ಬೆಳಗಾವಿ 14: ಸಕ್ಕರೆ ಕಾಖರ್ಾನೆಗಳು ಕಳೆದ ಬಾರಿ ಘೋಷಿಸಿರುವ ದರದ ಪ್ರಕಾರವೇ ರೈತರ ಬಿಲ್ ಹದಿನೈದು ದಿನಗಳಲ್ಲಿ ಕಡ್ಡಾಯವಾಗಿ ಪಾವತಿಸಬೇಕು ಹಾಗೂ ಈ ವರ್ಷ ಕಬ್ಬು ನುರಿಸುವ ಸಂದರ್ಭದಲ್ಲಿಯೇ ಎಫ್. ಆರ್.ಪಿ. ಪ್ರಕಾರ ದರ ಕಡ್ಡಾಯವಾಗಿ ಪ್ರಕಟಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಬುಧವಾರ (ನ.14) ನಡೆದ ಜಿಲ್ಲೆಯ ಸಕ್ಕರೆ ಕಾಖರ್ಾನೆಗಳ ಆಡಳಿತ ಮಂಡಳಿಯ ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಎಫ್ ಆರ್ ಪಿ ದರ ಪಾವತಿ ಕಡ್ಡಾಯ:
ಸಕರ್ಾರ ಪ್ರಕಟಿಸಿರುವ ಎಫ್.ಆರ್.ಪಿ ದರವನ್ನೇ ನೀಡುವುದಾಗಿ ಜಿಲ್ಲೆಯ ಎಲ್ಲ ಕಾಖರ್ಾನೆಗಳು ಇಂದೇ(ನ.14) ಘೋಷಿಸಬೇಕು. ಒಂದು ವೇಳೆ ಹೆಚ್ಚಿನ ದರ ನೀಡುವುದಾದರೆ ತಾವು ಘೋಷಿಸಿದ ಪ್ರಕಾರವೇ ಕಡ್ಡಾಯವಾಗಿ ನೀಡಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.
ಯಾವುದೇ ಕಾರಣಕ್ಕೂ ಎಫ್.ಆರ್.ಪಿ. ಗಿಂತ ಕಡಿಮೆ ನೀಡಬಾರದು ಎಂದರು. ಕಾಖರ್ಾನೆಗಳು ಎಫ್.ಆರ್.ಪಿ. ಗಿಂತ ಹೆಚ್ಚಿನ ದರ ಪ್ರಕಟಿಸುವುದಕ್ಕೆ ಸಕರ್ಾರದ ಆಕ್ಷೇಪಣೆ ಇಲ್ಲ. ಆದರೆ ಕಾಖರ್ಾನೆ ಆರಂಭದಲ್ಲಿ ಒಮ್ಮೆ ಪ್ರಕಟಿಸುವ ದರದ ಪ್ರಕಾರವೇ ಎಲ್ಲ ರೈತರಿಗೂ ಬಿಲ್ ಪಾವತಿಸಬೇಕು ಎಂದು ಜಿಲ್ಲಾಧಿಕಾರಿ ಬೊಮ್ಮನಹಳ್ಳಿ ಸೂಚನೆ ನೀಡಿದರು.
ನಿಯಮಾವಳಿ ಪ್ರಕಾರ ಕಬ್ಬು ಪೂರೈಸಿದ ಹದಿನಾಲ್ಕು ದಿನಗಳಲ್ಲಿ ಬಿಲ್ ಪಾವತಿಸಬೇಕು. ಒಂದು ವೇಳೆ ತಪ್ಪಿದಲ್ಲಿ ಶೇ.15 ಬಡ್ಡಿದರದ ಸಮೇತ ಪಾವತಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕಾಖರ್ಾನೆಗಳು ಮೊದಲು ಜಾಸ್ತಿ ದರ ಪ್ರಕಟಿಸಿ ನಂತರದ ದಿನಗಳಲ್ಲಿ ಕಡಿಮೆ ಹಣ ಪಾವುತಿಸುವುದರಿಂದ ರೈತರಿಗೆ ಅನ್ಯಾಯ ಆಗುತ್ತಿದೆ. ಕಾಖರ್ಾನೆಗಳು ಇದನ್ನು ಅರಿತುಕೊಂಡು ವ್ಯವಹರಿಸಬೇಕು. ತಾವು ಪ್ರಕಟಿಸಿದ ಪ್ರಕಾರವೇ ಬಿಲ್ ಪಾವತಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಕಾಖರ್ಾನೆ ಆಡಳಿತ ಮಂಡಳಿಯವರು ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ರೈತ ಮುಖಂಡರ ಜತೆ ಚಚರ್ಿಸಿ ದರ ಪ್ರಕಟಿಸಬೇಕು ಎಂದು ಸಲಹೆ ನೀಡಿದರು.
ತೂಕಯಂತ್ರ ಪರಿಶೀಲನೆಗೆ ಸೂಚನೆ:
ಜಿಲ್ಲೆಯ ಎಲ್ಲ ಕಾಖರ್ಾನೆಗಳ ಕಬ್ಬು ಖರೀದಿ ಮತ್ತು ಸಕ್ಕರೆ ಮಾರಾಟದ ತೂಕಯಂತ್ರಗಳನ್ನು ಒಂದು ವಾರದೊಳಗೆ ಪರಿಶೀಲಿಸಿ ವರದಿ ನೀಡಬೇಕು ಎಂದು ತೂಕ ಮತ್ತು ಅಳತೆ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಬೊಮ್ಮನಹಳ್ಳಿ ಸೂಚನೆ ನೀಡಿದರು.
ದೂಧಗಂಗಾ ಕಾಖರ್ಾನೆಯು ಕಳೆದ ವರ್ಷ ಪ್ರತಿ ಟನ್ ಕಬ್ಬಿಗೆ 2900 ದರ ಘೋಷಣೆ ಮಾಡಿತ್ತು. ಆದರೆ ನಂತರದ ದಿನಗಳಲ್ಲಿ ಕಡಿಮೆ ದರ ಪಾವತಿ ಮಾಡಿರುವ ಬಗ್ಗೆ ಪ್ರಶ್ನಿಸಿದ ಜಿಲ್ಲಾಧಿಕಾರಿಗಳು, ವ್ಯತ್ಯಾಸವಾಗಿರುವ ಬಿಲ್ ಅನ್ನು ತಕ್ಷಣ ಪಾವತಿಸಬೇಕು ಎಂದು ಸೂಚನೆ ನೀಡಿದರು.
ಕಾಖರ್ಾನೆಯ ಆಡಳಿತ ಮಂಡಳಿಯ ಗಮನಕ್ಕೆ ತರುವುದಾಗಿ ಪ್ರತಿನಿಧಿ ತಿಳಿಸಿದರು. ಏನೇ ಆದರೂ ರೈತರಿಗೆ ತಾವು ಘೋಷಿಸಿರುವಂತೆಯೇ ಬಿಲ್ ಪಾವತಿಸಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.
ಘಟಪ್ರಭಾ 3000 ದರ ಘೋಷಣೆ ಮಾಡಿತ್ತು. ಅದೇ ಪ್ರಕಾರ ಪಾವತಿಸಲಾಗಿದೆ ಎಂದು ಕಾಖರ್ಾನೆಯ ಪ್ರತಿನಿಧಿ ತಿಳಿಸಿದರು.
ಹಾಲಸಿದ್ಧನಾಥ ಕಾಖರ್ಾನೆಯು 3151 ದರ ಘೋಷಣೆ ಮಾಡಿಯೂ ನಂತರ 2500 ದರ ನೀಡಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ, ಘೋಷಣೆ ಮಾಡಿದ ದರವೇ ನೀಡುವಂತೆ ತಿಳಿಸಿದರು.
ಸೋಮೇಶ್ವರ ಕಾಖರ್ಾನೆಯು 2600 ದರ ಪ್ರಕಟಿಸಿತ್ತು. ಅದೇ ಪ್ರಕಾರ ನೀಡಲಾಗುತ್ತಿದ್ದು, 1.32 ಕೋಟಿ ಬಾಕಿ ಉಳಿದಿದೆ. ಶೀಘ್ರದಲ್ಲೇ ಬಾಕಿ ಪಾವತಿಸುವುದಾಗಿ ಪ್ರತಿನಿಧಿ ಹೇಳಿದರು.
ಸತೀಶ್ ಶುಗರ್ಸ ಕಳೆದ ಬಾರಿ ಎಫ್.ಆರ್. ಪಿ. ಪ್ರಕಾರ ನೀಡಲಾಗಿದೆ ಎಂದು ತಿಳಿಸಿದರು. ಉಗಾರ್ ಶುಗರ್ಸ ಎಫ್.ಆರ್.ಪಿ. ಗಿಂತ ಹೆಚ್ಚಿನ ದರ ಪಾವತಿಸಲಾಗಿದೆ. ಈ ಬಾರಿ ಇನ್ನೂ ಕಬ್ಬು ನುರಿಸುವಿಕೆ ಆರಂಭಿಸಿಲ್ಲ. ಆರಂಭಿಸುವ ಮುಂಚೆಯೇ ದರ ಪ್ರಕಟಿಸಲಾಗುವುದು ಎಂದು ಪ್ರತಿನಿಧಿ ತಿಳಿಸಿದರು.
ಈ ಬಾರಿ ಎಫ್.ಆರ್.ಪಿ. ಪ್ರಕಾರವೇ ದರ ಪಾವತಿಸುವುದಾಗಿ ಇಂದೇ ಪ್ರಕಟಿಸಿ ನೋಟಿಸ್ ಬೋಡರ್ಿನಲ್ಲಿ ಪ್ರದಶರ್ಿಸುವುದಾಗಿ ಬಹುತೇಕ ಕಾಖರ್ಾನೆಗಳ ಪ್ರತಿನಿಧಿಗಳು ಜಿಲ್ಲಾಧಿಕಾರಿಗಳಿಗೆ ಭರವಸೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಎಚ್.ಸುಧೀರಕುಮಾರ್ ರೆಡ್ಡಿ, ಪ್ರೊಬೇಷನರಿ ಐ.ಎ.ಎಸ್. ಅಧಿಕಾರಿ ಭವಾನಿಸಿಂಗ್ ಮೀನಾ, ಡಿಸಿಪಿ ನಂದಗಾಂವಿ, ಚಿಕ್ಕೋಡಿ, ಬೆಳಗಾವಿ ಉಪ ವಿಭಾಗಾಧಿಕಾರಿಗಳು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿದರ್ೇಶಕರಾದ ಸಯೀದಾ ಆಫ್ರೀನ್ ಬಾನು ಬಳ್ಳಾರಿ ಮತ್ತು ರೈತ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.