ಲೋಕದರ್ಶನ ವರದಿ
ಧಾರವಾಡ (ದಡ್ಡಿ ಕಮಲಾಪುರ) 04: ನವ ಶಿಲಾಯುಗದ ವರೆಗೆ ಮಾನವಶಾಸ್ತ್ರ ಮಾತ್ರ ಅಧ್ಯಯನ ಶಾಖೆಯಾಗಿತ್ತು. ನಂತರ ಒಕ್ಕಲುತನದ ಪರಿಣಾಮ ರಾಜ್ಯಶಾಸ್ತ್ರ, ಅರ್ಥಶಾಸ್ತ್ರ ಮತ್ತು ಸಮಾಜ ಶಾಸ್ತ್ರಗಳು ಜೀವ ತಳೆದವು ಎಂದು ಖ್ಯಾತ ಪಕ್ಷಿತಜ್ಞ, ಪರಿಸರವಾದಿ, ಇಂಗ್ಲಿಷ್ ಶಿಕ್ಷಕ ಮತ್ತು ಕೃಷಿಕ ಆರ್.ಜಿ. ತಿಮ್ಮಾಪೂರ ಅಭಿಪ್ರಾಯಪಟ್ಟರು.
ದಡ್ಡಿಕಮಲಾಪುರದ ಸ್ಕೌಟ್ಸ್-ಗೈಡ್ಸ್ನ ಸಸ್ಯ ಚೇತನದಲ್ಲಿ ಮಲ್ಲಸಜ್ಜನ ವ್ಯಾಯಾಮ ಶಾಲೆಯ ಶ್ರೀ ಕೆ.ಜಿ. ನಾಡಗೀರ ದೈಹಿಕ ಶಿಕ್ಷಣ ಮಹಾವಿದ್ಯಾಲಯದ ಬಿ.ಪಿ.ಇಡಿ. ವಿದ್ಯಾಥರ್ಿಗಳ ವಾಷರ್ಿಕ ನಾಯಕತ್ವ ತರಬೇತಿ ಶಿಬಿರದಲ್ಲಿ ಹಳೆ ಶಿಲಾಯುಗ, ನವ ಶಿಲಾಯುಗ, ಲೋಹಯುಗದ ವಿಶಿಷ್ಠ ಸಂಗ್ರಹಗಳನ್ನು ಪ್ರದಶರ್ಿಸಿ ಅವರು ಮಾತನಾಡಿದರು.
ಬೇಟೆ, ಕೃಷಿಗಾಗಿ ಪರಿಕರಗಳ ತಯಾರಿಕೆಗೆ ಬೇಕಾದ ಉಪಕರಣಗಳನ್ನು ಕಲ್ಲು, ಲೋಹದ ಅಚ್ಚು ಬಳಸಿ ರೂಪಿಸಿಕೊಳ್ಳಲು ಆರಂಭಿಸಿದ್ದೇ ನಾಗರಿಕತೆಯ ಉಗಮಕ್ಕೆ ಕಾರಣವಾಯ್ತು. ಬೇಕಾದ ಪರಿಕರ ರೂಪಿಸಿಕೊಂಡು ಉಳಿಸಿದ ಲೋಹದ ಅವಶೇಷ, ಬೇಡವಾದ ತ್ಯಾಜ್ಯ ವಿಲೇವಾರಿ ಆಧರಿಸಿ ಊರ ಹೆಸರುಗಳು ರೂಢಿಗೆ ಬಂದ ವಿಷಯ ವಿಶಿಷ್ಟ ಅಧ್ಯಯನ ಆಕರ ಎಂದ ಆರ್.ಜಿ. ತಿಮ್ಮಾಪೂರ ಅವರು, ಬೂದಿಹಾಳ, ಬೂದಿಗುಪ್ಪೆ, ಬೂದಿಗುಡ್ಡ, ಬೂದನಗುಡ್ಡ, ಕರಗುಪ್ಪಿ ನಮ್ಮ ಹಿರೀಕರ ಬದುಕಿನ ಹೆಜ್ಜೆಗಳ ದಾಖಲಿಕರಣಕ್ಕೆ ಆಕರ ಎಂದು ಹೇಳಿದರು.
ದೈಹಿಕ ಶಿಕ್ಷಣ ಶಿಕ್ಷಕರು, ಪ್ರಾಚ್ಯವಸ್ತು, ಐತಿಹಾಸಿಕ ಮಹತ್ವದ ದಾಖಲೆ ಆಧರಿಸಿದ ಆಕರಗಳ ಸಂಗ್ರಹ ಮತ್ತು ಪಕ್ಷಿಗಳ ವೀಕ್ಷಣೆ, ಗಣತಿ, ದಾಖಲೆ ಹವ್ಯಾಸಗಳನ್ನು ಹೊಂದಿದ್ದೇ ಆದರೆ, ಪರಿಸರ ವಿಜ್ಞಾನ ಮತ್ತು ಇತಿಹಾಸ ಹಾಗೂ ಭೂಗೋಳ ಶಿಕ್ಷಕರಿಗಿಂತ ಹೆಚ್ಚಿನ ತಜ್ಞತೆ, ಸಂಪನ್ಮೂಲತೆ ಜೊತೆಗೆ ವಿದ್ಯಾಥರ್ಿಪ್ರಿಯ ಶಿಕ್ಷಕರಾಗಬಹುದು.
ಹಿಡಕಲ್ ಅಣೆಕಟ್ಟೆ ಸುತ್ತಮುತ್ತ ನವಶಿಲಾಯುಗದ ಗೋರಿಗಳು, ಮುನವಳ್ಳಿಗೆ ಹೋಗುವ ಹಾದಿಯಲ್ಲಿ ಸವದತ್ತಿಯ ಎಲ್ಲಮ್ಮನ ಗುಡ್ಡದ ತಿರುವಿನಲ್ಲಿ ಪುಟ್ಟ ಗುಹಾದೇವಾಲಯವಿದ್ದು, ಜನ ಆಚರಣೆ ಹೆಸರಿನಲ್ಲಿ ಮಹತ್ವದ ಶಾಸನದ ಮೇಲೆ ಹೂರಣ ಅರಿದ ಪರಿಣಾಮ ಆಕರ ನಶಿಸಿದೆ. ಇತಿಹಾಸ ಪ್ರಜ್ಞೆ ಶಿಕ್ಷಕರು ಬೆಳೆಸಿಕೊಳ್ಳದಿದ್ದರೆ, ವಿದ್ಯಾಥರ್ಿಗಳಲ್ಲಿ ಕ್ರಿಯಾಶೀಲತೆ ಮೈಗೂಡಿಸುವಂತೆ ತರಬೇತಿ ನೀಡದಿದ್ದರೆ, ಹಳೆ ಶಿಲಾಯುಗದಲ್ಲಿ ಬೇಟೆಗೆ ಬಳಸುತ್ತಿದ್ದ ಕಲ್ಲಿನ ಕೊಡಲಿಯೊಂದು ಏಲಕ್ಕಿ ಮತ್ತು ಮಸಾಲೆ ಅರೆಯಲು ಬಳಕೆಯಾಗಿ ಸವೆದ ಶಿಲೆ ಆರ್.ಜಿ. ತಿಮ್ಮಾಪೂರ ಪ್ರದಶರ್ಿಸಿದರು.
ನಮ್ಮ ಹಳ್ಳಿಗಾಡಿನಲ್ಲಿ ಬಟ್ಟೆ ಒಗೆಯಲು, ಸ್ನಾನದ ಕಲ್ಲಾಗಿ, ದನ ಕರುಗಳನ್ನು ಕಟ್ಟಲು ಅನೇಕ ಮಹತ್ವದ ಶಿಲಾ ಶಾಸನಗಳನ್ನು ಗೂಟದ ಕಲ್ಲಾಗಿಸಿ ಬಳಸಿದ ಉದಾಹರಣೆಗಳಿವೆ.
ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಮಕ್ಕಳನ್ನು ಕ್ಷೇತ್ರ ಅಧ್ಯಯನದಲ್ಲಿ ತೊಡಗಿಸಿ, ಮಹತ್ವದ ಆಕರಗಳ ಸಂಗ್ರಹಕ್ಕೆ ಪ್ರೋತ್ಸಾಹಿಸಿದರೆ, ತಮ್ಮಂತೆ ಅನೇಕ `ಸ್ಪೆಸಿಮನ್ ಸಂಗ್ರಹಿಸಿ, ಸ್ಥಳೀಯ ಮಹತ್ವವನ್ನು ದಾಖಲಿಸಲು ಸಾಧ್ಯ ಎಂದು ಆರ್.ಜಿ. ತಿಮ್ಮಾಪೂರ ಹೇಳಿದರು.
ಮಹಾವಿದ್ಯಾಲಯದ ವತಿಯಿಂದ ನೀಡಲಾದ ಸಾವಿರ ರೂಪಾಯಿಗಳ ಗೌರವ ಧನವನ್ನು ಆರ್.ಜಿ. ತಿಮ್ಮಾಪೂರ, ಡಾ. ರಾಮಣ್ಣ ಮೂಲಗಿ ಮುಖ್ಯೋಪಾಧ್ಯಾಯರಾಗಿರುವ ಅಮರಗೋಳದ ಭಾರ ಹೊರುವವರ ಮಕ್ಕಳಿಗೆ ಮೀಸಲಿರುವ ಶ್ರೀಮತಿ ಶಿವಲಿಂಗಮ್ಮ ಬಾಳನಗೌಡ್ರ ಸಕರ್ಾರಿ ಕಿರಿಯ ಪ್ರಾಥಮಿಕ ಶಾಲೆಯ, ಡಾ. ರಾಮಣ್ಣ ಮಾಸ್ತರ್ ಪ್ರತಿಷ್ಠಾನದ ವಸತಿ ಶಾಲೆಗೆ ದೇಣಿಗೆಯಾಗಿ ನೀಡಿದರು.
ಮಹಾವಿದ್ಯಾಲಯದ ದೈಹಿಕ ಶಿಕ್ಷಣ ಗೌರವ ನಿದರ್ೇಶಕ ಎಂ.ಜಿ. ತಿಮ್ಮಾಪೂರ ಅವರು ಅತಿಥಿ ಆರ್.ಜಿ. ತಿಮ್ಮಾಪೂರ ಅವರಿಗೆ ಪೇರಲ ಸಸಿ ನೀಡಿ, ಗೌರವಿಸಿದರು. 45 ಜನ ದೈಹಿಕ ಶಿಕ್ಷಣ ಪ್ರಶಿಕ್ಷಣಾಥರ್ಿಗಳು ಈ 6 ದಿನಗಳ ವಾಷರ್ಿಕ ನಾಯಕತ್ವ ಶಿಬಿರದಲ್ಲಿ ಪಾಲ್ಗೊಂಡಿದ್ದು, ರಾಷ್ಟ್ರ ಮಟ್ಟದಲ್ಲಿ ಅಥ್ಲೆಟಿಕ್ಸ್, ವಾಲಿಬಾಲ್, ಖೋ ಖೋ ಮತ್ತು ಕಬಡ್ಡಿ ಪ್ರತಿನಿಧಿಸಿದ ಕ್ರೀಡಾಳುಗಳೂ ಸೇರಿದ್ದಾರೆ. ಮಹಾವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಪಾಲ್ಗೊಂಡಿದ್ದರು.