ಹೆಣ್ಣು ಮಗುವಿನ ಪೋಷಕರ ಪತ್ತೆಗಾಗಿ ಮನವಿ
ಬಳ್ಳಾರಿ 18:ನಗರದ ಬೆಂಗಳೂರು ರಸ್ತೆಯ ಹೂವಿನ ಮಾರ್ಕೆಟ್ ಹತ್ತಿರ ಪೂಜಾ ಎನ್ನುವ 10 ವರ್ಷದ ಹೆಣ್ಣು ಮಗು 2022ರ ಡಿ.14 ರಂದು ಪತ್ತೆಯಾಗಿದ್ದು, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಸಂಸ್ಥೆಗೆ ದಾಖಲು ಮಾಡಿಕೊಂಡು ಪಾಲನೆ ಮತ್ತು ಪೋಷಣೆ ಮಾಡಲಾಗುತ್ತಿದೆ. ಹೆಣ್ಣು ಮಗುವಿನ ಪೋಷಕರ ಪತ್ತೆಗೆ ಸಹಕರಿಸಬೇಕೆಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ ಎಳೆನಾಗಪ್ಪಅವರು ಮನವಿ ಮಾಡಿದ್ದಾರೆ.
ಹೆಣ್ಣು ಮಗುವಿನ ಪೋಷಕರ ಬಗ್ಗೆ ಮಾಹಿತಿ ಸಿಕ್ಕಲ್ಲಿ ನಗರದ ಕಂಟೋನ್‌ಮೆಂಟ್‌ನ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ದೂ.08392-241373 ಅಥವಾ 9980523452 ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.