ಶಾಂತಿಯುತವಾಗಿ ಬಕ್ರೀದ್ ಹಬ್ಬ ಆಚರಿಸಿ: ರಾಘವೇಂದ್ರ

ಲೋಕದರ್ಶನ ವರದಿ

ಕುಕನೂರು 04:  ಪಟ್ಟಣದ  ಪೋಲಿಸ್ ಠಾಣೆಯಲ್ಲಿ ನಡೆದ ಬಕ್ರೀದ್ ಶಾಂತಿ ಸಭೆಯಲಿ ್ಲಪಿಎಸ್ಐ  ಜಿ. ಎಸ್, ರಾಘವೇಂದ್ರ  ಮಾತನಾಡಿ  ಬಕ್ರೀದ್ ಹಬ್ಬವನ್ನು ಆಚರಣೆ ಮಾಡುವ ವೇಳೆ ಶಾಂತಿ, ಸೌಹಾರ್ದತೆ ಕಾಪಾಡಬೇಕು ಎಂದು ಹೇಳಿದರು. ಅ. 12ರಂದು ಬಕ್ರೀದ್ ಹಬ್ಬವನ್ನು  ಎಲ್ಲಾ ಸಮುದಾಯದವರು  ಕೈ ಜೋಡಿಸಿ ಆಚರಣೆ ಮಾಡಬೇಕು ಎಂದು ಸಭೆಗೆ ಆಗಮಿಸಿದ ಸಾರ್ವಜನಿಕರಿಗೆ ಮನವಿರಿಕೆ ಮಾಡಿದರು. 

ಈ ಸಂದರ್ಭದಲ್ಲಿ ಅನ್ನಧಾನೇಶ್ವರ ಮಠದ ಮಹದೇವ ದೇವರು ಸಾನಿದ್ಯ ವಹಿಸಿದ್ದರು. ರಾಮಣ್ಣ ಬಂದಮನಿ, ರೆಹಮನ್ ಸಾಬ ಮುಕ್ಕಪ್ಪನವರು, ಹನುಮಂತಪ್ಪ ಹಂಪನಾಳ, ರಷೀದ್ ಸಾಬ್ ವಣಗೇರಿ, ಶರಣಪ್ಪ ಸಿದ್ದಯ್ಯ ಕಳ್ಳಿಮನಿ, ಲಕ್ಷ್ಮಣ್ಣ ಕಾಳಿ, ಇದ್ದರು.