ಟದ್ದಾಗಿರುವದರಿಂದಲೇ ಕುಡಿಯುವ ನೀರು ಜನ-ಜಾನುವಾರುಗಳಿಗೆ ಕುಡಿಯಲು ಬಳಕೆಯಾಗದೇ ಎಲ್ಲಿಯೋ ಹೊರಚಿಮ್ಮಿ ಹರಿದು ವ್ಯರ್ಥಗೊಳ್ಳುತ್ತಿದೆ ಎಂದು ವಾಯುವಿಹಾರಿಗಳು ನೇರವಾಗಿ ಆರೋಪಿಸುತ್ತಾರೆ.
ಸರಕಾರ ರೂಪಿಸುವ ಕುಡಿಯುವ ನೀರು ಪೂರೈಕೆಯ ಜನಪರ ಯೋಜನೆಗಳು ಕಳಪೆ ಕಾಮಗಾರಿಯಿಂದಾಗಿ ಜನರನ್ನು ತಲುಪುತ್ತಿಲ್ಲ. ಕೇಂದ್ರ ಮತ್ತು ರಾಜ್ಯ ಸರಕಾರಗಳು ವಿಶ್ವಬ್ಯಾಂಕ್ ನೆರವೂ ಸೇರಿದಂತೆ ಅನೇಕ ಮೂಲಗಳಿಂದ ಸಾಲ ರೂಪದ ಅನುದಾನ ಪಡೆದು ರೂಪಿಸಲಾದ ಜನಕಲ್ಯಾಣ ಯೋಜನೆಗಳು ಜನಜೀವನಕ್ಕೆ ಉಪಯೋಗವಾಗದೇ ಹೋದಲ್ಲಿ ಹಳ್ಳಿಯಿಂದ ದಿಲ್ಲಿಯವರೆಗೂ ಎಲ್ಲರ ಶ್ರಮ ವ್ಯರ್ಥವಾಗುತ್ತದೆ. ಇನ್ನಾದರೂ ಸಂಬಂಧಪಟ್ಟವರು ಇತ್ತಕಡೆ ಗಮನ ನೀಡಿ ಕುಡಿಯುವ ನೀರು ಪೋಲಾಗದಂತೆ ಸೂಕ್ತ ಗುಣಮಟ್ಟದ ಕಾಮಗಾರಿ ಕೈಕೊಳ್ಳಬೇಕೆಂದು ಅಮ್ಮಿನಬಾವಿ ವಾಯುವಿಹಾರಿಗಳ ಸಂಘದ ಎಂ.ಸಿ. ಹುಲ್ಲೂರ, ಶಿವಾನಂದ ತಡಕೋಡ, ಮಲ್ಲಿಕಾಜರ್ುನ ಗದಗಿನ, ಲಕ್ಷ್ಮಣ ಪತ್ತಾರ, ಚಂದ್ರಶೇಖರ ಕೋಲ್ಹಾರದೇಸಾಯಿ ಹಾಗೂ ಕಾಳಪ್ಪ ಬಡಿಗೇರ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.