ಮಾತೃಭಾಷಾ ಕಲಿಕೆಯಿಂದ ವ್ಯಕ್ತಿತ್ವ ವಿಕಸನ: ರವಿ ಭಜಂತ್ರಿ

Personality development through mother tongue learning: Ravi Bhajantri

ಮಾತೃಭಾಷಾ ಕಲಿಕೆಯಿಂದ ವ್ಯಕ್ತಿತ್ವ ವಿಕಸನ: ರವಿ ಭಜಂತ್ರಿ 

ಬೆಳಗಾವಿ 16: ವಿದ್ಯಾರ್ಥಿಗಳು ಕೀಳರಿಮೆ ತೊರೆಯಬೇಕು, ಆತ್ಮ ವಿಶ್ವಾಸದಿಂದ ಗುರಿಸಾಧನೆಗಾಗಿ ತೊಡಗಬೇಕು. ಮಾತೃಭಾಷಾ ಮೂಲಕ ಕಲಿತರೆ ಕಲಿಕೆ ಪರಿಣಾಮಕಾರಿಯಾಗುತ್ತದೆಯಲ್ಲದೆ ವ್ಯಕ್ತಿತ್ವ ವಿಕಸನವಾಗುತ್ತದೆ. ವಿದ್ಯಾರ್ಥಿಗಳಿಗೆ ಮೊಬೈಲ್‌-ಟಿ.ವಿ.ಗಳಿಂದ ದೂರವಿದ್ದು, ಓದುವ ಹವ್ಯಾಸ ಬೆಳೆಸಿಕೊಂಡು ವಿದ್ಯಾರ್ಥಿಗಳು ತಮ್ಮ ಬದುಕನ್ನು ರೂಪಿಸಿಕೊಳ್ಳಬೇಕು ಎಂದು ನಗರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ರವಿ ಭಜಂತ್ರಿ ಅವರು ನುಡಿದರು.  

ಅವರು ಬುಧವಾರದಂದು ಇಲ್ಲಿಯ ಎಸ್‌.ಪಿ.ಎಚ್‌.ಭರತೇಶ ಕನ್ನಡ ಮಾಧ್ಯಮ ಶಾಲೆಯ ವಾರ್ಷಿಕೋತ್ಸವದ ಮುಖ್ಯ ಅತಿಥಿ ಸ್ಥಾನದಿಂದ ಮಾತನಾಡಿದರು. 

ಅತಿಥಿಗಳಾಗಿ ಆಗಮಿಸಿದ್ದ ಚಂದೂ ಕಲಮನಿ ಅವರು ಮಾತನಾಡಿ ವಿದ್ಯಾರ್ಥಿ ಜೀವನ ಬಂಗಾರದ ಜೀವನ,  ಅದು ಮತ್ತೇ ಸಿಗಲಾರದು. ವಿದ್ಯಾರ್ಥಿಗಳು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ ಪರಿಪೂರ್ಣರಾಗಬೇಕು. ನಿಮ್ಮ ಮನೆತನಕ್ಕೆ, ಕಲಿತ ಸಂಸ್ಥೆಗೆ ಕೀರ್ತಿ ತರಬೇಕು ಎಂದರು. 

ಶಾಲಾ ಸಲಹಾ ಸಮಿತಿ ಅಧ್ಯಕ್ಷ ರಾಜೇಂದ್ರ ರಾಮಗೌಂಡ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಾಧ್ಯಾಪಕ ಭರತೇಶ ಮಾರಣಬಸರಿ ವರದಿ ವಾಚನ ಮಾಡಿದರು. 

8ನೇ ತರಗತಿಯ ವಿದ್ಯಾರ್ಥಿನಿ ಸಂಪ್ರತಿ ದೊಡಕಲ್ಲನ್ನವರ ಸ್ವಾಗತಿಸಿ, 9ನೇ ತರಗತಿಯ ವಿದ್ಯಾರ್ಥಿನಿ ಅದಿತಿ ಕಾಕ್ತೀಕರ ವಂದಿಸಿದರು. 10ನೇ ತರಗತಿಯ ವಿದ್ಯಾರ್ಥಿಯರಾದ ಶಾಫೀನಾ ಸಯ್ಯದ್ ಮತ್ತು ಯಲ್ಲಪ್ಪ ಗುಂಜೀಕರ ನಿರೂಪಿಸಿದರು. 

ಶುಭದಾ ದೊಡ್ಡಣ್ಣವರ, ವಿನೋದ ದೊಡ್ಡಣ್ಣವರ, ಹಿರಾಚಂದ ಕಲಮನಿ, ಹಾಗೂ ಅಪ್ಪಾಸಾಹೇಬ ಚೌಗುಲೆ ಇದ್ದರು.