ಲೋಕದರ್ಶನ ವರದಿ
ಕೊಪ್ಪಳ 13: ಸ್ವಚ್ಛತೆ ಬಗ್ಗೆ ಪ್ರತಿಯೊಂದು ಕುಟುಂಬಜಾಗೃತಿ ವಹಿಸಿದರೆ ಆರೋಗ್ಯವಂತರಾಗಿ ಸುಖ ಶಾಂತಿ ನೆಮ್ಮದಯಿಂದ ಬದುಕಲು ಇರಂತರ ಸ್ವಚ್ಚತೆಯನ್ನು ಕಾಪಾಡುವುದು ನಮ್ಮೆಲ್ಲರ ಉದ್ದೇಶವಾಗಿದೆ. ಮನುಷ್ಯನ ಜೀವನದಲ್ಲಿ ಸ್ವಚ್ಛತೆ ಇದ್ದರೆ, ಶಾಂತಿ ನೆಮ್ಮದಿಯ ಬದುಕು ಕಟ್ಟುಕೊಳ್ಳಲು ಸಾಧ್ಯ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹೈ.ಕಾ.ಪ್ರಾದೇಶಿಕ ವಿಭಾಗದ ನಿದೇರ್ಶಕ ಪುರುಷೋತ್ತಮ ಪಿ.ಕೆ.ರವರು ಹೆಳಿದರು.
ಅವರು ನಗರದ ಕಾವ್ಯಾನಂದ ನಂದನವನ ಪಾರ್ಕ ಆವರಣದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಹಾಗೂ ಕೊಪ್ಪಳ ನಗರಸಭೆ ಇವರ ಸಂಯುಕ್ತಾಶ್ರಯದಲ್ಲಿ ಧಾಮರ್ಿಕ ಶ್ರಧ್ದಾ ಕೇಂದ್ರಗಳು ಮತ್ತು ಮನೆ-ಮನದಲ್ಲಿ ಸ್ವಚ್ಚತೆಯ ಬಗ್ಗೆ ಅರಿವು ಮೂಡಿಸುವ ಜಿಲ್ಲಾ ಮಟ್ಟದ ಸ್ವಚ್ಚತಾ ಸಪ್ತಾಹದ ಉದ್ಘಾಟನೆ ನೆರೆವೆರಿಸಿ ಮಾತನಾಡಿದರು.
ಅವರು ಎಲ್ಲಾ ರೋಗಗಳ ಮೂಲ ಅಸ್ವಚ್ಚತೆಯಾಗಿದೆ, ಪ್ರತಿಯೊಬ್ಬರು ತಮ್ಮ ಪರಿಸರ ಸ್ವಚ್ಚವಾಗಿಡಬೇಕು ಹಾಗೂ ಮನೆಯ ಅಕ್ಕಪಕ್ಕದವರಿಗೆ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಬೇಕು, ಮನೆಗೊಂದು ಮರ ಬೇಳೆಸಿ ನಗರವನ್ನು ನಂದನವನವನ್ನಾಗಿ ಮಾಡಲುಶ್ರಮಿಸಬೇಕು. ನೀರು ಅಮೂಲ್ಯವಾದದ್ದು ಇದನ್ನು ಮಿತವಾಗಿ ಬಳಸಬೇಕು, ಇಂದಿನ ದಿನಮಾನಗಳಲ್ಲಿ ನಾವು ನೈಸಗರ್ಿಕವಾಗಿರುವ ನದಿಗಳುನ್ನು ಅತಿಕ್ರಮಣ ಮಾಡಿಕೊಂಡಿರುವುದರಿಂದ ಪರಿಸರ ವಿಕೊಪ ದಿಂದ ನೆರೆಹಾವಳೀಗೆ ತುತ್ತಾಗಿದ್ದೇವೆ, ಪ್ಲಾಸ್ಟಿಕ್ ಬಳಕೆ ತೆಡಗಟ್ಟಬೇಕು, ಧಾಮರ್ಿಸ್ಥಳಗಳನ್ನು ಸ್ವಚ್ಚವಾಗಿಡಬೇಕು. ಇಂದಿನ ದಿನಮಾನಗಳಲ್ಲಿ ಮನುಷ್ಯನೇ ಪರಿಸರ ಹಾಳು ಮಾಡುವ ಕೆಲಸಕ್ಕೆ ಕೈ ಹಾಕಿದ್ದಾನೆ, ಸ್ವಾರ್ಥ ಬಿಟ್ಟು ನಿಸ್ವಾರ್ಥದ ಸೇವೆ ಇಂದಿನ ಅಗತ್ಯವಾಗಿದೆ. ಮನುಷ್ಯ ಇಂದು ಪರಿಸರದ ಬಗ್ಗೆ ಕಾಳಜಿ ಬಿಟ್ಟರಿರುವುದರಿಂದ ಬರಗಾಲ ಎದುರಾಗಿದೆ. ಇದರ ಬಗ್ಗೆ ಜಾಗೃತಿ ವಹಿಸಿ ಪರಿಸರ ಕಾಪಡುವುದರ ಜೋತೆಗೆ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸಕ್ಕೆ ಆದ್ಯತೆ ನೀಡಬೇಕೆಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಹೈ.ಕಾ.ಪ್ರಾದೇಶಿಕ ವಿಭಾಗದ ನಿದೇರ್ಶಕ ಪುರುಷೋತ್ತಮ ಪಿ.ಕೆ.ರವರು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ನಗರಸಭೇಯ ಪೌರಾಯುಕ್ತ ಸುನಿಲ್ ಪಾಟೀಲ್ ವಹಿಸಿದ್ದರು. ಪರಿಸರ ಅಭಿಯಂತ ಅಶೋಕ ಮತ್ತು ನ್ಯಾಯವಾಧಿ ಕೆ.ಹನುಮಂತರಾವ್ರವರು ಸ್ವಚ್ಚತೆ ಬಗ್ಗೆ ಮಾತನಾಡಿದರು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಹೆಚ್.ಎಲ್. ಮುರಳಿಧರ ಸ್ವಗತಿಸಿ ಪ್ರಸ್ತಾವಿಕವಾಘಿ ಮಾತನಾಡಿ ಧಾಮರ್ಿಕ ಸ್ಥಳಗಳ ಸ್ವಚ್ಛತೆ ಬಗ್ಗೆ ನಮ್ಮ ಸಂಸ್ಥೆಗೆ ರಾಷ್ಠ್ರಮಟ್ಟದಲ್ಲಿ ಪ್ರಶಸ್ತಿ ಲಭಿಸಿದೆ ಎಂದರು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಯೋಜನಾಧಿಕಾರಿ ಸುರೇಂದ್ರ ನಾಯಕ ಕಾರ್ಯಕ್ರಮ ನೀರುಪಿಸಿದರು, ರಾಜಶ್ರೀ ಮತ್ತು ಪದ್ಮಾವತಿ ಪ್ರಾರ್ಥಿಸಿದರು, ನಾಲ್ಕು ಜನ ಹಿರಿಯ ಪೌರ ಕಾಮರ್ಿಕರಿಗೆ ಸನ್ಮಾನಿಸಲಾಯಿತು. ಮತ್ತು ಧಾರ್ಮಿಕ ಸ್ಥಳಗಳ ಸಮಿತಿಯ ಮುಖ್ಯಸ್ಥರಿಗೆ ಸ್ವಚ್ಚತೆಯ ಸಾಮಗ್ರಿ ವಿತರಿಸಲಾಯಿತು. ಯೋಜನಾಧಿಕಾರಿ ಮಂಜುನಾಥ ಕೊನೆಯಲ್ಲಿ ವಂದಿಸಿದರು.