ಗೀತಾ ಸಂದೇಶ ಜಗತ್ತಿಗೆ ಶಾಂತಿಯ ಪಾಠ: ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು

ಧಾರವಾಡ 05: ಸಂಸ್ಕೃತ ಕನ್ನಡ ಭಾಷೆಯ ತಾಯಿ ಇದ್ದಂತೆ. ಭಗವದ್ಗೀತಾ ಪಠಣದಿಂದ ಏಕಾಗ್ರತೆ ಸಾಧಿಸಬಹದುದು. ನಾವು ಸೇವಿಸುವ ಆಹಾರವನ್ನು ದೇವರಿಗೆ ಅರ್ಪಣೆ ಎಂದು ಸೇವಿಸಿದರೆ ಆನಂದವೇ ಬೇರೆ. ನಾವು ಮಾಡುವ ಎಲ್ಲ ಕೆಲಸಗಳು ದೇವರಿಗೆ ಸರ್ವಪಿತ ಎಂದಾಗ ಮಾನವ ಮಾಡುವ ಅರ್ಧದಷ್ಟು ಪಾಪ ಕಾರ್ಯಗಳು ನಿಲ್ಲುತ್ತವೆ. ಕಂಡಿದ್ದೆಲ್ಲವೂ ಸತ್ಯವಲ್ಲ ಕಾಣದ್ದೆಲ್ಲ ಮಿಥ್ಯವಲ್ಲ ಎಂದು ಶಿರಸಿಯ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದ ಮಜ್ಜಗದ್ಗುರು ಶಂಕರಾಚಾರ್ಯ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಹೇಳಿದರು.

ಭಗವದ್ಗೀತಾ ಅಭಿಯಾನ ಕನರ್ಾಟಕ, ಧಾರವಾಡ ಜಿಲ್ಲೆ, ಸರ್ವಜ್ಞೇಂದ್ರ ಸರಸ್ವತೀ ಪ್ರತಿಷ್ಠಾನ ಶಿರಸಿ, ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನ ಶಿರಸಿ (ಉ.ಕ) ಹಾಗೂ ಜೆ.ಎಸ್.ಎಸ್ ಸಮೂಹ ಶಿಕ್ಷಣ ಸಂಸ್ಥೆಗಳು, ವಿದ್ಯಾಗಿರಿ, ಧಾರವಾಡ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಗೀತಾ ಸಂದೇಶ ಸಪ್ತಾಹವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು. 

ವಾಚಸ್ಪತಿ ಶಾಸ್ತ್ರೀಯವರು ಮಾತನಾಡಿ ದ್ವಂದ್ವ ಭಾವನೆಗಳನ್ನು ಹೊಂದಿರುವ ನಾವು ಸಂಸಾರವೆಂಬ ಸಮುದ್ರದಲ್ಲಿ ದಡ ಸೇರಲಾರದೇ ಒದ್ದಾಡುತ್ತಿದ್ದೇವೆ. ಒಂದೇ ದೃಷ್ಟಿಯಿಂದ ದೇವನನ್ನು ನೆನೆದರೆ ಮೋಕ್ಷ ಸಾಧ್ಯವೆಂಬುದನ್ನು ನಮ್ಮ ಪುರಾಣಗಳು ಶಾಸ್ತ್ರಗಳು, ವೇದಗಳು ಹೇಳಿವೆ. ಭಗವದ್ಗೀತಾ ಕೇವಲ ಗೀತೆ ಅಲ್ಲ ಅದು ಜೀವನದ ಸಾರ ಎಂದು ಗೀತಾ ಸಂದೇಶವನ್ನು ನೀಡಿದರು.

ಶ್ರೀಮಂತ ಸಂಸ್ಕೃತಿ ಹೊಂದಿದ ದೇಶ. ಭಾರತ ಪಾಶ್ಚಿಮಾತ್ಯ ಸಂಸ್ಕೃತಿಯಿಂದ ಅಶಾಂತಿ, ಅನ್ಯಾಯ ಹೆಚ್ಚಾಗುತ್ತಿದೆ ಮರಳಿ ಭಾರತ ಮತ್ತೆ ಶಾಂತಿಯ ನಾಡಾಗಬೇಕಾದರೇ ಗೀತಾ ಸಂದೇಶ ಅತಿ ಅವಶ್ಯ ಎಂದು ಸಮಾರಂಭದ ಅತಿಥಿಗಳಾಗಿ ಆಗಮಿಸಿದ ಜೆ.ಎಸ್.ಎಸ್ನ ವಿತ್ತಾಧಿಕಾರಿ ಡಾ. ಅಜಿತ ಪ್ರಸಾದರವರು ಹೇಳಿದರು. 

ಅಧ್ಯಕ್ಷತೆ ವಹಿಸಿದ್ದ ಜೆ.ಎಸ್.ಎಸ್ನ ಕಾರ್ಯದಶರ್ಿ ಡಾ. ನ. ವಜ್ರಕುಮಾರ ಮಾತನಾಡಿ ಈ ರೀತಿಯ ಗೀತಾ ಸಂದೇಶ ಈಗೀನ ವಿದ್ಯಾಥರ್ಿಗಳಿಗೆ ದೊರೆಯುವುದು ಅಪರೂಪ. ವಿದ್ಯಾಥರ್ಿಗಳಿಗೆ ನೈತಿಕ ಬಲ ತುಂಬಲು ಇದು ಬಹು ಸಹಕಾರಿಯಾಗಿದೆ. ಈ ಗೀತಾ ಸಾರದ ಮೇಲೆಯೇ ಇಡಿ ಜಗತ್ತೆ ನಿಂತಿದೆ ಎಂದರು.

ಆರಂಭದಲ್ಲಿ ವೇದಘೋಷ ಮೋಳಗಿತು, ಮಹಾವೀರ ಉಪಾದ್ಯೆ ಸ್ವಾಗತಿಸಿದರು. ವಿ.ಎಮ್ ಭಟ್ ನಿರೂಪಿಸಿದರು. ವಿ.ಜಿ ಭಟ್ ವಂದಿಸಿದರು. ಸೂರಜ್ ಜೈನ್, ಜಿನೇಂದ್ರ ಕುಂದಗೋಳ ಇನ್ನಿತರರು ಉಪಸ್ಥಿತರಿದ್ದರು.