ಸಂಗನಬಸವ ಫಾರ್ಮಸಿ ಕಾಲೇಜು ಮತ್ತು ಸಂಶೋಧನೆಕೇಂದ್ರದಲ್ಲಿ ಫಾರ್ಮ ಅನ್ವೇಷಣ-2025 ಕಾರ್ಯಕ್ರಮ
ವಿಜಯಪುರ 07 : ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಶ್ರೀ ಸಂಗನಬಸವ ಫಾರ್ಮಸಿ ಕಾಲೇಜು ಮತ್ತು ಸಂಶೋಧನೆಕೇಂದ್ರದಲ್ಲಿ ಫಾರ್ಮ ಅನ್ವೇಷಣ-2025 ಕಾರ್ಯಕ್ರಮಗುರುವಾರ ನಡೆಯಿತು. ಫಾರ್ಮ ಮತ್ತು ಫಾರ್ಮಸಿ, ಪ್ರಾಕ್ಟೀಸ್ ಉದ್ಯಮಶೀಲತೆ ಹಾಗೂ ಸ್ಟಾರ್ಟಅಪ್) ನಾವಿಣ್ಯತೆ ಮತ್ತುಘೋಷಣಾ ಕೇಂದ್ರಗಳು ಹಾಗೂ ಓಷಧೀಯ ಸ್ಟಾರ್ಟಪ್ ಗಳಿಗೆ ಪ್ರೋತ್ಸಾಹಧ್ಯೇಯವಾಕ್ಯದಡಿ ಈ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದಕಾಲೇಜಿನ ಸಹಪ್ರಾಧ್ಯಾಪಕಡಾ. ಶ್ರೀಧರ ಕುಮಾರ ಬಿರಾದಾರ, ಫಾರ್ಮಸಿ ಕ್ಷೇತ್ರದ ಪಿತಾಮಹ ಮಹಾದೇವಲಾಲ ಶ್ರೋಫ್‌ಅವರು ನೀಡಿರುವಕೊಡುಗೆಯನ್ನು ಪರಿಗಣಿಸಿ ಅವರಜನ್ಮದಿನದಂದುರಾಷ್ಟ್ರೀಯ ಫಾರ್ಸಮಿ ಶಿಕ್ಷಣ ದಿನವನ್ನಾಗಿಆಚರಿಸಲಾಗುತ್ತಿದೆಎಂದು ಹೇಳಿದರು. ಬಸವನ ಬಾಗೇವಾಡಿಯ ಬಿ.ಎಲ್.ಡಿ.ಇ ಫಾರ್ಮಸಿ ಕಾಲೇಜಿನ ಪ್ರಾಚಾರ್ಯಡಾ. ಸಿ. ಸಿ. ಸಿಂಪಿ ಮಾತನಾಡಿ, ಫಾರ್ಮಸಿ ವಿದ್ಯಾರ್ಥಿಗಳು ಕೇವಲ ಶಿಕ್ಷಕ ವೃತ್ತಿ, ನಾನಾ ಓಷಧ ಕಾರ್ಖಾನೆಗಳಲ್ಲಿ ಹಾಗೂ ಸರಕಾರದ ನಾನಾ ಇಲಾಖೆಗಳಲ್ಲಿ ಉದ್ಯೋಗ ಪಡೆಯುವಗುರಿ ಇಟ್ಟುಕೊಳ್ಳದೇ ಸ್ವಂತ ಉದ್ಯಮಶೀಲತೆ ಹಾಗೂ ಸಂಶೋಧನೆಕಡೆಗೂ ಗಮನ ಹರಿಸಬೇಕುಎಂದು ಹೇಳಿದರು. ಕಾಲೇಜಿನ ಪ್ರಾಚಾರ್ಯಡಾ. ಮಲ್ಲಿಕಾರ್ಜುನ ಶೆಟ್ಟಿ ಮಾತನಾಡಿ, ಫಾರ್ಮಸಿ ಉದ್ಯಮದಲ್ಲಿರುವ ಅವಕಾಶಗಳ ಕುರಿತು ಮಾಹಿತಿ ನೀಡಿದರು. ಅಲ್ಲದೇ, ಹೊಸ ಸ್ಟಾರ್ಟಪ್ ಪ್ರಾರಂಭಿಸಲು ನಾನಾ ತಂತ್ರಜ್ಞಾನಗಳ ಸದುಪಯೋಗ ಪಡೆಯಬೇಕುಎಂದು ಸಲಹೆ ನೀಡಿದರು. ಫಾರ್ಮಾಕಾಲಜಿ ವಿಭಾಗದ ಮುಖ್ಯಸ್ಥಡಾ. ವಿ. ಪಿ. ಪಾಟೀಲ, ಕವಿತಾ ನೇಸೂರ, ರಾಣಿ ಭಂಡಾರಕವಟೆ, ರೇಣುಕಾ ಸುನಗದ, ಡಾ. ನಂಜಪ್ಪಯ್ಯ, ನಾನಾ ವಿಭಾಗಗಳ ಮುಖ್ಯಸ್ಥರು, ಬೋಧಕ, ಬೋಧಕರ ಹೊರತಾದ ಸಿಬ್ಬಂದಿ ಹಾಗೂ ಕಾಲೇಜಿನ ಸುಮಾರು 150 ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.