ಬೇರೆ ಜಾತಿ, ಧರ್ಮದವರನ್ನು ಪ್ರೀತಿಸಬೇಕೆ ಹೊರತು ದ್ವೇಷಿಸಬಾರದು: ಮುಖ್ಯಮಂತ್ರಿ ಸಿದ್ದರಾಮಯ್ಯ
People of other castes and religions should be loved, not hated: Chief Minister Siddaramaiah
ಬೇರೆ ಜಾತಿ, ಧರ್ಮದವರನ್ನು ಪ್ರೀತಿಸಬೇಕೆ ಹೊರತು ದ್ವೇಷಿಸಬಾರದು: ಮುಖ್ಯಮಂತ್ರಿ ಸಿದ್ದರಾಮಯ್ಯ
ಜಮಖಂಡಿ 14: ಜಾತಿಗಳು ಬೇರೆಯಾದರು, ಯಾವುದೇ ಧರ್ಮಕ್ಕೆ ಸೇರಿದ್ದರು ಸಹ ಬೇರೆ ಜಾತಿ ಮತ್ತು ಧರ್ಮದವರನ್ನು ಪ್ರೀತಿಸಬೇಕೆ ಹೊರತು ದ್ವೇಷಿಸಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ತಾಲೂಕಿನ ಸಮೀಪ ಬಂಡಿಗಣಿ ಗ್ರಾಮದಲ್ಲಿ ನಡೆದ ಬಸವಗೋಪಾಲ ನೀಲಮಾಣಿಕ ಮಠದ ಆವರಣದಲ್ಲಿ ಆಯೋಜಿಸಿದ ವಿಶ್ವಶಾಂತಿಗಾಗಿ ಸರ್ವಧರ್ಮ ಮಹಾಸಂಗಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮನುಷ್ಯ ಕಾಯಿಗೆ ಬಂದ ಸಮಯದಲ್ಲಿ ಆಸ್ಪತ್ರೆಯಲ್ಲಿ ಸಾವುಬದುಕಿನ ಮಧ್ಯ ಹೋರಾಟ ಮಾಡುವ ಸಮಯದಲ್ಲಿ ರಕ್ತದ ಅವಶ್ಯಕತೆ ಇದ್ದ ಸಮಯದಲ್ಲಿ. ಬೇರೆಯವರ ರಕ್ತ ಶರೀರಕ್ಕೆ ಹಾಕಿದಾಗ ಅದು ಯಾವ ಜಾತಿಯ ಮನುಷ್ಯನ ರಕ್ತ ಎಂದು ಭಾವಿಸುವುದಿಲ್ಲ. ಅದೇ ಗುಣಮುಖನಾದ ಮೇಲೆ ಜಾತಿ ಯಾವುದು. ಯಾವ ಜಾತಿಗೆ ಸೇರಿದವರು ಎಂದು ವಿಚಾರಿಸುತ್ತವೆ. ಇಸ್ಲಾಂ, ಹಿಂದುಗಳ ರಕ್ತೆ ಬೇರೆ ಇರುತ್ತದೆಯೋ, ಇದು ನ್ಯಾಯವೇ, ಧರ್ಮವೇ ಎಂದು ಪ್ರಶ್ನಿಸಿದರು. ಬಸವಣ್ಣನವರು ಜಾತೀಯತೆ ಹೋಗಲಾಡಿಸಲು ಎಲ್ಲರಲ್ಲಿಯೂ ಸಮಾನತೆ ಬರಬೇಕೆಂದು ವಚನಗಳನ್ನು ಸಾರಿದರು ಎಂದು ಬಸವಣ್ಣನವರ ವಚನವನ್ನು ಸಿಎಂ ಹೇಳಿದರು.
ನಮ್ಮಲ್ಲಿ ಇರುವ ಪ್ರೀತಿ ಪ್ರಾಣಿ, ಪಕ್ಷಿಗಳನ್ನು ಪ್ರೀತಿಸುತ್ತೇವೆ. ಆದರೆ, ಮನುಷ್ಯರನ್ನು ದ್ವೇಷಿಸುತ್ತೇವೆ. ಪ್ರೀತಿಸುವುದು ಎಲ್ಲ ಧರ್ಮಗಳ ಮೂಲಮಂತ್ರವಾಗಿದ್ದು, ಅದನ್ನು ಮೊದಲು ಎಲ್ಲರು ಅರ್ಥ ಮಾಡಿಕೊಳ್ಳಬೇಕು. ಜಾತಿ ವ್ಯವಸ್ಥೆಯಿಂದಾಗಿ ಇನ್ನೂ ಗುಲಾಮಗಿರಿ ನಮ್ಮಲ್ಲಿ ಉಳಿದಿದೆ. ಮೇಲು ವರ್ಗದವರಾದರೆ ಗೌರವ ನೀಡುತ್ತಾರೆ. ಕೆಳ ವರ್ಗದವರಾದರೆ ದಲಿತರಿಗೆ ಏಕ ವಚನದಲ್ಲಿ ಮಾತನಾಡುತ್ತಾರೆ. ಇದು ಗುಲಾಮಗಿರಿ ಸಂಕೇತ, ಮೌಡ್ಯತೆಯ ಆಚರಣೆ ಮಾಡುವುದಾದರೆ ವಿದ್ಯಾವಂತರಾಗಿ ಪ್ರಯೋಜನವಿಲ್ಲ. ಈ ವ್ಯವಸ್ಥೆಯನ್ನು ಕಿತ್ತು ಹಾಕಬೇಕು. ಶಿಕ್ಷಣ ಕಲಿತರು ಸಹ ಜಾತಿಯತೆಯನ್ನು ಮಾಡುತ್ತಾರೆ. ನಮ್ಮಲ್ಲಿ ಸಮಾನತೆ ,ಆರ್ಥಿಕತೆ ಹೋಗುವವರೆಗೂ ಸಮಾನತೆ ಕಾಣುವುದಿಲ್ಲ. ಅಂಬೇಡ್ಕರ್ ಅವರು ಅಂದೆ ಹೇಳಿದರು. ಸಮಾನತೆಗಾಗಿ ಸಂವಿಧಾನ ರಚನೆ ಮಾಡಿದರು. ಇಂದುಗೂ ಸಹ ಗುಲಾಮಗಿರಿ ಮುಂದುವರಿದಿದೆ. ರಾಮಾಯಣ ಮತ್ತು ಮಹಾಭಾರತ ಬರೆದವರು ಶಿಕ್ಷಣವಂತರು ಆಗಿದರು. ಅವರು ಸಮಸಮಾಜ ಪರಿವರ್ತನೆಯನ್ನು ಸಾರಿದರು. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಮೇಲೆ ಶೂ ಎಸೆದವನು ಸನಾತನ ಧರ್ಮಕ್ಕೆ ಸೇರಿದವನು. ಎಲ್ಲಿದೆ ಧರ್ಮ. ಕುವೆಂಪು ಅವರು ನಮ್ಮ ಸಮಾಜದಲ್ಲಿ ಸರ್ವ ಜನಾಂಗದ ಶಾಂತಿಯ ತೋಟ ಆಗಬೇಕು ಎಂದರು. ಯಾವುದೆ ಧರ್ಮಕ್ಕೆ ಸೇರಿದರೂ ಸಹ ಎಲ್ಲರನ್ನು ಪ್ರೀತಿಸುವ ಗುಣಗಳು ನಮ್ಮಲ್ಲಿ ಮೂಡಬೇಕು ಎಂದರು.
ಅಂಬೇಡ್ಕರ್ ಅವರು ಸಂವಿಧಾನ ಬರೆದರು ಸಹ ಜಾತಿ ವ್ಯವಸ್ಥೆ ಹೋಗಿಲ್ಲ. ನಾನು ಕಟ್ಟಾ ಬಸವಣ್ಣನವರ ಅನುಯಾಯಿ ಇದ್ದೇನೆ. ನಾನು ಸಿಎಂ ಆದ ಮೇಲೆ ಅದು ಬಸವಣ್ಣನವರ ಜಯಂತಿ ದಿನದಂದು ಪ್ರಮಾಣ ವಚನ ಸ್ವೀಕರಿಸಿದೆ. ಅಂದೆ ಎಲ್ಲ ಸರಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ಬಸವಣ್ಣನವರ ಪೋಟೋ ಪೂಜಿಸಬೇಕು ಎಂದು ಆದೇಶ ಹೊರಡಿಸಿದೆ. ಬಸವಣ್ಣನವರು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದೆ ಎಂದರು. ಚಲಚಿತ್ರ ಕಾಮಿಡಿ ನಟ ಸಾಧುಕೋಕಿಲ್ ಮಾತನಾಡಿ, ರಾಜ್ಯದಲ್ಲಿ ಎಲ್ಲರಿಗೂ ಸಮಬಾಳು, ಸಮಪಾಲು ಎನ್ನುವ ನೀತಿ ಅನುಸರಿಸುತ್ತಿರುವ ಸಿದ್ದರಾಮಯ್ಯ ಅವರ ಸಾಧನೆಯನ್ನು ಪಠ್ಯಪುಸ್ತಕದಲ್ಲಿ ಹಾಗೂ ಇತಿಸ ಪುಟಗಳಲ್ಲಿ ಸೇರಿಸಬೇಕು ಎಂದರು.
ಅಬಕಾರಿ ಸಚಿವ ಆರ್.ಬಿ.ತಿಮ್ಮಾಪೂರ ಮಾತನಾಡಿ, ಇಂದಿನ ದಿನಗಳಲ್ಲಿ ಹಿಂದು ಧರ್ಮದಲ್ಲಿ ಅಸ್ಪ್ರಶ್ಯತೆ ತಾಂಡವಾಡುತ್ತಿದೆ. ದಲಿತ ಸಮುದಾಯದಲ್ಲಿ ಅಸಮಾನತೆ ಕಾಣುತ್ತಿದೆ. ಹೀಗಾಗಿ ಬಸವ ಧರ್ಮ ಅಸ್ತಿತ್ವಕ್ಕೆ ಬಂದರೆ ನಾನು ಧರ್ಮದ ಕಾಲಂನಲ್ಲಿ ಬಸವಧರ್ಮ ಎಂದು ಬರೆಸುತ್ತೇನೆ ಎಂದರು. ಮಾಝಿ ಸಚಿವೆ ಉಮಾಶ್ರೀ, ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನ್ನವರ, ಕೈಗಾರಿಕೆ, ಮೂಲಸೌಕರ್ಯಗಳ ನಿಗಮ ಅಧ್ಯಕ್ಷ ಎಸ್,ಜಿ,ನಂಜಯ್ಯನಮಠ, ಕಾಂಗ್ರೇಸ್ ಪಕ್ಷದ ನಾಯಕ ಸಿದ್ದು ಕೊಣ್ಣೂರ, ಬದಾಮಿ ಶಾಸಕ ಭೀಮಸೇನ ಚಿಮ್ಮನಕಟ್ಟಿ ಸೇರಿದಂತೆ ವಿವಿಧ ಮಠಾಧೀಶರುಗಳು ಹಾಗೂ ಬಂಡಿಗಣಿ ಬಸವಗೋಪಾಲ ನೀಲಮಾಣಿಕ ಮಠ ಸ್ವಾಮೀಜಿಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಒಂದು ಲಕ್ಷಕ್ಕೂ ಅಧಿಕ ಭಕ್ತರು ಕಾರ್ಯಕ್ರಮದಲ್ಲಿ ಭಾಗಿಯಾಗಿದರು. ಪೋಲಿಸ್ ಬೀಗಿ ಬಂದೋಬಸ್ತ್ ನಿಯೋಜಿಸಲಾಗಿತ್ತು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 