ರಾಜ್ಯ-ರಾಷ್ಟ್ರಮಟ್ಟದ ಕ್ರೀಡೆಯಲ್ಲಿ ವಿದ್ಯಾಥರ್ಿಗಳ ಸಾಧನೆ

ಕೊಪ್ಪಳ24 : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಪ್ರಸಕ್ತ ಸಾಲಿನಲ್ಲಿ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಕ್ರೀಡಾ ವಿಭಾಗದಲ್ಲಿ ವಿಶೇಷ ಸಾಧನೆ ಮಾಡಿರುವ ಕೊಪ್ಪಳ ಕ್ರೀಡಾ ವಸತಿ ನಿಲಯದ  ಬಾಲಮ್ಮ ಹಾಗೂ ಕುವೆಂಪು ನಗರದ ಸಚಿನ್ ಗೊಂದಳೆ, ಇವರಿಗೆ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ ಅವರು ಶುಕ್ರವಾರದಂದು ಸಹಾಯಧನದ ಚೆಕ್ ವಿತರಣೆ ಮಾಡಿದರು.  

    ಕೊಪ್ಪಳ ಕ್ರೀಡಾ ವಸತಿ ನಿಲಯದ ಬಾಲಮ್ಮ ಹನುಮಪ್ಪ ಮೇಟಿ, ಈ ಕ್ರೀಡಾಪಟು 34ನೇ ಕನರ್ಾಟಕ ರಾಜ್ಯ ಜ್ಯೂನಿಯರ್ ಮತ್ತು ಸೀನಿಯರ್ ಅಥ್ಲೆಟಿಕ್ಸ್ ಚಾಂಪಿಯನ್ ಷಿಪ್-2018-19ರಲ್ಲಿ 2000ಮೀ ಓಟದಲ್ಲಿ ಪ್ರಥಮ ಸ್ಥಾನ ಮತ್ತು ರಾಷ್ಟ್ರ ಮಟ್ಟದಲ್ಲಿ ನಾಲ್ಕನೇ ಸ್ಥಾನ ಪಡೆದು, ಅಲ್ಲದೇ ರಾಜ್ಯಮಟ್ಟದ ಶಾಲಾ ಮಕ್ಕಳ ಆಟೋಟಗಳ ಸ್ಪಧರ್ೆಯಲ್ಲಿ  ಸಚಿನ್ ಗೊಂದಳಿ ಈ ಕ್ರೀಡಾಪಟು ಹ್ಯಾಮರ್ ಥ್ರೋ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದು, ಕೊಪ್ಪಳ ಜಿಲ್ಲೆಗೆ ಕೀತರ್ಿ ತಂದಿದ್ದಾರೆ.  

ಈ ಕ್ರೀಡಾಪಟುಗಳು ಕೊಪ್ಪಳ ಜಿಲ್ಲೆಯಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಿ ಕೀತರ್ಿ ತರಲಿ ಎಂದು ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ ಅವರು ಶುಭ ಹಾರೈಸಿದರು.  ಈ ಸಂಧರ್ಭದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿದರ್ೇಶಕರಾದ ಆರ್.ಜಿ.ನಾಡಗೀರ್ ಉಪಸ್ಥಿತರಿದ್ದರು.