ಹೋಳಿ ಹಬ್ಬದ ನಿಮಿತ್ಯ ಶಾಂತಿ ಪಾಲನೆ ಸಭೆ
Peacekeeping meeting on the occasion of Holi festival
ಯರಗಟ್ಟಿ, 28 : ಸಮೀಪದ ಗ್ರಾಮದಲ್ಲಿ ಹೋಳಿ ಹಬ್ಬ ಐತಿಹಾಸಿಕ ಮಹತ್ವ ಹೊಂದಿದ್ದು, ಯಾವುದೇ ರೀತಿಯ ಗೊಂದಲ ಗಲಾಟೆಗಳಿಗೆ ಅವಕಾಶ ನೀಡದಂತೆ ಶಾಂತಿಯುತ ಹಬ್ಬ ಆಚರಣೆ ನಡೆಯಲಿ ಎಂದು ಮುರಗೋಡ ಠಾಣೆ ಪಿಎಸ್‌ಐ ಡಬ್ಲೂ.ಎಚ್.ಯಾದವಾಡ ಹೇಳಿದರು. ಗ್ರಾಮದ ಮಾರುತಿ ಮಂದಿರ ಸಭಾಭವನದಲ್ಲಿ ಹೋಳಿ ಹಾಗೂ ರಂಜಾನ ಹಬ್ಬದ ಅಂಗವಾಗಿ ಶುಕ್ರವಾರ ಹಮ್ಮಿಕೊಡಿದ್ದ ಶಾಂತಿ ಪಾಲನೆ ಸಭೆಯಲ್ಲಿ ಮಾತನಾಡಿದರು. ಪಿಡಿಒ ರಾಘವೇಂದ್ರಕುಮಾರ ಎಸ್.ಪಿ, ಮಾತನಾಡಿ, ಗ್ರಾಮದ ಯುವಕರು ವಾರ್ನಿಸ ತತ್ತಿ ಎಸೆಯುವದನ್ನು ನಿಷೇಧಿಸಲಾಗಿದ್ದು. ನೈಸರ್ಗಿಕ ಬಣ್ಣಗಳನ್ನು ಉಪಯೋಗಿಸಬೇಕು ದ್ವಿತೀಯ ಪಿಯುಸಿ ಪರೀಕ್ಷೆ ಇರುವದರಿಂದ ಬಲವಂತವಾಗಿ ಬಣ್ಣ ಎರಚಬಾರದು ಎಂದರು.ಹುಸೇನಬಿ ಕುದರಿ, ಮಹಾದೇವ ಬೆನಕಟ್ಟಿ, ಪಕ್ರುಸಾಬ ಬಾಗವಾನ, ನೀಲಕಂಠ ಹಂಜಿ, ಬಸವಣ್ಣೆಪ್ಪ ಕಲಬಸನ್ನವರ, ಮಂಜುನಾಥ ಬಂದಕನವರ, ಅರುಣ ವನ್ನೂರ, ಪರಸಪ್ಪ ಮಾದರ ಸಂಜೀವಿನಿ ಮಹಿಳಾ ಸಂಘದ ಸದಸ್ಯರು ಇದ್ದರು.
ತಿಲಾರಿ ಘಾಟ್ ಅರಣ್ಯದಲ್ಲಿ ಬೆಳಗಾವಿ ಮಹಿಳೆಯ ಹತ್ಯೆ: ಮಹಾ ಪೊಲೀಸರಿಂದ 3 ಬಂಧನ, ಅನಾಥ ಶವ ಪ್ರಕರಣಕ್ಕೆ ರೋಚಕ ತಿರುವು
ಕುಟುಂಬ ಸಮೇತ ಯಲ್ಲಮ್ಮನ ದರ್ಶನ ಪಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಪೊಲೀಸರ ವಾಹನ ಮೇಲೆ ಮುಗುಚಿಬಿದ್ದ ಲಾರಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು ಓರ್ವನಿಗೆ ಗಾಯ
ಕನ್ನಡಪರ ನಿರ್ಣಯಕ್ಕೆ ಮುಂದಾದ ಶಾಸಕ ಸೇಠ್ ಗೆ ಎಚ್ಚರಿಕೆ, ಗೊಡ್ಡು ಬೆದರಿಕೆ ಹಾಕಿದ ಝಫಾ ಮುಖಂಡ
ಸಿಸಿಬಿ ಪೊಲೀಸರ ದಾಳಿ: 10.31 ಲಕ್ಷ ಮೌಲ್ಯದ ಹೆರಾಯಿನ್, ವಸ್ತುಗಳ ವಶ ; ಮೂವರ ಬಂಧನ
ಎರಡು ಗುಂಪುಗಳ ನಡುವೆ ಮಾರಕಾಸ್ತ್ರ, ಕಬ್ಬಿನದ ರಾಡ್ ಗಳಿಂದ ಹೊಡೆದಾಟ : ವಿಡಿಯೋ ವೈರಲ್ 