ನೌಕರರ ಬದುಕು ಉತ್ತಮವಾಗುವಲ್ಲಿ ಪಿಂಚಣಿ ಸಹಾಯ: ಎಂ.ರೇಣುಕಾ

ಲೋಕದರ್ಶನ ವರದಿ

ಕಂಪ್ಲಿ 28:ನಿಶ್ಚಿತ ಪಿಂಚಣಿಯಿಂದ ನೌಕರರ ಬದುಕು ಉತ್ತಮವಾಗಿರಲು ಸಾಧ್ಯ ಎಂದು ತಹಶೀಲ್ದಾರ್ ಎಂ.ರೇಣುಕಾ ಹೇಳಿದರು ತಾಲ್ಲೂಕಿನ ಸಕ್ಕರೆ ಕಾಖರ್ಾನೆಯ ಕ್ವೀನ್ ಮೇರೆ ಶಾಲೆಯ ಸಮುದಾಯ ಭವನದಲ್ಲಿ ಕನರ್ಾಟಕ ರಾಜ್ಯ ಸಕರ್ಾರಿ ಎನ್ಪಿಎಸ್ ನೌಕರರ ಸಂಘದ ಕಂಪ್ಲಿ ತಾಲ್ಲೂಕು ಘಟಕದಿಂದ ಶನಿವಾರ ಹಮ್ಮಿಕೊಂಡಿದ್ದ ರಕ್ತ ಕೊಟ್ಟೇವು ಪಿಂಚಣಿ ಬಿಡೆವು ಕಾರ್ಯಕ್ರಮದ ರಕ್ತದಾನಿಗಳಿಗೆ ಅಭಿನಂದನಾ ಸಮಾರಂಭ ಹಾಗೂ ಬಳ್ಳಾರಿ ಜಿಲ್ಲಾ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಮಾತನಾಡಿ, ಹೊಸ ಪಿಂಚಣಿ ಜಾರಿಯಿಂದ ನೌಕರರ ಜೀವನ ಕಷ್ಟಕರದಲ್ಲಿ ನಡೆಯುವಂತಾಗಿದೆ. ನಿಶ್ಚಿತ ಪಿಂಚಣಿಯನ್ನು ಮುಂದುವರೆಸಿದರೆ ಮಾತ್ರ ನೌಕರರಿಗೆ ಸೌಲಭ್ಯ ದೊರೆಯಲು ಸಾಧ್ಯ ಎಂದರು.

ನಂತರ ಕನರ್ಾಟಕ ರಾಜ್ಯ ಸಕರ್ಾರಿ ಎನ್ಪಿಎಸ್ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದಶರ್ಿ ಎಂ.ಎ.ನಾಗನಗೌಡ ಮಾತನಾಡಿ, ಸಂಘಟನೆಯ ಹೋರಾಟದೊಂದಿಗೆ ನಿಶ್ಚಿತ ಪಿಂಚಣಿ ಪಡೆಯಬಹುದಾಗಿದೆ. ಹೊಸ ಪಿಂಚಣಿಯನ್ನು ಸಕರ್ಾರ ರದ್ದುಗೊಳಿಸಿ, ಹಳೇ ಪಿಂಚಣಿ ಮುಂದುವರೆಸುವ ಭರವಸೆ ನೀಡಿದೆ. ಸಕರ್ಾರ ನೀಡಿದ ಭರವಸೆಯಂತೆ ನಿಶ್ಚಿತ ಪಿಂಚಣಿಯನ್ನು ಮುಂದುವರೆಸಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನದಲ್ಲಿ ಅಮರಣಾಂತಿಕ ಉಪವಾಸ ಚಳುವಳಿ ಮಾಡಲಾಗುವುದು ಎಂದರು.

ಈ ಸಂದರ್ಭದಲ್ಲಿ ರಕ್ತದಾನಿಗಳಿಗೆ ಅಭಿನಂದನೆ ಹಾಗೂ ಗಣ್ಯರಿಗೆ ಸನ್ಮಾನಿಸಿ ಗೌರವಿಸಲಾಯಿತು. ರಾಜ್ಯ ಸಕರ್ಾರಿ ಎನ್ಪಿಎಸ್ ನೌಕರರ ಸಂಘದ ಕಂಪ್ಲಿ ತಾಲ್ಲೂಕು ಘಟಕ ಅಧ್ಯಕ್ಷ ರೇವಣಸಿದ್ದೇಶ್ ಅಧ್ಯಕ್ಷತೆವಹಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಆನಂದ್ ಪಾಸ್ಟರ್, ಬಳ್ಳಾರಿ ಜಿಲ್ಲಾಧ್ಯಕ್ಷ ತಿಪ್ಪಾರೆಡ್ಡಿ, ಎನ್ಜಿಒ ಸಂಘದ ಅಧ್ಯಕ್ಷ ಎಸ್.ಜಿ.ಚಿತ್ರಗಾರ, ಪ್ರಧಾನ ಕಾರ್ಯದಶರ್ಿ ಸೋಮಶೇಖರ್, ನಾಮನಿದರ್ೇಶಿತ ಉಪಾಧ್ಯಕ್ಷ ಕೆ.ಸಿ.ಭೀಮಣ್ಣ, ಜಿಲ್ಲಾ ಪ್ರತಿನಿಧಿ ದೊಡ್ಡಬಸಪ್ಪ, ಜಿಲ್ಲಾ ಸಂಘಟನಾ ಕಾರ್ಯದಶರ್ಿ ಶಂಕರ್, ಸಿಆರ್ಪಿಗಳಾದ ಜೆ.ಮಂಜುನಾಥ, ಶ್ರೀಕಾಂತ್, ಹನುಮೇಶ್, ಮುಖಂಡರಾದ ಇಟಗಿ ಬಸವರಾಜಗೌಡ, ಗಿರೀಶ್ ಬಾಬು, ಸುರೇಶ್, ಕರಿಬಸಪ್ಪ, ಜಿ.ಪಕ್ಕೀರಪ್ಪ, ಸತೀಶ್ ಬಡಿಗೇರ್, ಹನುಮಂತಪ್ಪ ಬಿ, ಬಸವರಾಜ, ನಾಗರಾಜ ನಾಯಕ್, ಸೂರ್ಯನಾರಾಯಣ, ಅಂಜಿನಪ್ಪ, ಮರಿಸ್ವಾಮಿ, ಪ್ರಶಾಂತ್ ಸೇರಿದಂತೆ ನೌಕರರು ಪಾಲ್ಗೊಂಡಿದ್ದರು.