ನಗರದಲ್ಲಿ ಯುಜಿಡಿ ಯೋಜನೆ ಸಂಪೂರ್ಣ ಕಳಪೆಯಾಗಿದೆ ಪವನ್.ವಡ್ಡರ ಖಂಡನೆ
ಬ್ಯಾಡಗಿ 09 : ಪಟ್ಟಣದಲ್ಲಿ ಯುಜಿಡಿ ಯೋಜನೆಯ ಪ್ರಾರಂಭಗೊಂಡಿರುವ ವಿವಿಧ ಕಾಮಗಾರಿಗಳು ಸಂಪೂರ್ಣವಾಗಿ ಕಳಪೆಯಾಗಿದೆ ಕೂಡಲೇ ಕಾಮಗಾರಿ ಗುಣಮಟ್ಟವನ್ನು ಪರೀಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಇಲ್ಲವಾದರೆ ಪುರಸಭೆಗೆ ಬೀಗ ಹಾಕಿ ಅನಧಿಷ್ಟವಾದ ಧರಣಿ ನಡೆಸಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆ ಗಜ ಸೇನೆಯ ಬ್ಯಾಡಗಿ ಘಟಕದ ಅಧ್ಯಕ್ಷರಾದ ಪವನ್ ವಡ್ಡರ್ ತಿಳಿಸಿದರು.ಇಂದು ಪಟ್ಟಣದ ಪುರಸಭೆಯ ಕಾರ್ಯಾಲಯದ ಎದುರಿಗೆ ಪ್ರತಿಭಟನೆ ಮಾಡುವ ಮೂಲಕ ಕಂದಾಯ ಅಧಿಕಾರಿ ಕಿರಣ್ ಅವರಿಗೆ ಮನವಿ ಪತ್ರ ನೀಡುವ ಮೂಲಕ ಮಾತನಾಡಿದ ಅವರು ಬ್ಯಾಡಗಿ ನಗರವು ಅಂತರಾಷ್ಟ್ರೀಯ ಮಟ್ಟದಲ್ಲಿ ತನ್ನದೇ ಆದ ರೀತಿಯಲ್ಲಿ ಹೆಸರು ಮಾಡಿದೆ ಆದರೆ ನಗರದ ಸ್ವಚ್ಛತೆ ಹಾಗೂ ಅಭಿವೃದ್ಧಿ ಸೇರಿದಂತೆ ಅನೇಕ ವಿಷಯಗಳು ಸ್ಥಳೀಯವಾಗಿ ಹಿಂದೆ ಬಿದ್ದಿವೆ ಇದಕ್ಕೆ ಕಾರಣ ತಮ್ಮಂತ ಅಧಿಕಾರಿಗಳ ದಿವ್ಯ ನಿರ್ಲಕ್ಷದಿಂದ ಎಂದು ತಪ್ಪಾಗಲಾರದು ನಗರದ ಬೆಟ್ಟದ ಮಲ್ಲೇಶ್ವರ ನಗರದಲ್ಲಿ ಪುರಸಭೆಗೆ ಸಂಬಂಧಿಸಿದ ಜಾಗೆಯಲ್ಲಿ ಅನೇಕರು ಅನಧಿಕೃತವಾಗಿ ಮನೆಗಳನ್ನು ನಿರ್ಮಾಣ ಮಾಡುತ್ತಿದ್ದಾರೆ ತಮ್ಮ ಮೌನವೇ ಇದಕ್ಕೆ ಸಾಕ್ಷಿಯಾಗಿದ್ದು ಅಲ್ಲಿ ತಾವು ಫಲಾನುಭವಿಗೆ ಹಂಚಿಕೆ ಮಾಡಿದ ಮನೆಗಳಲ್ಲಿ ಅದೆಷ್ಟು ಕುಟುಂಬಗಳು ಇನ್ನುವವರಿಗೆ ವಾಪಸ್ ಆಗಿಲ್ಲ ಮತ್ತು ಈಗ ವಾಸ ಮಾಡುತ್ತಿರುವ ಕುಟುಂಬಗಳಿಗೆ ಸರಿಯಾದ ಕುಡಿಯುವ ನೀರು ಮತ್ತು ರಸ್ತೆ ಚರಂಡಿ ವ್ಯವಸ್ಥೆ ಆಗದೆ ಇರುವುದು ಅಲ್ಲಿರೋ ಬಡ ಜನರ ದುರಾದೃಷ್ಟಕರವಾಗಿದೆ ಕೂಡಲೇ ಅಧಿಕಾರಿಗಳು ಅಲ್ಲಿರುವ ಕುಟುಂಬಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಮತ್ತು ತಮಗೆ ಸಂಬಂಧಿಸಿದ ಜಾಗವನ್ನು ಅತಿಕ್ರಮಣ ಮಾಡಿದವರ ವಿರುದ್ಧ ನಿರ್ಧಾಕ್ಷಣೈವಾಗಿ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಮಂಜುನಾಥ್ ಓಲೆಕಾರ್. ಪುಟ್ಟಪ್ಪ ಹಿತ್ತಲಮನಿ. ಚಂದ್ರಶೇಖರ್ ಗದಗ್ ಕರ್. ಫಕೀರೇಶ ಕಟ್ಟಿಮನಿ. ಲಕ್ಷ್ಮಿ ಕದರಮಂಡಲಗಿ. ಕುಮಾರ್ ಸುಳ್ಳಣ್ಣನವರ್. ಪರಿಧಾಬಾನು ನದಿಮುಲ್ಲಾ. ಪ್ರಕಾಶ್ ಬಣಕಾರ್. ಮೆಹಬೂಬಿ ಹಿತ್ತಲಮನಿ. ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.