ಪೋಟೊ ಪೈಲ್: ಸತೀಶ ಅಡವಿ ಅವರ ಭಾವಚಿತ್ರ
ತಾಂಬಾ 16: ಬದಾಮಿ ತಾಲೂಕಿನ ಉಗಲವಾಟ ಗ್ರಾಮದ ಕುರಿಗಾಯಿ ಶರಣಪ್ಪ ಜೂಮ್ಮನಕಟ್ಟಿಯನ್ನು ಹತ್ತೆಮಾಡಿದ ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೇ ನೀಡಬೆಕೆಂದು ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸತೀಶಕುಮಾರ ಅಡವಿ ಆಗ್ರಹಿಸಿದ್ದಾರೆ. ಸರಕಾರ ಕುರಿಗಾಯಿಗಳ ಹಿತರಕ್ಷಣ ಖಾಯ್ದೆಯನ್ನು ಜಾರಿಗೊಳಿಸಬೇಕು ತಮ್ಮ ಆತ್ಮ ರಕ್ಷಣೆಗಾಗಿ ಕುರಿಗಾಯಿಗಳಿಗೆ ಗನ್ ಲೈಸನ್ಸ ನೀಡಬೇಕು. ಮತ್ತೋಮ್ಮೆ ರಾಜ್ಯದಲ್ಲಿ ಇಂತಹ ಘಟನೆ ಪೂನರಾವರ್ತನೆ ಆಗದ ಹಾಗೆ ಕಾನೂನು ಸ್ಥಾಪಿಸಬೇಕು. ಪೋಲಿಸ್ ವರಿಷ್ಠಾಧಿಕಾರಿಗಳು ದುಷ್ಕರ್ಮಿಗಳ ಬಗ್ಗೆ ಸಮಗ್ರ ತನಿಕೆ ಮಾಡಿ ಕಠಿಣ ಶಿಕ್ಷೇ ಆಗುವಂತೆ ಘನ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಬೇಕು. ರಾಜ್ಯದಲ್ಲಿ ಹಲವಾರು ವರ್ಷಗಳಿಂದ ಕುರಿ ಕಳ್ಳತನದ ಪ್ರಕರ್ಣಗಳ ಸಂಖ್ಯೆ, ಆರೋಪಿಗಳ ಪತ್ತೆಯ ಬಗ್ಗೆ ಬಹಿರಂಗ ಪಡಿಸಬೇಕು. ಹಾಗೂ ಕುರಿಗಾಯಿಗಳ ಆತ್ಮಸ್ಥರ್ಯ ತುಂಬಲು ಒಂದು ಸಭೆಯನ್ನು ಮಾಡಿ ಕುರಿಗಾಯಿಗಳಿಗೆ ಬಂದುಕು ತರಬೇತಿ ನೀಡಬೇಕೆಂದು ಆಗ್ರಹಿಸಿದರು. ಈ ಸಂಧರ್ಭದಲ್ಲಿ ಡಿಸಿಸಿ ಬ್ಯಾಂಕಿನ ಮಾಜಿ ನಿದೇರ್ಶಕರಾದ ಬೀರ್ಪ ಜೂಮನಾಳ, ಮಲ್ಲು ಸಣ್ಣತಂಗಿ, ಸಿದ್ದಗೊಂಡ ಹಿರೇಕುರಬರ, ಪರಸು ಬೀಸನಾಳ, ಶ್ರೀಶೈಲ ಪೂಜಾರಿ, ಮಡ್ಡೆಪ್ಪ ಸೂನ್ನದ ಇದ್ದರು.