ಲೋಕದರ್ಶನ ವರದಿ
ಶಿಗ್ಗಾವಿ 20: ತಾಲೂಕಿನ ಬಂಕಾಪೂರ ಪಟ್ಟಣದ ಸಕರ್ಾರಿ ಪಾಲಿಟೆಕ್ನಿಕ್ ಇ ಆಂಡ್ ಸಿ ಇಂಜನಿಯರಿಂಗ್ ವಿಭಾಗದಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವ ಶಿಗ್ಗಾವಿ ಪಟ್ಟಣದ ನಾಗರಾಜ ಅಜರ್ುನಪ್ಪ ಹಂಚಿನಮನಿ ಇವರು ಬೆಂಗಳೂರಿನ ಜೈನ ವಿಶ್ವವಿದ್ಯಾಲಯದಲ್ಲಿ ಡೆವಲಪ್ಮೆಂಟ್ ಆಂಡ್ ಅನೆಲಾಸಿಸ್ ಆಫ್ ವೈಡ್ಬ್ಯಾಂಡ್ ಮೈಕ್ರೋಸ್ಟ್ರಿಫ್ ಫ್ಯಾಚ್ ಅಂಟೆನ್ನಾ ಫಾರ್ ಮೈಮೊ ಸಿಸ್ಟಮ್ ಎಂಬ ಪ್ರಭಂದಕ್ಕೆ ಎಲೆಕ್ಟ್ರಾನಿಕ್ಸ ಇಂಜನಿಯರಿಂಗ್ ನಲ್ಲಿ ಡಾಕ್ಟರೆಟ್ ಪದವಿಯನ್ನು ಪಡೆದಿದ್ದಾರೆ. ಇವರಿಗೆ ಬೆಂಗಳೂರಿನ ತಾಂತ್ರೀಕ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ಸಿ ಆರ್ ಬೈರಾರೆಡ್ಡಿ ಮಾರ್ಗದರ್ಶನ ಮಾಡಿದ್ದರು, ಇವರಿಗೆ ಶಾಸಕ ಬಸವರಾಜ ಬೊಮ್ಮಾಯಿ ಹಾಗೂ ತಂದೆ ವೃತ್ತಿಯಲ್ಲಿ ಗುತ್ತಿಗೆದಾರರಾದ ಅಜರ್ುನ ಗಿ ಹಂಚಿನಮನಿ ಅವರು ಅಭಿನಂದಿಸಿದ್ದಾರೆ.