ಲೋಕದರ್ಶನ ವರದಿ
ಚಿಕ್ಕೋಡಿ 26: ಪ್ರಜಾಪ್ರಭುತ್ವ ವ್ಯವಸ್ಥೆಗೆ ಮತದಾನ ಭದ್ರಬುನಾಧಿಯಾಗಿದ್ದು, ಲೋಕಸಭೆ ಚುನಾವಣೆಯನ್ನು ಅಧಿಕಾರಿಗಳು ಚಾಲೇಂಜಯಾಗಿ ತೆಗೆದುಕೊಂಡು ಪಾರದರ್ಶಕ, ನಿರ್ಭಯ, ನ್ಯಾಯ ಸಮ್ಮತವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಡಾ. ಎಸ್.ಬಿ.ಬೊಮ್ಮನ್ನಹಳ್ಳಿ ಹೇಳಿದರು.
ಮಂಗಳವಾರ ಇಲ್ಲಿನ ಆರ್ಡಿ ಕಾಲೇಜಿನ ಸಭಾ ಭವನದಲ್ಲಿ ಹಮ್ಮಿಕೊಂಡು ಚಿಕ್ಕೋಡಿ ಲೋಕಸಭೆ ಕ್ಷೇತ್ರದ ಎಂಟು ವಿಧಾನಸಭೆ ಕ್ಷೇತ್ರಗಳ ವಿವಿಧ ತಂಡದ ಅಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಪಕ್ಷಪಾತವಿಲ್ಲದೆ ತಮಗೆ ನೀಡಿದ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಲೋಪ ರಹಿತವಾಗಿ ಕೆಲಸ ಮಾಡುವುದರಿಂದ ಚುನಾವಣೆ ಶಾಂತಿಯುತವಾಗಿ ನಡೆಯುತ್ತದೆ ಎಂದರು.
ಶಾಂತಿ ಸುವವಸ್ಥಿತವಾಗಿ ಚುನಾವಣೆ ನಡೆಸಿರುವ ಕೀತರ್ಿ ಕನರ್ಾಟಕಕ್ಕೆ ಸಲ್ಲುತ್ತದೆ. ಹೀಗಾಗಿ ಭಾರತ ಚುನಾವಣೆ ಆಯೋಗ ಕನರ್ಾಟಕ ಚುನಾವಣೆ ಆಯೋಗದ ಸಿಇಒ ಅವರನ್ನು ಗೌರವಿಸಿದ್ದು, ಇದೆಲ್ಲ ಕೀತರ್ಿ ಇಡೀ ರಾಜ್ಯದ ಅಧಿಕಾರಿಗಳಿಗೆ ಸಲ್ಲುತ್ತದೆ. ಈಗ ಮುಂಬರುವ ಲೋಕಸಭೆ ಚುನಾವಣೆಯಲ್ಲಿಯೂ ಸಹ ಯಾವುದೇ ಗಲಾಟೆ ಗದ್ದಲವಿಲ್ಲದೆ ಶಾಂತಿಯುತ ಚುನಾವಣೆ ನಡೆಯಲು ವಿವಿಧ ತಂಡದ ಅಧಿಕಾರಿಗಳು ಪ್ರಾಮಾಣಿಕವಾಗಿ ಕರ್ತವ್ಯ ಸಲ್ಲಿಸಬೇಕು ಎಂದರು.
ಚಿಕ್ಕೋಡಿ ಲೋಕಸಭೆ ಕ್ಷೇತ್ರದ ಚುನಾವಣಾಧಿಕಾರಿ ಮತ್ತು ಬೆಳಗಾವಿ ಸಿಇಒ ರಾಜೇಂದ್ರ ಮಾತನಾಡಿ, ಈಗಾಗಲೇ ಚುನಾವಣೆಗೆ ಸಂಬಂಧ ಪಟ್ಟಂತೆ ಕೆಲವೊಂದು ತಂಡಗಳನ್ನು ರಚಣೆ ಮಾಡಲಾಗಿದ್ದು, ಚುನಾವಣೆ ನೀತಿ ಸಂಹಿತೆ ಜಾರಿಯಿಂದ ಹಿಡಿದು ಮುಕ್ತಾಯದವರಿಗೆ ಅಧಿಕಾರಿಗಳು ಸಂಪೂರ್ಣ ಜವಾಬ್ದಾರಿತನದಿಂದ ಕರ್ತವ್ಯ ನಿರ್ವಹಿಸಬೇಕಾಗುತ್ತದೆ. ಯಾವುದೇ ರಾಜಕೀಯ ಪಕ್ಷದ ಜೊತೆ ಕೂಡಿಕೊಂಡು ಕರ್ತವ್ಯದಲ್ಲಿ ಆಲಿಸನ ತೋರಿಸಿದ್ದೇಯಾದರೇ ಅಂತಹ ಅಧಿಕಾರಿಗಳ ವಿರುದ್ಧ ಚುನಾವಣೆ ಆಯೋಗ ಕ್ರಿಮಿನಲ್ ಕೇಸ ಹಾಕಲಾಗುತ್ತದೆ. ಸಣ್ಣ ಪುಟ್ಟ ವಿಷಯಗಳಿಗೆ ಹೆಚ್ಚಿನ ಮಾನ್ಯತೆ ನೀಡದೇ ಚುನಾವಣೆಯನ್ನು ಗಂಭಿರವಾಗಿ ತೆಗೆದುಕೊಂಡು ಚುನಾವಣೆ ಯಶಸ್ವಿಗೆ ಸಹಕರಿಸಬೇಕು ಎಂದರು.
ಲೋಕಸಭೆ ಕ್ಷೇತ್ರದಲ್ಲಿ ಸ್ಥಾಪನೆ ಮಾಡಿರುವ ಚೆಕ್ ಪೋಷ್ಠಗಳಲ್ಲಿ ಅಧಿಕಾರಿಗಳು ಗಂಭೀರವಾಗಿ ಕೆಲಸ ಮಾಡಬೇಕಾಗುತ್ತದೆ. ಯಾವುದೇ ವ್ಯಕ್ತಿ ಕಡೆ 50 ಸಾವಿರ ರೂ ಹಣ ಇದ್ದರೂ ಸಹ ಅಂತವರನ್ನು ವಿಚಾರಣೆ ಮಾಡಬೇಕಾಗುತ್ತದೆ. 10 ಸಾವಿರ ರೂ ಬೆಲೆ ಬಾಳುವ ವಸ್ಥುಗಳನ್ನು ತೆಗೆದುಕೊಂಡು ಹೋಗುತ್ತಿದ್ದರು ಸಹ ಅಂತವರನ್ನು ವಿಚಾರಣೆ ಮಾಡಿ ಸೂಕ್ತ ದಾಖಲೆ ಪರಿಶೀಲಿಸಬೇಕು. ರಾಜಕೀಯ ಪಕ್ಷದ ಮುಖಂಡರು ಮತದಾರರಿಗೆ ಹಂಚಲು ಹಣ, ಹೆಂಡದ ಕಡೆ ಹೆಚ್ಚಿನ ಗಮನ ಹರಿಸಬೇಕು ಎಂದರು.
ಸಭೆಯಲ್ಲಿ ಅಧಿಕಾರಿಗಳಾದ ಚಿಕ್ಕೋಡಿ ಉಪವಿಭಾಗಾಧಿಕಾರಿ ರವೀಂದ್ರ ಕರಲಿಂಗನ್ನವರ, ಎಸ್.ಎಸ್.ಬಿರಾದಾರ, ತಹಶೀಲ್ದಾರ ಡಾ|ಸಂತೋಷ ಬಿರಾದಾರ, ಸಿ.ಎ.ಪಾಟೀಲ ಮುಂತಾದವರು ಇದ್ದರು.