ಸ್ವಾರ್ಥ ರಾಜಕಾರಣ ಮಾಡುತ್ತಿರುವ ಬಿಜೆಪಿ ವಿರುದ್ಧ ಜನಾಂದೋಲನ ನಡೆಸಬೇಕಿದೆ- ಮಾನೆ
ಹಾನಗಲ್ 21: ಮಾನವೀಯತೆಯ ಉಳಿವಿಗಾಗಿ ಕಾಂಗ್ರೆಸ್ ಹೋರಾಡುತ್ತಿದ್ದರೆ, ಬಿಜೆಪಿ ದ್ವೇಷ ಹರಡಿ, ಭಾವನೆ ಕೆರಳಿಸಿ ರಾಜಕೀಯ ಸ್ವಾರ್ಥ ಸಾಧನೆಗೆ ಮುಂದಾಗಿದೆ.ಸಂವಿಧಾನಕ್ಕೆಅಪಚಾರ ಮಾಡುತ್ತಿದೆ.ಇಂಥ ಬಿಜೆಪಿ ವಿರುದ್ಧಜನಾಂದೋಲನ ನಡೆಸಬೇಕಿದೆಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.
ಇಲ್ಲಿನತಮ್ಮಜನಸಂಪರ್ಕಕಚೇರಿಯಲ್ಲಿಡಿ. 27 ರಂದು ಬೆಳಗಾವಿಯಲ್ಲಿ ನಡೆಯಲಿರುವಗಾಂಧಿ ಭಾರತಕಾಂಗ್ರೆಸ್ ಸಮಾವೇಶದ ಹಿನ್ನೆಲೆಯಲ್ಲಿ ನಡೆದಕಾಂಗ್ರೆಸ್‌ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಪ್ರತಿಯೊಬ್ಬರಿಗೂ ಸಾಮಾಜಿಕ ನ್ಯಾಯದೊರಕಬೇಕು, ಪ್ರತಿಯೊಬ್ಬರೂ ಸಹ ಸ್ವಾಭಿಮಾನಿಗಳಾಗಿ ಸ್ವಾಭಿಮಾನದಿಂದ ಬದುಕಬೇಕುಎಂದು100 ವರ್ಷಗಳ ಹಿಂದೆ ಬೆಳಗಾವಿಯಲ್ಲಿ ನಡೆದಕಾಂಗ್ರೆಸ್‌ಅಧಿವೇಶನದಅಧ್ಯಕ್ಷತೆ ವಹಿಸಿ ಗಾಂಧೀಜಿ ನಿರ್ಣಯಕೈಗೊಂಡಿದ್ದರು.ಸ್ವಾತಂತ್ರ್ಯ ಹೋರಾಟಕ್ಕೆ ದಿಟ್ಟ ನಾಯಕತ್ವ ವಹಿಸಿ ದೇಶಕ್ಕೆಗಾಂಧೀಜಿ ಸ್ವಾತಂತ್ರ್ಯತಂದುಕೊಟ್ಟರೆ, ಡಾ.ಬಿ.ಆರ್.ಅಂಬೇಡ್ಕರ್‌ಅವರು ಸಂವಿಧಾನ ರಚಿಸಿ ನಮಗೆಲ್ಲ ಹಕ್ಕುಗಳನ್ನು ಕೊಟ್ಟರು. ಅಂಬೇಡ್ಕರ್‌ಅವರು ಸಂವಿಧಾನರಚಿಸದೇಇದ್ದರೆ ಸದನವೇಇರುತ್ತಿರಲಿಲ್ಲ. ಆದರೆಅದೇ ಸದನದಲ್ಲಿಂದುದುಷ್ಟ ಶಕ್ತಿಗಳ ಕಾರುಬಾರು ಹೆಚ್ಚುತ್ತಿದೆ.ಮಹಿಳೆಯರನ್ನು ಅಪಮಾನಿಸುವ, ಅಗೌರವತೋರುವ ನೀಚ ಮನಸ್ಥಿತಿ ಪ್ರದರ್ಶಿಸಲಾಗುತ್ತಿದೆ.ಇವೆಲ್ಲ ಬೆಳವಣಿಗೆಗಳಿಂದ ಸಿದ್ಧಾಂತದೊಂದಿಗೆ ರಾಜಕಾರಣ ಮಾಡುವರೂ ಸಹ ಹಿಂದೇಟು ಹಾಕುವಂತಾಗಿದೆಎಂದುಆತಂಕ ವ್ಯಕ್ತಪಡಿಸಿದ ಅವರುಡಿ. 27 ರಂದು ಬೆಳಗಾವಿ ಮತ್ತೊಮ್ಮೆಐತಿಹಾಸಿಕ ದಿನಕ್ಕೆ ಸಾಕ್ಷಿಯಾಗುತ್ತಿದೆ. ಅಂದು ನಡೆಯುವಗಾಂಧಿ ಭಾರತಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸೋಣಎಂದರು.
ಕಾಂಗ್ರೆಸ್‌ಜಿಲ್ಲಾಧ್ಯಕ್ಷಸಂಜೀವಕುಮಾರ ನೀರಲಗಿ ಮಾತನಾಡಿಸಂವಿಧಾನದ ಬದಲಾವಣೆ ಬಿಜೆಪಿಯ ಮೂಲ ಅಜೆಂಡಾ.ಸ್ವತಃಕೇಂದ್ರ ಗೃಹ ಸಚಿವಅಮಿತ್ ಶಾ ಅವರ ಬಾಯಲ್ಲಿಇದಕ್ಕೆ ಪುಷ್ಟಿ ನೀಡುವಂತ ಮಾತು ಬಂದಿದೆ.ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಂವಿಧಾನದ ಮೇಲೆ ನಿಜಕ್ಕೂ ನಂಬಿಕೆ ಇದ್ದರೆಕೂಡಲೇಅಮಿತ್ ಶಾ ಅವರನ್ನು ಸಚಿವ ಸಂಪುಟದಿಂದಕಿತ್ತೊಗೆಯಬೇಕು.ಅಂಬೇಡ್ಕರ್‌ಅವರಿಗೆ ಮಾಡಿದಅವಮಾನವೂಒಂದೇ, ಭಾರತ ಮಾತೆಗೆ ಮಾಡುವಅವಮಾನವೂಒಂದೇಎಂದುಆಕ್ರೋಶ ವ್ಯಕ್ತಪಡಿಸಿದ ಅವರುಬೆಳಗಾವಿಯಲ್ಲಿ ನಡೆಯುವಗಾಂಧಿ ಭಾರತ ಸಮಾವೇಶಕ್ಕೆತಾಲೂಕಿನಿಂದಸ್ವಯಂಪ್ರೇರಣೆಯಿಂದಹೆಚ್ಚಿನ ಸಂಖ್ಯೆಯಕಾರ್ಯಕರ್ತರು ಆಗಮಿಸಬೇಕು.ಪ್ರತಿ ಬೂತ್‌ಗಳಲ್ಲಿಯೂ ಸಹ ಗಾಂಧೀಜಿ ವಿಚಾರಧಾರೆಗಳ ಬಗ್ಗೆ ಅರಿವು ಮೂಡಿಸಬೇಕುಎಂದರು.
ಬ್ಲಾಕ್‌ಕಾಂಗ್ರೆಸ್‌ಅಧ್ಯಕ್ಷರಾದ ಹನುಮಂತಪ್ಪ ಮರಗಡಿ,ಮಂಜುಗೊರಣ್ಣನವರ,ನಗರಕಾಂಗ್ರೆಸ್‌ಅಧ್ಯಕ್ಷ ಮತೀನ್ ಶಿರಬಡಗಿ,ಕೆಪಿಸಿಸಿ ಸದಸ್ಯಟಾಕನಗೌಡ ಪಾಟೀಲ,ಪುರಸಭೆಅಧ್ಯಕ್ಷೆ ಮಮತಾಆರೆಗೊಪ್ಪ, ಉಪಾಧ್ಯಕ್ಷೆ ವೀಣಾಗುಡಿ, ಮುಖಂಡರಾದಚಂದ್ರ್ಪಜಾಲಗಾರ, ಸಿದ್ದನಗೌಡ ಪಾಟೀಲ, ಈರಣ್ಣ ಬೈಲವಾಳ, ಗೀತಾ ಪೂಜಾರ, ಅನಿತಾ ಶಿವೂರ, ಶಿವು ಭದ್ರಾವತಿ, ಶಿವು ತಳವಾರ, ಆದರ್ಶ ಶೆಟ್ಟಿ ಕಲವೀರ್ಪ ಪವಾಡಿ, ಪುಟ್ಟಪ್ಪ ನರೇಗಲ್, ಭರಮಣ್ಣ ಶಿವೂರ, ಮೆಹಬೂಬಅಲಿ ಬ್ಯಾಡಗಿ, ಸತ್ತಾರಸಾಬ ಅರಳೇಶ್ವರ ಸೇರಿದಂತೆ ಪದಾಧಿಕಾರಿಗಳು, ಮುಖಂಡರು,ನೂರಾರುಕಾರ್ಯಕರ್ತರುಇದ್ದರು.